ಶೆಟ್ರು ಮುಟ್ಟಿದ್ದೆಲ್ಲಾ ಚಿನ್ನವಾಗುವುದು ಹೇಗೆ? ಸಿಂಪಲ್ ಸ್ಟೋರಿಗೆ ಇಷ್ಟೊಂದು ಖರ್ಚಾ?
ತೆಲುಗಿನಲ್ಲಿ SU ಫ್ರಮ್ SO ರೆಸ್ಪಾನ್ ಹೇಗಿದೆ?

ಕರಾವಳಿಯ ಶೆಟ್ರು ಮಟ್ಟಿದೆಲ್ಲಾ ಚಿನ್ನ ಎನ್ನುವಂತಾಗಿದೆ. ಸಿಂಪಲ್ ಸ್ಟೋರಿ ಜೊತೆ ತೆರೆ ಮೇಲೆ ಬರೋ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಿಟ್ ಆಗ್ತಿವೆ.. ಕನ್ನಡ ಸಿನಿಮಾ ಚೆನ್ನಾಗಿದ್ರೆ ಪೇಕ್ಷಕರೇ ಹುಡುಕಿಕೊಂಡು ಬರ್ತಾರೆ ಥಿಯೇಟರ್ ಬರ್ತಾರೆ.. ನಮಗೆ ಥಿಯೇಟರ್ ಸಿಕ್ಕಿಲ್ಲ ಸಿಕ್ಕಿಲ್ಲ ಅಂತ ಹೇಳುವುದು ಸು ಫ್ರಮ್ ಸೋ ತೋರಿಸಿ ಕೊಟ್ಟಿವೆ. 15 ದಿನಗಳಿಂದ ಸು ಫ್ರಮ್ ಸೋ ಹವಾ ಚೂರೇ ಚುರು ಕಮ್ಮಿಯಾಗದೆ ಹೌಸ್ ಫುಲ್ ಆಗಿವೆ.. ಅಲ್ಲದೇ ಡಬ್ ಆಗಿ ತೆರೆ ಕಂಡಿರೋ ಮಲಯಾಳಂ ಹಾಗೂ ತೆಲುಗಿನಲ್ಲೂ ಹೌಸ ಫುಲ್ ಪ್ರದರ್ಶನ ಕಾಣುತ್ತಿದ್ದು, ರಾಜ್ ಬಿ ಶೆಟ್ಟಿ ತಂಡಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಡುತ್ತಿದ್ದಾರೆ.
ಸು ಫ್ರಮ್ ಸೋಗೆ ಖರ್ಚೆಷ್ಟು , ಲಾಭ ಬಂದಿದ್ದು ಎಷ್ಟು?
ಸು ಫ್ರಮ್ ಸೋ ಕನ್ನಡದಲ್ಲಿ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಂತೆ ಮಲಯಾಳಂಗೆ ಡಬ್ ಮಾಡಿ ಆಗಸ್ಟ್ 1 ರಂದು ಬಿಡುಗಡೆ ಮಾಡಲಾಯಿತು. ತೆಲುಗಿನಲ್ಲೂ ಆಗಸ್ಟ್ 8ಕ್ಕೆ ಬಿಡುಗಡೆ ಆಗಿದೆ.. ಎರಡು ರಾಜ್ಯದಲ್ಲೂ ಸಿನಿಮಾಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಅಲ್ಲೂ ಕೂಡ ಬಾವ ಬಂದರೋ ಹಾಡು ಟ್ರೆಂಡ ಆಗುತ್ತಿದೆ. ಸಿಂಪಲ್ ಕಥೆ ನೋಡಿದ ಜನ ಈ ಸಿನಿಮಾಕ್ಕೆ ಹೆಚ್ಚು ಹಣ ಹಾಕಿಲ್ಲ. ಕೋಟಿಯೊಳಗೆ ಸಿನಿಮಾ ಮುಗಿದಿದೆ ಅನ್ನೋ ಲೆಕ್ಕಚಾರದಲ್ಲಿದ್ರು. ದ್ರೆ ಈಗ ಸಿನಿಮಾಕ್ಕೆ ಎಷ್ಟು ಖರ್ಚು ಆಗಿದೆ ಅನ್ನೋದ್ದನ್ನ ರಾಜ್ ಬಿ ಶೆಟ್ಟಿ ಹೇಳಿದ್ದಾರೆ. ತೆಲುಗಿನಲ್ಲಿ ಕೊಟ್ಟ ಇಂಟರ್ವ್ಯೂವ್‌ನಲ್ಲಿ ರಾಜ್ ಬಿ ಶೆಟ್ಟಿ ಬಜೆಟ್ ಬಗ್ಗೆ ಮಾತನಾಡಿದ್ದಾರೆ. ನಮ್ಮ ಬಜೆಟ್ ₹1.5 ಕೋಟಿಗಿಂತ ಹೆಚ್ಚಾಗಿದೆ. ನಾವು ಸುಮಾರು 30 ವೃತ್ತಿಪರ ರಂಗಭೂಮಿ ನಟರೊಂದಿಗೆ 50 ದಿನಗಳಿಗೂ ಹೆಚ್ಚು ಕಾಲ ಚಿತ್ರೀಕರಣ ಮಾಡಿದ್ದೇವೆ. ಗರುಡ ಗಮನ ವೃಷಭ ವಾಹನ ಕೂಡ ₹1.8 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಈ ಚಿತ್ರಕ್ಕೆ ಇನ್ನೂ ಹೆಚ್ಚಿನ ಅಗತ್ಯವಿತ್ತು ಎಂದಿದ್ದಾರೆ.. ಸು ಫ್ರಮ್ ಸೋ ಚಿತ್ರದ ನಿರ್ಮಾಣ ಬಜೆಟ್ ₹4.5 ಕೋಟಿ ಆಗಿದ್ದು, ಪ್ರಚಾರ ಮತ್ತು ಇತರ ಖರ್ಚುಗಳಿಗಾಗಿ ಹೆಚ್ಚುವರಿಯಾಗಿ ₹1 ಕೋಟಿ ಖರ್ಚು ಮಾಡಲಾಗಿದೆ. ಒಟ್ಟು ವೆಚ್ಚ ಸುಮಾರು ₹5.5 ಕೋಟಿಗೆ ತಲುಪಿದೆ ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.
15 ದಿನ.. 51 ಕೋಟಿ ಕಲೆಕ್ಷನ್
ಇನ್ನೂ ಸು ಫ್ರಮ್ ಸೋ 3 ಬಾಷೆಯಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ವಿದೇಶದಲ್ಲೂ ಸದ್ದು ಮಾಡ್ತಿದೆ. ಈ ಸಿನಿಮಾ ರಿಲೀಸ್ ಆಗಿ 15 ದಿನ ಕಳೆದಿದ್ದು ಇಂದಿನ ತನಕ ಈ ಸಿನಿಮಾ 51 ಕೋಟಿ ಕಲೆಕ್ಷನ್ ಮಾಡಿದೆ.. ಭಾನುವಾರ ಹೆಚ್ಚಿನ ಕಲೆಕ್ಷನ್ ಮಾಡಲಿದೆ. ಕಳೆದ ಭಾನುವಾರ ಒಂದೇ ದಿನ 6 ಕೋಟಿ ಕಲೆಕ್ಷನ್ ಮಾಡಿತ್ತು . ಸೋ ಈ ಭಾನುವಾರ 5 ರಿಂದ 6 ಕೋಟಿ ಕಲೆಕ್ಷನ್ ಮಾಡೋ ಸಾಧ್ಯತೆಯಿದೆ.

ನೋಡಿರಿ

