ಕಲೆಕ್ಷನ್ನಲ್ಲಿ ‘ಸು ಫ್ರಮ್ ಸೋ’ ರೆಕಾರ್ಡ್ – 5 ದಿನ 13 ಕೋಟಿ.. ಶೆಟ್ರಿಗೆ ಲಾಟ್ರಿ

ಕಲೆಕ್ಷನ್ನಲ್ಲಿ ‘ಸು ಫ್ರಮ್ ಸೋ’ ರೆಕಾರ್ಡ್ –   5 ದಿನ 13 ಕೋಟಿ.. ಶೆಟ್ರಿಗೆ ಲಾಟ್ರಿ

ಮನೆಯಲ್ಲಿ ಇದ್ದು ಬೇಜಾರಾಗಿದೆಯೇ.. ಆಫೀಸ್‌ನ  ಕೆಲಸದಿಂದ ಮನಸ್ಸ ಕಲ್ಲಾಗಿದ್ಯಾ..  ಬೆಂಗಳೂರು ಟ್ರಾಪಿಕ್‌ನಲ್ಲಿ  ಕಾಲ ಕಳೆದು ಕಳೆದು ಬೋರ್ ಆಗಿದ್ಯಾ.. ಇದೆಲ್ಲಾ ಸಮಸ್ಯೆಗೂ ಒಂದೇ ರಾಮಬಾಣ.. ಸು ಫ್ರಮ್ ಸೋ ಸಿನಿಮಾ..ಯಾರೆಲ್ಲಾ  ಇನ್ನೂ ಸು ಫ್ರಮ್ ಸೋ ನೋಡಿಲ್ಲ ನೋಡಿ.. ಮೊಬೈಲ್‌ಗೆ ಬರೋ ತನಕ .. ಟಿವಿಯಲ್ಲಿ ಹಾಕೋ ತನಕ ಕಾಯ್ದೆ ಕನ್ನಡ  ಸಿನಿಮಾವನ್ನ ಟ್ಯಾಕಿಸ್‌ನಲ್ಲೇ ನೋಡಿ.. ಯಾಕ್ ಗೊತ್ತಾ ಈ ಸಿನಿಮಾದಲ್ಲಿ  ಲಾಂಗು ಮಚ್ಚಿಲ್ಲ.. ಲಾಜಿಕ್ ಇಲ್ಲದ ಮ್ಯಾಜಿಕ್ ಫೈಟ್ ಇಲ್ಲ.. ಹುಚ್ಚರತೆ ಹಾಕಿರೋ ಗೆಟಪ್‌ ಇಲ್ಲ.. ಬೇಕಾ ಬಿಟ್ಟಿ ಹಾಕಿರೋ ಸೆಟ್‌ ಸೆಟಪ್‌ ಇಲ್ಲ.. ಸಿಂಪಲ್ ಕಥೆಯನ್ನ ನಗುವಿನ ಸಹಿ ಹಚ್ಚಿ ಪ್ರೇಕ್ಷಕನಿಗೆ ಊಣಬಡಿಸಿದ್ದಾರೆ..

