ಗಣೇಶ ಹಬ್ಬದಲ್ಲೂ ಬಾವ, ಗುರೂಜಿ ಕ್ರೇಜ್! – ಗಣಪತಿ ಮೆರವಣಿಗೆಯಲ್ಲಿ ಸು ಫ್ರಮ್ ಸೋ ಸಿನಿಮಾದ ಪಾತ್ರಗಳು!

ರಾಜ್ ಬಿ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಸು ಫ್ರಮ್ ಸೋ ಸಿನಿಮಾ ಅಬ್ಬರ ಇನ್ನೂ ನಿಂತಿಲ್ಲ.. ಬಾಕ್ಸ್ ಆಫೀಸ್ನಲ್ಲೂ ದಾಖಲೆ ಬರೆದಿದೆ ಈ ಸಿನಿಮಾ. ಇದೀಗ ಶೆಟ್ರ ಸಿನಿಮಾ ಗಣೇಶ ಹಬ್ಬದಲ್ಲೂ ಸೌಂಡ್ ಮಾಡ್ತಿದೆ. ಇದೀಗ ಬಾವ ಗಣೇಶ ಹಬ್ಬದ ಮೆರವಣಿಗೆಯಲ್ಲೂ ಕಾಣಿಸಿಕೊಂಡಿದ್ದಾರೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಕಾಲ್ತುಳಿತ ಪ್ರಕರಣ – ಮೃತಪಟ್ಟವರ ಕುಟುಂಬಗಳಿಗೆ ತಲಾ ₹ 25 ಲಕ್ಷ ಪರಿಹಾರ ನೀಡಿದ ಆರ್ಸಿಬಿ ಫ್ರಾಂಚೈಸಿ!
ಜುಲೈ 25ರಂದು ರಿಲೀಸ್ ಆದ ಸು ಫ್ರಮ್ ಸೋ ಸಿನಿಮಾ ಈಗಾಗಲೇ ವಿಶ್ವ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರವನ್ನು ಸಾಕಷ್ಟು ಜನರು ಇಷ್ಟಪಟ್ಟಿದ್ದಾರೆ. ಜನರ ಕಡೆಯಿಂದ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಸಿನಿಮಾದ ಪಾತ್ರಗಳು ಇನ್ನೂ ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ಇದಕ್ಕೆ ಸಾಕ್ಷಿ ವೈರಲ್ ಆದ ವಿಡಿಯೋ.. ಇದೀಗ ಸು ಫ್ರಮ್ ಸೋ ಸಿನಿಮಾದ ಪಾತ್ರಗಳ ಗೊಂಬೆಗಳು ಗಣೇಶ ಹಬ್ಬದಲ್ಲಿ ಕಾಣಿಸಿಕೊಂಡಿವೆ.
ಹೌದು, ಸು ಫ್ರಮ್ ಸೋ ಈ ಚಿತ್ರದಲ್ಲಿ ಬಾವ, ಗುರೂಜಿ ಹಾಗೂ ಅಶೋಕ ಪಾತ್ರಗಳು ಹೈಲೈಟ್ ಆಗಿದ್ದವು. ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಬಂದರೋ ಬಂದರೋ ಬಾವ ಬಂದರೋ ಸಾಂಗ್ ಟ್ರೆಂಡ್ ಸೆಟ್ ಮಾಡಿದೆ. ಇದೀಗ ಕರಾವಳಿಯಲ್ಲಿ ಗಣೇಶ ಚತುರ್ಥಿ ಕಾರ್ಯಕ್ರಮದಲ್ಲಿ ಬಾವ, ಗುರೂಜಿ ಹಾಗೂ ಅಶೋಕನ ಪಾತ್ರಗಳು ಎಂಟ್ರಿಕೊಟ್ಟಿವೆ.
‘ಸು ಫ್ರಮ್ ಸೋ’ ಚಿತ್ರದಲ್ಲಿ ಬಾವನ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ಅವನು ಇಡೀ ದಿನ ಮದ್ಯ ಸೇವನೆ ಮಾಡಿಕೊಂಡು ತೂರಾಡುತ್ತಾ ಇರುತ್ತಾನೆ. ಈಗ ಇದನ್ನು ಅನುಕರಿಸಲಾಗಿದ್ದು, ಬಾವನ ಪಾತ್ರ ಅದೇ ರೀತಿಯಲ್ಲಿ ಮೂಡಿ ಬಂದಿದೆ. ಗುರೂಜಿ ಪಾತ್ರ ಕೂಡ ಹಾಗೆಯೇ ಇದೆ. ಇಷ್ಟೇ ಅಲ್ಲ, ಕ್ಲೈಮ್ಯಾಕ್ಸ್ ವೇಳೆ ಅಶೋಕನು ಮುಖಕ್ಕೆ ಅರಿಶಿಣ ಹಚ್ಚಿಕೊಂಡು ಬರುತ್ತಾನೆ. ಇದರಲ್ಲೂ ಅದೇ ರೀತಿಯಲ್ಲಿ ಆಗಮಿಸಲಾಗಿದೆ. ಈ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ.
View this post on Instagram

ನೋಡಿರಿ

