ಬಾಕ್ಸ್‌ ಆಫೀಸ್‌ನಲ್ಲಿ ನಿಲ್ಲದ ‘ಸು ಫ್ರಮ್ ಸೋ’ ಅಬ್ಬರ! – ರಾಜ್‌ ಬಿ ಶೆಟ್ಟಿ ಸಿನಿಮಾ ಗಳಿಸಿದ್ದೆಷ್ಟು?

ಬಾಕ್ಸ್‌ ಆಫೀಸ್‌ನಲ್ಲಿ ನಿಲ್ಲದ ‘ಸು ಫ್ರಮ್ ಸೋ’ ಅಬ್ಬರ! – ರಾಜ್‌ ಬಿ ಶೆಟ್ಟಿ ಸಿನಿಮಾ ಗಳಿಸಿದ್ದೆಷ್ಟು?

ರಾಜ್‌ ಬಿ ಶೆಟ್ಟಿ ನಿರ್ಮಾಣದ ಸು ಫ್ರಮ್‌ ಸೋ ಸಿನಿಮಾ ಪ್ರಚಾರವಿಲ್ಲದೆ ಸಕ್ಸಸ್‌ ಕಂಡಿದೆ. ಪ್ರೇಕ್ಷಕರು ಥಿಯೇಟರ್‌ಗೆ ಬಂದು ಸಿನಿಮಾ ವೀಕ್ಷಿಸ್ತಿದ್ದಾರೆ. ಈ ಚಿತ್ರ ಸಿನಿ ಪ್ರೇಮಿಗಳನ್ನ ನಗೆ ಗಡಲಿನಲ್ಲಿ ತೇಲಿಸಿದ್ದಲ್ಲದೇ ಈಗ ಬಾಕ್ಸ್‌ಆಫೀಸ್‌ನಲ್ಲೂ ದಾಖಲೆ ಬರಿತಾ ಇದೆ. ಇದೀಗ ಸು ಫ್ರಮ್‌ ಸೋ ಸಿನಿಮಾ 50 ಕೋಟಿ ರೂಪಾಯಿ ಬಾಚಿಕೊಂಡಿದೆ.

ಇದನ್ನೂ ಓದಿ: ಹೋಟೆಲ್‌ಗಳಲ್ಲಿ ಕರಿದ ತಿಂಡಿ ತಿನ್ನೋ ಮುನ್ನ ಎಚ್ಚರ – ಸಿಲಿಕಾನ್‌ ಸಿಟಿ ಬೆಂಗಳೂರಿನ ಬಹುತೇಕ ಕಡೆ ಕಳಪೆ ಅಡುಗೆ ಎಣ್ಣೆ ಬಳಕೆ!

