ಅಪಘಾತದಲ್ಲಿ ಎರಡೂ ಕಾಲು ಕಟ್! – ಸ್ಟ್ರೆಚರ್ ಬೆಡ್ ಮೇಲೆಯೇ ಮಲಗಿ ಪರೀಕ್ಷೆ ಬರೆದ SSLC ವಿದ್ಯಾರ್ಥಿನಿ!

ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇದೀಗ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಜಿನಲ್ಲಿ ಕಾಲು ಮುರಿದ್ರೂ ಆಂಬ್ಯುಲೆನ್ಸ್‌ನಲ್ಲಿ ಬಂದು ಸ್ಟ್ರೆಚರ್ ಬೆಡ್ ಮೇಲೆ ಪರೀಕ್ಷೆ ಬರೆದಿರುವ ಘಟನೆ ವರದಿಯಾಗಿದೆ.
ಇದನ್ನೂ ಓದಿ: ಮನೆಬಳಕೆ LPG ಸಿಲಿಂಡರ್ ಕಾಳಸಂತೆಯಲ್ಲಿ ಬಿಕರಿ! – 12 ಸಾವಿರ ಸಿಲಿಂಡರ್ ವಶ
ಕೆಜಿಎಫ್ ತಾಲೂಕಿನ ಸೆಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿನಿ ಕುಸುಮಾ ಕಾಲು ಕಟ್ ಆಗಿದ್ರೂ ಆಂಬ್ಯುಲೆನ್ಸ್‌ನಲ್ಲಿ ಬಂದು ಸ್ಟ್ರೆಚರ್ ಬೆಡ್ ಮೇಲೆ ಪರೀಕ್ಷೆ ಬರೆದಿದ್ದಾಳೆ. ಇದೀಗ ಕುಸುಮಾ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಅಷ್ಟಕ್ಕೂ ಆಗಿದ್ದೇನು?
ಕೆಜಿಎಫ್ ತಾಲೂಕಿನ ಚಿನ್ನಗನಹಳ್ಳಿ ನಿವಾಸಿ ಆಗಿರುವ ವಿದ್ಯಾರ್ಥಿನಿ ಕುಸುಮ ಹತ್ತನೇ ತರಗತಿ ಪರೀಕ್ಷೆ ಬರೆಯಲು ಸಿದ್ದತೆ ನಡೆಸಿದ್ದಳು. ಆದ್ರೆ ಇತ್ತೀಚೆಗೆ ಕುಸುಮಾಗೆ ಅಪಘಾತ ಆಗಿದೆ. ಇದ್ರಿಂದಾಗಿ ಕುಸುಮ ಕಾಲು ಕಳೆದುಕೊಂಡಿದ್ದಳು. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕಾಲು ಕಟ್ ಆಗಿದ್ರೂ ಧೃತಿಗೆಡದ ಕುಸುಮಾ ತಾಯಿ ಜೊತೆಗೆ ಬಂದು ಪರೀಕ್ಷೆಗೆ ಹಾಜರಾಗಿದ್ದಾಳೆ. ವಿದ್ಯಾರ್ಥಿನಿಗೆ ಬಿಇಒ ಅನುಮತಿ ಕೊಟ್ಟಿದ್ದಾರೆ. ಆಸ್ಪತ್ರೆಯಿಂದ ಆಂಬ್ಯುಲೆನ್ಸ್‌ನಲ್ಲಿ ಬಂದು ಸ್ಟ್ರೆಚರ್ ಬೆಡ್ ಮೇಲೆಯೇ ಪರೀಕ್ಷೆ ಬರೆದಿದ್ದಾಳೆ. ಈಕೆಯ ದಿಟ್ಟತನವನ್ನು ಸಹಪಾಠಿಗಳು, ಶಿಕ್ಷಕರು ಮೆಚ್ಚಿಕೊಂಡರು.

ನೋಡಿರಿ