ಕೆಲವೊಂದಷ್ಟು ಜನ ಸಿನಿಮಾ ರೀಲಿಸ್ ಆಗೋ ಮುಂಚೆ ಬಿಟ್ಟು ಬಿಲ್ಡಪ್ ಕೊಡ್ತಾ ಹೇವಿ ಪ್ರಚಾರ ಕೊಡ್ತಾರೆ.. ಸಿನಿಮಾ ಹಾಗ್ ಇದೆ ಹೀಗ್ ಇದೆ ಅಂತ ಒಂದಷ್ಟು ಚಾನೆಲ್‌ಗಳಲ್ಲಿ, ಯ್ಯೂಟಬ್‌ಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಬಿಟ್ಟಿ ಪ್ರಚಾರ ಕೊಡ್ತಾರೆ.. ಸಿನಿಮಾ ರಿಲೀಸ್ ಆದ್ರೂ ಮೇಲೆ ಈ ಸಿನಿಮಾ ಹಿಟ್ ಆಗೋದ್ ಇರ್ಲಿ. ನಾಲ್ಕೇ ನಾಲ್ಕು ದಿನ ಕೂಡ ಥಿಯೇಟರ್‌ನಲ್ಲಿ ಇರೋದ್ ಇಲ್ಲ.. ಬಟ್ ಯಾವುದೇ ಪ್ರಚಾರ ವಿಲ್ಲದೇ, ಯಾವುದೇ ದೊಡ್ಡ ಸ್ಟಾರ್ ಬಳಗ ಇಲ್ಲದೇ ತೆರೆ ಮೇಲೆ ಬಂದ ಸಿನಿಮಾ ಸು ಫ್ರಮ್ ಸೋ ಹವಾ ಮಾಡ್ತಿದೆ.. ಸಿನಿ ಪ್ರೇಕ್ಷರನ್ನ ತನ್ನತ್ತ ಬರುವಂತೆ ಮಾಡ್ತಿದೆ.. ಕನ್ನಡ ಸಿನಿಮಾ ಇಂಡಸ್ಟ್ರೀಗೆ ಹೊಸ ಹೊಳಪು ನೀಡಿದೆ.. ಒಳ್ಳೆಯ ಕಥೆ ಜೊತೆ ಬಂದ ಸಿನಿಮಾ ಸಿನಿರಸಿಕರ ಮನಸ್ಸು ಗೆದ್ದಿದೆ.

ಸು ಫ್ರಮ್ ಸೋ ಭರ್ಜರಿ ಕಲೆಕ್ಷನ್

ಹೌದು ಸು ಫ್ರಮ್ ಸೋ ದಿನ ಕಳೆದಂತೆ ಭರ್ಜರಿ ಕಲೆಕ್ಷನ್ ಮಾಡ್ತಿದೆ..  ನಿತ್ಯವೂ ಶೋ ಗಳು ಬರ್ತಿಯಾಗುತ್ತಿದ್ದು, ಪರಬಾಷೆ ಸಿನಿಮಾಗಳಿಗೆ ಗೇಟ್ ಪಾಸ್ ಸಿಗುತ್ತಿದೆ..  ಚಿಕ್ಕದಾಗಿ ಬಂದ ಸಿನಿಮಾ ದೊಡ್ಡದಾಗಿ ಕಲೆಕ್ಷನ್ ಮಾಡ್ತಿದೆ.. ಸು ಫ್ರಮ್ ಸೋ ಚಿತ್ರದ ಕಲೆಕ್ಷನ್ 13 ಕೋಟಿ ಆಗಿದೆ. ಇದು ಅಂದಾಜು ಲೆಕ್ಕ. ಆದರೆ, ಇನ್ನೂ ಜಾಸ್ತಿ ಆಗಿರೋ ಸಾಧ್ಯೆತನೂ ಇದೆ. ಅದು 14 ಕೋಟಿ ಅನ್ನೋ ಮಾಹಿತಿನೂ ಸಿಗುತ್ತದೆ.  5ನೇ ದಿನವಾದ್ರೂ   ಸಿನಿಮಾ ವೀಕ್ಷಣೆಗೆ ಎಲ್ಲಿಯೂ ಟಿಕೆಟ್ ಸಿಗುತ್ತಲೇ ಇಲ್ಲ. ಎಲ್ಲಿ ಟ್ರೈ ಮಾಡಿ ನೋಡಿದರೂ ಹೌಸ್ ಫುಲ್. ಇನ್ನು ವಾರಾಂತ್ಯದಲ್ಲಂತೂ ಕೇಳುವುದೇ ಬೇಡ. ಇದ್ದ ಬದ್ದ ಎಲ್ಲಾ ಶೋ ಹೌಸ್ ಫುಲ್.  ಹೀಗಾಗಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ..

 ಜೆಪಿ ತುಮಿನಾಡ್ ಯಾರು ಗೊತ್ತಾ?

