ಸು ಫ್ರಮ್ ಸೋ ನಿರ್ದೇಶಕ ಜೆಪಿ ತುಮಿನಾಡು ಮದುವೆ – ರಶ್ಮಿಕಾ ಜೊತೆ ತುಮಿನಾಡು ವಿವಾಹ ಸಂಭ್ರಮ

ಸು ಫ್ರಮ್ ಸೋ ಸಿನಿಮಾ ಮೂಲಕ ಸಕ್ಸಸ್ ನಿರ್ದೇಶಕ ಪಟ್ಟ ಗಳಿಸಿದ ಜೆಪಿ ತುಮಿನಾಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟ ನಿರ್ದೇಶಕ ಜೆಪಿ ತುಮಿನಾಡು ರಶ್ಮಿಕಾ ಅವರನ್ನು ವರಿಸಿದ್ದಾರೆ.
ಇದನ್ನೂ ಓದಿ:ತುತ್ತು ಅನ್ನಕ್ಕೂ ಗತಿಯಿಲ್ಲದೆ ಕೇಡಿ ಜೆಡಿ ವಿಲ ವಿಲ! – ಹಳೇ ಸಾಮ್ರಾಜ್ಯ ಮರಳಿ ಪಡೆದ ಗೌತಮ್ ದಿವಾನ್!
ನಟ ನಿರ್ದೇಶಕ ಜೆಪಿ ತುಮಿನಾಡು ರಶ್ಮಿಕಾ ಎಂಬುವವರ ಜೊತೆ ಹಸೆಮಣೆ ಏರಿದ್ದಾರೆ. ಮಂಗಳೂರಿನಲ್ಲಿ ಅದ್ದೂರಿಯಾಗಿ ವಿವಾಹ ಸಮಾರಂಭ ನೆರವೇರಿದೆ. ಬುಧವಾರ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಈ ಶುಭ ಸಮಾರಂಭದ ಫೋಟೋ ಹಂಚಿಕೊಂಡಿದ್ದಾರೆ.ಜೆಪಿ ಹಾಗೂ ರಶ್ಮಿಕಾ ಫೋಟೋಗಳು ಗಮನ ಸೆಳೆದಿವೆ. ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ. ವಿವಾಹ ಮಂಟಪ ಸಾಕಷ್ಟು ಅದ್ದೂರಿಯಾಗಿ ಕಾಣಿಸಿದೆ. ಮಂಗಳೂರಿನ ಪಿಲಿಕುಳದ ಸ್ಕೌಟ್ ಭವನದಲ್ಲಿ ಜೆಪಿ ತುಮಿನಾಡು ಮದುವೆ, ಭರ್ಜರಿಯಾಗಿಯೇ ನಡೆದಿದೆ. ಕನ್ನಡ ಹಾಗೂ ತುಳು ಚಿತ್ರರಂಗದ ತಾರೆಯರಾದ ರಾಜ್ ಬಿ ಶೆಟ್ಟಿ, ರೂಪೇಶ್ ಶೆಟ್ಟಿ, ಅರ್ಜುನ್ ಕಾಪಿಕಾಡ್, ದೇವದಾಸ್ ಕಾಪಿಕಾಡ್ ಸೇರಿ ಹಲವಾರು ಸೆಲೆಬ್ರಿಟಿಗಳು ಜೆಪಿ ಮದುವೆಗೆ ಆಗಮಿಸಿ ಶುಭಹಾರೈಸಿದ್ದಾರೆ.
ಜೆಪಿ ತುಮಿನಾಡು ಅವರು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುವ ಮುನ್ನ ಸಾಕಷ್ಟು ವರ್ಷಗಳ ಕಾಲ ಅವರು ರಂಗಭೂಮಿಯಲ್ಲಿ ಶ್ರಮಿಸಿದ್ದಾರೆ . ಅಷ್ಟೇ ಅಲ್ಲದೆ ಅನೇಕ ನಾಟಕಗಳಲ್ಲಿ ನಟನೆ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದರು.

ನೋಡಿರಿ

