SSLC ಪಾಸಾದ ಖುಷಿಯಲ್ಲಿ ಈಜಲು ತೆರಳಿದ ವಿದ್ಯಾರ್ಥಿ – ಈಜು ಬಾರದೇ ನೀರಿನಲ್ಲಿ ಮುಳುಗಿ ಸಾವು

SSLC ಪಾಸಾದ ಖುಷಿಯಲ್ಲಿ ಈಜಲು ತೆರಳಿದ ವಿದ್ಯಾರ್ಥಿ – ಈಜು ಬಾರದೇ ನೀರಿನಲ್ಲಿ ಮುಳುಗಿ ಸಾವು

ಇವತ್ತು (ಏಪ್ರಿಲ್ 23) ಹತ್ತನೇ ತರಗತಿ ಫಲಿತಾಂಶ ನೋಡುವ ಕುತೂಹಲದಲ್ಲಿ ವಿದ್ಯಾರ್ಥಿಗಳಿದ್ದರು. ಅವರಲ್ಲೊಬ್ಬ ವಿದ್ಯಾರ್ಥಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಿವಾಸಿ ಕಿರಣ್. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪಾಸಾಗಿದ್ದು ನೋಡಿ ಕಿರಣ್ ಖುಷಿಯಾಗಿದ್ದ. ಇದೇ ಖುಷಿಯಲ್ಲಿ ಈಜಾಡಲು ಹೋಗಿದ್ದ. ಆದರೆ, ಸಂಭ್ರಮದಲ್ಲಿ ತೇಲಾಡಬೇಕಿದ್ದ ಮನೆಯಲ್ಲಿ ಈಗ ತುಂಬಿದ್ದು ಬರೀ ಶೋಕ.

ಇದನ್ನೂ ಓದಿ:ಅಣ್ಣ ಅಣ್ಣ ಅಂತಾನೇ ಗಂಡನ ಸ್ನೇಹಿತನ ಜೊತೆ ಜೂಟ್ ಆದ ಜಿಮ್ ಟ್ರೈನರ್ ಹೆಂಡತಿ

ಎಸ್​ಎಸ್​ಎಲ್​ಸಿ ಪರೀಕ್ಷೆ ಪಾಸಾದ ಖುಷಿಯಲ್ಲಿದ್ದ ವಿದ್ಯಾರ್ಥಿ ಕಿರಣ್ ಈಗ ಬಾರದ ಲೋಕಕ್ಕೆ ತೆರಳಿದ್ದಾನೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸೊಣ್ಣವಾಡಿ ಗ್ರಾಮದಲ್ಲಿ ಈ  ಘೋರ ದುರಂತ ಸಂಭವಿಸಿದೆ. 15 ವರ್ಷದ ಕಿರಣ್, ಮುಳಬಾಗಿಲು ನಗರದಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ. ಕಳೆದ ತಿಂಗಳು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದ. ಇವತ್ತು ರಿಸಲ್ಟ್ ಬರುವುದನ್ನೇ ಕಾಯುತ್ತಿದ್ದ. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಬೆಳಗ್ಗೆಯಿಂದ ಫಲಿತಾಂಶಕ್ಕಾಗಿ ಕಾತುರದಿಂದ ಕಾದು ಕುಳಿತಿದ್ದ ಕಿರಣ್, ಸರಿಯಾಗಿ 12 ಗಂಟೆಗೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ, ತನ್ನ ರಿಸಲ್ಟ್​ ನೋಡಿದ್ದಾನೆ. 239 ಅಂಕಗಳನ್ನ ಪಡೆದು ಪಾಸ್ ಆಗಿರೋ ಖುಷಿಯಲ್ಲಿದ್ದ. ಪಾಸಾದ ಖುಷಿಯಲ್ಲಿದ್ದ ಕಿರಣ್​​, ತನ್ನ ಮೂವರು ಸ್ನೇಹಿತರೊಂದಿಗೆ ಈಜಲು ತೆರಳಿದ್ದಾನೆ. ಈಜು ಬಾರದೆ ಇದ್ದರೂ ಬಾವಿಗೆ ಈಜಾಡಲು ತೆರಳಿದ್ದಾನೆ. ಬಾವಿ ಆಳವಾಗಿದ್ದರಿಂದ ಮುಳುಗಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾವಿಯಲ್ಲಿದ್ದ ಮೃತದೇಹವನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಕಿರಣ್ ಮನೆಯಲ್ಲಿ ಶೋಕ ಮಡುಗಟ್ಟಿದೆ. ಹೆತ್ತವರ ಆಕ್ರಂದನ ಹೇಳತೀರದಾಗಿದೆ. ಮಗ ಎಸ್​ಎಸ್​ಎಲ್​ಸಿ ಪರೀಕ್ಷೆ ಪಾಸಾಗಿದ್ದಾನೆ ಎಂದು ಖುಷಿಯಲ್ಲಿದ್ದ ಪೋಷಕರು, ಮಗನ ಸಾವಿನ ನೋವಲ್ಲಿ ಕಣ್ಣೀರಿಡುತ್ತಿದ್ದಾರೆ.

Sulekha