ಸಕ್ಸಸ್‌ ಕಂಡಿರುವ ‘ಸು ಫ್ರಮ್ ಸೋ’  ನಿಮಾವನ್ನು ನಿರ್ದೇಶನ ಮಾಡಿರುವುದು ಜೆಪಿ ತುಮಿನಾಡ್‌. ನಟನೆಯ ಜೊತೆಗೆ, ನಾಟಕ ರಚನೆ, ನಿರ್ದೇಶನವನ್ನೂ ಜೆಪಿ ತುಮಿನಾಡ್ ಮಾಡುತ್ತಿದ್ದರು..ಇವರಪ ಸಿನಿಮಾ ರಂಗಕ್ಕೆ ಹೊಸಬರೇನಲ್ಲ. ಒಂದು ಮೊಟ್ಟೆಯ ಕಥೆ ,’ಗರುಡ ಗಮನ ವೃಷಭ ವಾಹನ’, ‘ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸೇರಿದಂತೆ ಕೆಲವೊಂದು ಕನ್ನಡ ಸಿನಿಮಾಗಳಲ್ಲಿಯೂ ಕೆಲಸ ಮಾಡಿದ್ದಾರೆ.  ‘ಸಪ್ತ ಸಾಗರದಾಚೆ ಎಲ್ಲೋ: ಸೈಡ್ ಬಿ’ ಚಿತ್ರದಲ್ಲಿ ನಾಯಕಿ ರುಕ್ಮಿಣಿಯ ಗಂಡನ ಪಾತ್ರದಲ್ಲಿ ನಟಿಸಿದ್ದು ಇವರೇ…ಆದರೆ ನಿರ್ದೇಶಕನಾಗಿ ಇಷ್ಟರ ಮಟ್ಟಿಗೆ ಯಶಸ್ವಿ ಜರ್ನಿ ಕೈಗೊಂಡಿದ್ದು ಇದೇ ಮೊದಲು. ಅಂದಹಾಗೆ ಇವರು ರಾಜ್‌ ಬಿ ಶೆಟ್ಟಿಯವರ ಗರಡಿಯಲ್ಲಿ ಪಳಗಿದ ಕೂಸು ಇವರು.  ನಿರ್ದೇಶಕ ಜೆಪಿ ತುಮಿನಾಡ್ ಅವರ ಪೂರ್ಣ ಹೆಸರು ಜಯಪ್ರಕಾಶ್‌ ತುಮಿನಾಡ್.‌ ಕರಾವಳಿಯ ಈ ಪ್ರತಿಭೆಗೆ ಸುಮಾರು 14 ವರ್ಷಗಳ ರಂಗಭೂಮಿ ನಂಟಿದೆ.  ಇವರು ಸು ಫ್ರಮ್ ಸೋ ಸಿನಿಮಾವನ್ನ 2019 ರಲ್ಲಿಯೇ ಬರೆದಿದ್ದರಂತೆ. ಆ ಸಂದರ್ಭದಲ್ಲೇ ಚಿತ್ರ ನಿರ್ದೇಶಿಸುವ ಆಲೋಚನೆ ಇತ್ತಾದರೂ ಕೋವಿಡ್ ಮತ್ತು ಇತರ ಚಿತ್ರಗಳಿಂದಾಗಿ ಸಾಧ್ಯವಾಗಲಿಲ್ಲ. ಆ ಬಳಿಕ ಆರು ವರ್ಷಗಳಲ್ಲಿ ಪಡೆದ ಅನುಭವವನ್ನು ಸೇರಿಸಿ ಈ ಚಿತ್ರ ತಯಾರಿ ಮಾಡಿದ್ದಾರೆ.. ಹೀಗಾಗಿ ಇಷ್ಟು ಚೆನ್ನಾಗಿ ಸಿನಿಮಾ ಮೂಡಿ ಬಂದಿದೆ.

