ಸ್ಕೂಲ್‌ ಬ್ಯಾಗ್‌ ಭಾರಕ್ಕೆ ಬಾಲಕನ ಕೈ ಕಟ್!‌ –  ಮಕ್ಕಳಿಗೆ ಚೀಲವೇ ಹೊರೆಯಾಗುತ್ತಿದೆಯಾ?

ಸ್ಕೂಲ್‌ ಬ್ಯಾಗ್‌ ಭಾರಕ್ಕೆ ಬಾಲಕನ ಕೈ ಕಟ್!‌ –  ಮಕ್ಕಳಿಗೆ ಚೀಲವೇ ಹೊರೆಯಾಗುತ್ತಿದೆಯಾ?

ಕಳೆದ ಕೆಲವು ವರ್ಷಗಳಿಂದ ಮಕ್ಕಳಿಗೆ ಶಾಲಾ ಬ್ಯಾಗ್ ನಿತ್ಯದ ಪರದಾಟವಾಗಿದೆ. ಭಾರವಾದ ಬ್ಯಾಗ್‌ ಹೊರುವುದರಿಂದ ಸಣ್ಣ ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳುತ್ತಿದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಇದೀಗ ಇಲ್ಲೊಂದು ಕಡೆ ಭಾರವಾದ ಬ್ಯಾಗ್‌ ಹೊತ್ತುಕೊಂಡು ಹೋದ ಬಾಲಕ ಕೈ ಮುರಿದಿರುವ ಘಟನೆ ನಡೆದಿದೆ.

ಇದನ್ನೂ ಓದಿ: ರಕ್ಷಿತಾ‌ ಡ್ರೀಮ್‌ಬಾಯ್‌ ಬಗ್ಗೆ ಕೇಳಿ ಮನೆ ಮಂದಿ ಶಾಕ್! – ನನಗೆ ಮದುವೆಯೇ ಬೇಡ ಎಂದ ಗಿಲ್ಲಿನಟ!

ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಭಾರವಾದ ಶಾಲಾ ಬ್ಯಾಗ್ ಹೊತ್ತುಕೊಂಡು ಹೋದ ಪರಿಣಾಮ 6ನೇ ತರಗತಿ ವಿದ್ಯಾರ್ಥಿಯೊಬ್ಬನ ಬಲಗೈ ಮುರಿದಿದೆ. ಕೈಮುರಿದುಕೊಂಡ ಬಾಲಕನನ್ನ ಸಮರ್ಥ ಎಂದು ಗುರುತಿಸಲಾಗಿದೆ.

ಅಷ್ಟಕ್ಕೂ ಆಗಿದ್ದೇನು?

ಕಾರವಾರದ ಸಮರ್ಥ್ ನಾಯ್ಕ್ ಕಾರವಾರದ ಖಾಸಗಿ ಶಾಲೆಯೊಂದರಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಶಾಲೆಗೆ ಹೋಗಿದ್ದ ವಿದ್ಯಾರ್ಥಿ, ಶಿಕ್ಷಕರು ಹೆಚ್ಚು ಪುಸ್ತಕ ತರಲು ಹೇಳಿದ್ದರಿಂದ ಹೆಚ್ಚು ಭಾರದ ಪುಸ್ತಕಗಳನ್ನು ತುಂಬಿಕೊಂಡು ಭಾರವಾದ ಬ್ಯಾಗ್ ಹೊತ್ತು ಶಾಲೆಗೆ ತೆರಳಿದ್ದ. ಶಾಲೆಯಿಂದ ಮರಳಿ ಮನೆಗೆ ಬಂದಾಗ ವಿದ್ಯಾರ್ಥಿಯ ಬಲಗೈ ಭುಜ ಭಾಗದಲ್ಲಿ ತೀವ್ರ ಊತ ಕಂಡುಬಂದಿದೆ.

ತಕ್ಷಣ ಆತಂಕಗೊಂಡ ಪೋಷಕರು ವಿದ್ಯಾರ್ಥಿಯನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ವೇಳೆ ವಿದ್ಯಾರ್ಥಿಯ ಬಲಗೈ ಮುರಿದಿರುವುದು ದೃಢಪಟ್ಟಿದೆ. ಈ ಘಟನೆ, ಸಣ್ಣ ಮಕ್ಕಳ ಮೇಲೆ ಅತಿಯಾದ ಪುಸ್ತಕಗಳ ಹಾಗೂ ಶಾಲಾ ಬ್ಯಾಗ್‌ನ ಹೊರೆ ಹೊರಿಸುತ್ತಿರುವ ಖಾಸಗಿ ಶಾಲೆಗಳ ಅಪಾಯಕಾರಿ ರೂಢಿಯ ಬಗ್ಗೆ ಪ್ರಶ್ನೆ ಎತ್ತುವಂತೆ ಮಾಡಿದೆ.

Shwetha M