ಸು ಫ್ರಮ್‌ ಸೋ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಗೆಲುವು ಕಂಡಿದೆ. ನಿರ್ದೇಶಕ ಜೆಪಿ ತುಮಿನಾಡ ಮೊದಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿದ್ದಾರೆ. ಸು ಫ್ರಮ್ ಸೋ’ ಸಿನಿಮಾ ನೋಡಿದ ಅನೇಕರು ಮೆಚ್ಚಿಕೊಂಡಿದ್ದಾರೆ. ಹಲವರು ಎರಡರಿಂದ ಮೂರು ಬಾರಿ ಸಿನಿಮಾ ವೀಕ್ಷಿಸಿದ್ದಾರೆ. ಈ ಚಿತ್ರದಿಂದ ನಿರ್ಮಾಪಕರು ದೊಡ್ಡ ಲಾಭ ಕಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅನೇಕ ಕಲಾವಿದರ ವೃತ್ತಿ ಜೀವನಕ್ಕೆ ಹೆಚ್ಚು ಮೈಲೇಜ್ ಸಿಕ್ಕಂತೆ ಆಗಿದೆ. ಪ್ರೇಕ್ಷಕರನ್ನ ನಗೆ ಗಡಲಿನಲ್ಲಿ ತೇಲಿಸುತ್ತಾ ಸಮಾಜಕ್ಕೆ ಒಂದೊಳ್ಳೆಯ ಸಂದೇಶ ಕೊಡುವ ಚಿತ್ರ ‘ಸು ಫ್ರಮ್ ಸೋ’. ಈ ಸಿನಿಮಾ ವಿವಿಧ ಹಂತಗಳಲ್ಲಿ ಗಳಿಕೆ ಮಾಡಿದೆ.  ‘ಸು ಫ್ರಮ್ ಸೋ’ ಸಿನಿಮಾ ಮೊದಲ ದಿನ (ಜುಲೈ 25) ಕಲೆಕ್ಷನ್ ಮಾಡಿದ್ದು ಕೇವಲ 78 ಲಕ್ಷ ರೂಪಾಯಿ. ಆ ಬಳಿಕ ಸಿನಿಮಾಗೆ ಶೋಗಳ ಸಂಖ್ಯೆ ಹೆಚ್ಚಿತು. ಜುಲೈ 27ರಿಂದ ಆಗಸ್ಟ್ 5ರವರೆಗೆ ಸಿನಿಮಾ ನಿರಂತರವಾಗಿ 3+ ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವುದು ಚಿತ್ರದ ಹೆಚ್ಚುಗಾರಿಕೆ. ಆಗಸ್ಟ್ 6ರಂದು ಸುಮಾರು ಎರಡೂವರೆ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.  ಈ ಸಿನಿಮಾದ ಕಲೆಕ್ಷನ್ ಅನೇಕರಿಗೆ ಅಚ್ಚರಿ ತಂದಿದೆ. ಕನ್ನಡ ಸಿನಿಮಾ ನೋಡೋಕೆ ಪ್ರೇಕ್ಷಕರಿಲ್ಲ ಎಂದು ಬೇಸರ ಪಟ್ಟುಕೊಳ್ಳುತ್ತಿದ್ದವರು, ಈಗ ಟಿಕೆಟ್ ಸಿಗುತ್ತಿಲ್ಲ ಎಂದು ಒದ್ದಾಡುವ ಸ್ಥಿತಿ ನಿರ್ಮಾಣ ಆಗಿದೆ.

‘ಸು ಫ್ರಮ್ ಸೋ’ ಸಿನಿಮಾ ಈವರೆಗೆ 55 ಕೋಟಿ ರೂಪಾಯಿಗೂ ಅಧಿ ಕಲೆಕ್ಷನ್ ಮಾಡಿದೆ ಎಂದು sacnilk ವರದಿ ಹೇಳಿದೆ. ಕನ್ನಡ ಒಂದರಿಂದಲೇ ಚಿತ್ರಕ್ಕೆ ಸರಿ ಸುಮಾರು 50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ. ವಿದೇಶದಿಂದ ಸಿನಿಮಾಗೆ 4 ಕೋಟಿ ರೂಪಾಯಿ ಹರಿದು ಬಂದಿದೆ. ಮಲಯಾಳಂ ಭಾಷೆಯಿಂದ 1.35 ಕೋಟಿ ರೂಪಾಯಿ ಗಳಿಕೆ ಆಗಿದೆ. ಸಿನಿಮಾದ ಒಟ್ಟಾರೆ ಕಲೆಕ್ಷನ್ ಎಷ್ಟಾಗುತ್ತದೆ ಎಂಬ ಕುತೂಹಲ ಮೂಡಿದೆ.

‘‘ಸು ಫ್ರಮ್ ಸೋ’ ಸಿನಿಮಾದ ಒಟಿಟಿ ಹಾಗೂ ಟಿವಿ ಹಕ್ಕಿನ ಮಾರಾಟದ ಬಗ್ಗೆ ಒಪ್ಪಂದ ಆಗಿದೆ ಎನ್ನಲಾಗುತ್ತಿದೆ. ಸಿನಿಮಾ ಥಿಯೇಟರ್​ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವುದರಿಂದ ಸದ್ಯಕ್ಕಂತೂ ಚಿತ್ರವನ್ನು ಒಟಿಟಿಯಲ್ಲಿ ರಿಲೀಸ್ ಮಾಡೋದು ಅನುಮಾನವೇ.

Shwetha M