 ಸು ಫ್ರಮ್ ಸೋ ನಾಯಕಿ ಮುಂಬೈ ಹುಡುಗಿ

ಸು ಫ್ರಮ್ ಸೋ ಚಿತ್ರದಲ್ಲಿ ಸಾಕಷ್ಟು ಪಾತ್ರಗಳಿದ್ದು, ಕರಾವಳಿ ರಂಗಭೂಮಿ ಕಲಾವಿದರು ಇದ್ರಲ್ಲಿ ಅಭಿನಯಿಸಿದ್ದಾರೆ.. ರಿಷಬ್ ಶೆಟ್ರ  ಚಿತ್ರಗಳಲ್ಲೂ ಈ ಕಲಾವಿರು ನಟಿಸಿದ್ದಾರೆ. ಆದ್ರೆ ನಾಯಕ ನಟಿ ಎಲ್ಲಿಯವರು ಅನ್ನೋ ಪ್ರಶ್ನೆ ಸಾಕಷ್ಟು ಫ್ಯಾನ್ಸ್‌ ಕೇಳುತ್ತಿದ್ದಾರೆ. ಅಷ್ಟರ ಮಟ್ಟಿಗೆ ಸು ಫ್ರಮ್ ಸೋ ಚಿತ್ರದಲ್ಲಿ ಚೈತ್ರಾ ಪಾತ್ರ ಮಾಡಿರೋ ನಟಿ ಗಮನ ಸೆಳೆದಿದ್ದಾರೆ. ಚಿತ್ರದಲ್ಲಿಯ ತಮ್ಮ ಅಭಿನಯದ ಮೂಲಕ ಎಲ್ಲರ ದಿಲ್ ಕದ್ದಿರೋ  ಇವರು ಮಂಗಳೂರು ನಂಟಿರೋ ಮುಂಬೈ ಹುಡುಗಿನೇ ಆಗಿದ್ದಾರೆ. ಜೆಪಿ ತುಮಿನಾಡ್ ಅವರು ‘ಕಥೆ ಯೆಡ್ಡೆ ಉಂಡು’ ನಾಟಕ ಮಾಡಲು ಮುಂಬೈಗೆ ಹೋಗಿದ್ರಂತೆ.. ಆ ನಾಟಕವನ್ನ ನಾಯಕಿ ತನಿಷ್ಕಾ ಶೆಟ್ಟಿ ಅವರ ತಂದೇನೆ ಆಯೋಜಿಸಿದ್ದರು. ಆಗಲೇ ಜೆ.ಪಿ.ತುಮಿನಾಡ್ ಈ ತನಿಷ್ಕಾ ಶೆಟ್ಟಿ ಅವರನ್ನ ನೋಡಿದ್ದಾರೆ. ಆಗ  ಸು ಪ್ರಮ್ ಸೋ ಚಿತ್ರದ ಚೈತ್ರಾ ಪಾತ್ರಕ್ಕೆ ಇವರು ಸೂಕ್ತ ಅನಿಸಿದೆ. ಅದಕ್ಕೇನೆ ತನಿಷ್ಕಾ ಜೊತೆಗೂ ಮಾತನಾಡಿದ್ದಾರೆ. ಅವರ ತಂದೆ ಜೊತೆಗೂ ಚರ್ಚೆ ಮಾಡಿದ್ದಾರೆ. ಎಲ್ಲವೂ ಓಕೆ ಆದ್ಮಲೆ ಚೈತ್ರಾ ಪಾತ್ರದ ಆಡಿಷನ್ ನಡೆದಿದೆ. ಅದರಲ್ಲೂ ತನಿಷ್ಕಾ ಶೆಟ್ಟಿ ಓಕೆ ಆಗಿದ್ದಾರೆ. ಹೀಗೆ ಮುಂಬೈ ಹುಡುಗಿ ತನಿಷ್ಕಾ ಶೆಟ್ಟಿ ಕನ್ನಡದ ಸು ಫ್ರಮ್ ಸೋ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ. ಇವರಿಗೆ ತುಳು ಬರುತ್ತೆ, ಆದ್ರೆ ಕನ್ನಡವನ್ನ ಈಗ ಕಲಿಯುತ್ತಿದ್ದಾರೆ. ಇವರ ಇನ್ನೂ ಮುಂಬೈನಲ್ಲಿ ಸೆಕೆಂಡ್ ಇಯರ್ ಡಿಗ್ರಿ ಓದುತ್ತಿದ್ದಾರೆ..

Kishor KV