ಕರ್ನಾಟಕ ಆಯ್ತು.. ಕೇರಳದಲ್ಲೂ ಸು ಫ್ರಮ್‌ ಸೋ ಅಬ್ಬರ – ಕೊಚ್ಚಿಯಲ್ಲಿ ಹೌಸ್‌ಫುಲ್‌ ಪ್ರದರ್ಶನ!

ಕರ್ನಾಟಕ ಆಯ್ತು.. ಕೇರಳದಲ್ಲೂ ಸು ಫ್ರಮ್‌ ಸೋ ಅಬ್ಬರ – ಕೊಚ್ಚಿಯಲ್ಲಿ ಹೌಸ್‌ಫುಲ್‌ ಪ್ರದರ್ಶನ!

ರಾಜ್‌ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಕನ್ನಡ ಚಿತ್ರರಂಗಕ್ಕೆ ಮರುಜೀವವ ಕೊಟ್ಟಿದೆ. ಲೋಕಲ್ ಕಂಟೆಂಟ್ ಇಟ್ಟುಕೊಂಡು ಹೆಣೆದ ಕಥೆ ಬಾಕ್ಸಾಫೀಸ್‌ನಲ್ಲಿ ಗೆಲ್ಲುತ್ತೆ ಅನ್ನೋದನ್ನು ಸಾಬೀತು ಮಾಡಿದೆ. ಕಳೆದ ಒಂದು ವಾರದಿಂದ ‘ಸು ಫ್ರಮ್ ಸೋ’ ಬಾಕ್ಸಾಫೀಸ್‌ನಲ್ಲಿ ಕೋಟಿ ಲೆಕ್ಕದಲ್ಲಿ ಹಣವನ್ನು ದೋಚಿದೆ. ಇದೀಗ ಸು ಫ್ರಮ್ ಸೋ’ ಸಿನಿಮಾ ಕನ್ನಡ ಚಿತ್ರರಂಗದ ಬಳಿಕ ಮಲಯಾಳಂ ಸಿನಿಮಾ ರಂಗಕ್ಕೆ ಕಾಲಿಟ್ಟಿದೆ. ಈ ಚಿತ್ರವನ್ನು ಒಳ್ಳೆಯ ರೀತಿಯಲ್ಲಿ ಡಬ್ ಮಾಡಿ ಮಲಯಾಳಂ ಭಾಷೆಯಲ್ಲಿ ರಿಲೀಸ್ ಮಾಡಲಾಗಿದೆ.

ಇದನ್ನೂ ಓದಿ:ENG ಚೆಂಡಾಡಿದ ಸಿರಾಜ್ & ಪ್ರಸಿದ್ಧ್ – T20I ಬ್ಯಾಟಿಂಗ್ ನಂಬಿ ಕೆಟ್ಟ ಆಂಗ್ಲರು!

ಕರಾವಳಿ ಭಾಗದಲ್ಲಿ ಹೊಸಬರೇ ಸೇರಿಕೊಂಡು ಮಾಡಿದ ಈ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಕರ್ನಾಟಕದ ಬಹುತೇಕ ಎಲ್ಲಾ ಭಾಗಗಳಲ್ಲಿಯೂ ಒಳ್ಳೆಯ ಅಭಿಪ್ರಾಯ ಸಿಕ್ಕಿತ್ತು ಇದೀಗ ಸು ಫ್ರಮ್‌ ಸೋ ಸಿನಿಮಾಗೆ ಕೇರಳದಲ್ಲಿಯೂ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಬುಕ್ ಮೈ ಶೋನಲ್ಲಿ ಮಲಯಾಳಂ ವರ್ಷನ್​ಗೆ ಒಳ್ಳೆಯ ರೇಟಿಂಗ್ ಸಿಕ್ಕಿದೆ.

