ಹಾಸ್ಟೆಲ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಸಾವು – ಏಕೈಕ ಪುತ್ರನನ್ನು ಕಳೆದುಕೊಂಡ ಹೆತ್ತವರ ನೋವಿಗೆ ಕೊನೆ ಎಲ್ಲಿದೆ?

ಹಾಸ್ಟೆಲ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಸಾವು – ಏಕೈಕ ಪುತ್ರನನ್ನು ಕಳೆದುಕೊಂಡ ಹೆತ್ತವರ ನೋವಿಗೆ ಕೊನೆ ಎಲ್ಲಿದೆ?

ಹೆತ್ತವರಿಗೆ ಇದ್ದಿದ್ದು ಒಬ್ಬನೇ ಒಬ್ಬ ಮಗ. ಕಾಲೇಜಿಗೆ ಹೋಗಲಿ, ಚೆನ್ನಾಗಿ ಓದಲಿ ಎಂದು ಹಾಸ್ಟೆಲ್‌ಗೆ ಸೇರಿಸಿದ್ದರು. ಮಗ ಕೂಡಾ ಚೆನ್ನಾಗಿಯೇ ಓದುತ್ತಿದ್ದ. ಆದರೆ, ಮಗನ ಓದಿನಲ್ಲಿಯೇ ತಮ್ಮ ಭವಿಷ್ಯ ಕಾಣುತ್ತಿದ್ದ ದಂಪತಿಗೆ ಸಿಕ್ಕಿದ್ದು ಮಾತ್ರ ಬದುಕಿನುದ್ದಕ್ಕೂ ಪುತ್ರನ ಅಗಲಿಕೆಯ ಶೋಕ.

ಇದನ್ನೂ ಓದಿ:ಕೆಲಸಕ್ಕಾಗಿ ಹೋದ ಕನ್ನಡಿಗರನ್ನು ಉಕ್ರೇನ್‌ ಯುದ್ಧಕ್ಕೆ ನೇಮಿಸಿದ ರಷ್ಯಾ!

ಹಾಸನ ಜಿಲ್ಲೆಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ವಿಕಾಸ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ನೇಣುಬಿಗಿದ ಸ್ಥಿತಿಯಲ್ಲಿ 18 ವರ್ಷದ ವಿದ್ಯಾರ್ಥಿ ವಿಕಾಸ್ ಶವ ಪತ್ತೆಯಾಗಿದೆ. ವಿಕಾಸ್ ಓದಿನಲ್ಲೂ ಬುದ್ದಿವಂತ. ಹೀಗಾಗಿ ಹೆತ್ತವರು ಹಾಸನ ನಗರದ ಉದಯಗಿರಿಯಲ್ಲಿರುವ ಮಾಸ್ಟರ್ ಪಿಯು ಖಾಸಗಿ ಕಾಲೇಜಿಗೆ ಸೇರಿಸಿದ್ದರು. ಸೈನ್ಸ್ ವಿಭಾಗದಲ್ಲಿ ವಿಕಾಸ್ ಓದುತ್ತಿದ್ದ. ಆದರೆ, ಅದೇನಾಗಿತ್ತೋ ಏನೋ, ವಿಕಾಸ್ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಚನ್ನರಾಯಪಟ್ಟಣ ತಾಲ್ಲೂಕು, ಬೆಳಗುಲಿ ಗ್ರಾಮದ ಸುರೇಶ್, ಮಮತಾ ದಂಪತಿ ಏಕೈಕ ಪುತ್ರ ವಿಕಾಸ್. ಕಾಲೇಜಿಗೆ ತೆರಳಿದವನು ನಂತರ ಒಬ್ಬನೇ ಹಾಸ್ಟೆಲ್‌ಗೆ ಮರಳಿ ಬಂದಿದ್ದಾನೆ. ಹಾಸ್ಟೆಲ್‌ಗೆ ವಾಪಸ್ ಬಂದ ಬಳಿಕ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ವಿದ್ಯಾರ್ಥಿ ಸಾವಿಗೆ ಹಾಸ್ಟೆಲ್ ವಾರ್ಡನ್ ಕಾರಣ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿಯ ಪೋಷಕರು ಬಂದು ದಾಂಧಲೆ ನಡೆಸಿದ್ದಾರೆ.  ಘಟನೆ ವಿಚಾರ ತಿಳಿದ ತಕ್ಷಣ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿ ಸಾವಿಗೆ ಹಾಸ್ಟೆಲ್ ವಾರ್ಡನ್ ಕಾರಣ ಎಂದು ಆರೋಪಿಸಿ ದಾಂಧಲೆ ನಡೆಸಿದ್ದಾರೆ.

ಇದ್ದ ಒಬ್ಬನೇ ಒಬ್ಬ ಪುತ್ರನ ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹಾಸ್ಟೆಲ್ ಹಾಗು ಕಾಲೇಜು ಆಡಳಿತ ಮಂಡಳಿ ವಿರುದ್ಧ ಕುಟುಂಬ ಸದಸ್ಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಡಳಿತ ಮಂಡಳಿ ಪ್ರಮುಖರು ಬರೋ ವರೆಗೆ ಮೃತದೇಹ ತೆಗೆಯಲು ಬಿಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಪೊಲೀಸರ ಜೊತೆಗೂ ಸಂಬಂಧಿಕರು ವಾಗ್ವಾದ ನಡೆಸಿದ್ದಾರೆ. ಕೂಡಲೇ ಆಡಳಿತ ಮಂಡಳಿಯವರು ಬರಬೇಕು ಎಂದು ಒತ್ತಾಯಿಸಿದ್ದಾರೆ. ಘಟನೆ ನಡೆದು ಮೂರು ಗಂಟೆಯಾದರೂ  ಆಡಳಿತ ಮಂಡಳಿಯರು ಇನ್ನೂ ಬಂದಿಲ್ಲ ಎಂದು ಕಿಡಿಕಾರಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ.

Sulekha