ಇದು ಶಾಲೆಯಾ.. ಮಸಾಜ್‌ ಸೆಂಟರಾ? – ಮಕ್ಕಳಿಂದ ಕಾಲು ಒತ್ತಿಸಿಕೊಂಡ ಶಿಕ್ಷಕಿ!‌

ಇದು ಶಾಲೆಯಾ.. ಮಸಾಜ್‌ ಸೆಂಟರಾ? – ಮಕ್ಕಳಿಂದ ಕಾಲು ಒತ್ತಿಸಿಕೊಂಡ ಶಿಕ್ಷಕಿ!‌

ಶಾಲೆ ಅಂದಾಗ ಶಿಕ್ಷಕರು ಪಾಠ ಮಾಡುವುದು, ಮಕ್ಕಳು ತರಗತಿಯಲ್ಲಿ ಕುಳಿತು ಪಾಠ ಕೇಳುವ ಚಿತ್ರಣ ನಮ್ಮ ಕಣ್ಣಮುಂದೆ ಬರುತ್ತೆ. ಆದ್ರೆ ಇಲ್ಲೊಂದು ವೈರಲ್‌ ಆದ ವಿಡಿಯೋ ನೋಡಿದ್ರೆ ಎಂಥವರಿಗೂ ಶಾಕ್‌ ಆಗೋದು ಪಕ್ಕಾ.. ಈ ಶಾಲೆಯಲ್ಲಿ ಟೀಚರ್‌ ಮಕ್ಕಳಿಗೆ ಪಾಠ ಮಾಡುವ ಬದಲು, ಮಕ್ಕಳಿಂದಲೇ ಸೇವೆ ಮಾಡಿಸಿಕೊಂಡಿದ್ದಾರೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ವಿಷ್ಣು ಸ್ಮಾರಕಕ್ಕೆ ಜಾಗ ಮಂಜೂರು ಮಾಡುವಂತೆ ಸಿಎಂಗೆ ಮನವಿ ಮಾಡಿದ ಭಾರತಿ ವಿಷ್ಣುವರ್ಧನ್‌!

ಹೌದು.. ಈ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹರೂರಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಶಾಲೆಯ ಮುಖ್ಯೋಪಾಧ್ಯಾಯಿನಿ ಕಲೈವಾಣಿ ಎಂಬುವವರು ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡದೇ ಅವರಿಂದ ಸೇವೆ ಮಾಡಿಸಿಕೊಂಡಿದ್ದಾರೆ.  ಶಿಕ್ಷಕಿ ಬೆಂಚ್‌ನಲ್ಲಿ ಮಲಗಿ ಮಕ್ಕಳಿಗೆ ಕಾಲು ಒತ್ತುವಂತೆ ಹೇಳಿದ್ದಾರೆ. ಈ ವೇಳೆ ಸುಮಾರು 30 ಮಕ್ಕಳು ತರಗತಿಯಲ್ಲಿ ಇದ್ದರು ಎನ್ನಲಾಗಿದೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಬೆನ್ನಲ್ಲೇ ಶಿಕ್ಷಕಿ ವಿರುದ್ಧ ಪೋಷಕರು ಹಾಗೂ ಸ್ಥಳೀಯರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ವೈರಲ್ ಆಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಕೂಡಲೇ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಸೂಕ್ತ ವಿಚಾರಣೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Shwetha M