ಕೇರಳದ ಕೊಚ್ಚಿಯಲ್ಲಿ ಶುಕ್ರವಾರ (ಆಗಸ್ಟ್ 1) ಪ್ರೀಮಿಯರ್ ಶೋ ಆಯೋಜನೆ ಮಾಡಲಾಗಿತ್ತು. ರಾಜ್ ಬಿ. ಶೆಟ್ಟಿ ಮೊದಲಾದವರು ಈ ವೇಳೆ ಭಾಗವಹಿಸಿದ್ದರು. ಮಲಯಾಳಂ ವರ್ಷನ್ ನೋಡಿದ ಅನೇಕರು ಸಿನಿಮಾಗೆ ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರವನ್ನು ಸಾಕಷ್ಟು ಇಷ್ಟಪಟ್ಟಿದ್ದಾರೆ. ಮಲಯಾಳಂ ಭಾಷೆಗೆ ಉತ್ತಮವಾಗಿ ಡಬ್ ಮಾಡಲಾಗಿದೆ ಎಂದು ಅನೇಕರು ಹೇಳಿದ್ದಾರೆ.  ಕೊಚ್ಚಿಯಲ್ಲಿ ಆಗಸ್ಟ್ 1ರ ರಾತ್ರಿ ಶೋಗಳ ಪೈಕಿ ಕೆಲವು ಹೌಸ್​ಫುಲ್ ಆಗಿತ್ತು. ಈಗಾಗಲೇ ಸಿನಿಮಾಗೆ ಬುಕ್ ಮೈ ಶೋನಲ್ಲಿ (ಮಲಯಾಳಂ ವರ್ಷನ್) 9.1 ರೇಟಿಂಗ್ ಪಡೆದುಕೊಂಡಿದೆ. ಸಿನಿಮಾ ನೋಡಿದ ಅನೇಕರು ಹೊಗಳಿದ್ದಾರೆ. ಮಲಯಾಳಂನಲ್ಲಿ ಈ ರೀತಿಯ ಹಳ್ಳಿ ಸೊಗಡಿನ ಚಿತ್ರಗಳನ್ನೇ ಹೆಚ್ಚು ಮಾಡಲಾಗುತ್ತದೆ. ಆ ಕಾರಣಕ್ಕೆ ಅವರಿಗೆ ಸಿನಿಮಾ ಮತ್ತಷ್ಟು ಇಷ್ಟ ಆಗಿದೆ.

‘ಸು ಫ್ರಮ್ ಸೋ’ ಸಿನಿಮಾವನ್ನು ಮಲಯಾಳಂ ಬಳಿಕ ತೆಲುಗಿಗೆ ಹಾಗೂ ಹಿಂದಿಗೆ ತೆಗೆದುಕೊಂಡು ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ತಮಿಳು ಭಾಷೆಗೆ ರಿಮೇಕ್ ಮಾಡಲು ಬೇಡಿಕೆ ಬಂದಿದೆ. ಸಿನಿಮಾ ಕರ್ನಾಟಕದಲ್ಲಿ ಎರಡನೇ ವಾರವೂ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಈ ಟಾಕ್ ಮಲಯಾಳಂ ಚಿತ್ರರಂಗವನ್ನೂ ತಲುಪಿದ್ದು, ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಕಾರಣಕ್ಕೆ ಅನೇಕರು ಸಿನಿಮಾ ಮಂದಿರಕ್ಕೆ ತೆರಳಿ ವೀಕ್ಷಿಸುತ್ತಿದ್ದಾರೆ. ಮಲಯಾಳಂ ಭಾಷೆಯಲ್ಲಿ ಸಿನಿಮಾ ಹಿಟ್ ಆದರೆ, ಉಳಿದ ಭಾಷೆಗಳಿಗೆ ರಿಲೀಸ್ ಆಗಲು ಮತ್ತಷ್ಟು ಬೂಸ್ಟ್ ಸಿಕ್ಕಂತೆ ಆಗಲಿದೆ.

Shwetha M