ಗಾಂಜಾ ಸೇವನೆ  ಆರೋಪ, ಖಾಕಿ ಕಿರುಕುಳ – ಮರ್ಯಾದೆಗೆ ಅಂಜಿ ವಿದ್ಯಾರ್ಥಿ ಆತ್ಮಹತ್ಯೆ

ಗಾಂಜಾ ಸೇವನೆ  ಆರೋಪ, ಖಾಕಿ ಕಿರುಕುಳ – ಮರ್ಯಾದೆಗೆ ಅಂಜಿ ವಿದ್ಯಾರ್ಥಿ ಆತ್ಮಹತ್ಯೆ

ಗಾಂಜಾ ಸೇವನೆ  ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮರ್ಯಾದೆಗೆ ಅಂಜಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದಲ್ಲಿ  ನಡೆದಿದೆ. ಗಿರಿನಗರದ ಮನೆಯೊಂದರಲ್ಲಿ 20 ವರ್ಷದ ಯುವಕ ಆದಿತ್ಯ ಮ್ಯಾಗೇರಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.ಮೃತ ಆದಿತ್ಯ ಕಿಟಲ್ ಕಾಲೇಜಿನಲ್ಲಿ ಬಿಎಸ್‌ಸಿ ಓದುತ್ತಿದ್ದ. ಕಳೆದ ಶನಿವಾರ ವಿದ್ಯಾಗಿರಿ ಪೊಲೀಸರು ಆದಿತ್ಯ ಮ್ಯಾಗೇರಿಯನ್ನು ವಶಕ್ಕೆ ಪಡೆದಿದ್ದರು. ಯುವಕ ಗಾಂಜಾ ಸೇವಿಸಿದ್ದಾನೆ ಎಂದು ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಗಾಂಜಾ ಸೇವನೆ ಬಗ್ಗೆ ಡ್ರಗ್‌ ಟೆಸ್ಟ್ ನಡೆಸಿದಾಗ ನೆಗೆಟಿವ್ ರಿಪೋರ್ಟ್ ಬಂದಿತ್ತು.

ಪೊಲೀಸರು ಸುಮಾರು 40ಕ್ಕೂ ಹೆಚ್ಚು ಯವಕರನ್ನು ವಶಕ್ಕೆ ಪಡೆದಿದ್ದರು. ಟೆಸ್ಟ್‌ನಲ್ಲಿ ನೆಗೆಟಿವ್ ಬಂದಿದ್ದರೂ ಆದಿತ್ಯ ಮ್ಯಾಗೇರಿಯಿಂದ ಪೊಲೀಸರು 2 ಸಾವಿರ ರೂಪಾಯಿಯನ್ನು ಪಡೆದಿದ್ದರು. ಮೊದಲಿಗೆ 10 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಪೊಲೀಸರು ನಂತರ 2 ಸಾವಿರ ರೂಪಾಯಿಯನ್ನುತೆಗೆದುಕೊಂಡಿದ್ದರು. ಇದಾದ ಬಳಿಕ ಗಾಂಜಾ ಕೇಸ್‌ನಲ್ಲಿ ಸಿಲುಕಿ ಮರ್ಯಾದೇ ಹೋಯ್ತು ಅಂತ ನೊಂದ ಆದಿತ್ಯ ಮ್ಯಾಗೇರಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.

ಇದನ್ನೂ ಓದಿ: ಹೆಂಡತಿನ ಕೊಂ*ದು ಮಗು ಜೊತೆ ಬಾವಿಗೆ ಹಾರಿದ ಗಂಡ – ಕೂಡಲೇ ಬಾವಿಗೆ ಜಿಗಿದು ಮಗುವನ್ನ ರಕ್ಷಿಸಿದ ಸ್ಥಳೀಯರು

ಮಗನ ಸಾವಿನಿಂದಾಗಿ ಆದಿತ್ಯ ಮ್ಯಾಗೇರಿ ತಾಯಿ ತೀವ್ರ ಆಘಾತಕ್ಕೊಳಗಾಗಿದ್ದು, ನನ್ನ ಮಗ ಸಾಯಲು ಪೊಲೀಸರೇ ಕಾರಣ ಎಂದು ಕಣ್ಣೀರಿಟ್ಟಿದ್ದಾರೆ. ಮಗನ ಶವವಿದ್ದ ಶವಗಾರದ ಮುಂದೆ ಆದಿತ್ಯ ತಾಯಿ ಕಣ್ಣೀರಾಕಿದ್ದಾರೆ. ಮತ್ತೊಂದೆಡೆ ಡ್ರಗ್‌ ಟೆಸ್ಟ್ ವೇಳೆ ಪಾಸಿಟಿವ್ ಬಂದವರ ಹತ್ತಿರ ಪೊಲೀಸರು 25,000 ದಿಂದ 30,000 ರೂ.ವರೆಗೆ ಪೋನ್ ಪೇ ಮುಖಾಂತರ ಹಾಗೂ ಮೂರನೇ ವ್ಯಕ್ತಿ ಮುಖಾಂತರ ಹಣ ಹಾಕಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಣ ಕೊಡದೆ ಇದ್ದರೆ ಬೇರೆ ಕೇಸ್‌ನಲ್ಲಿ ಸಿಲುಕಿಸುತ್ತೇವೆ ಎಂದು ಪೊಲೀಸರು ಬೆದರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ತಪ್ಪಿತಸ್ಥ ಪೇದೆಗಳ ಮೆಲೆ ಕ್ರಮ ಆಗಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

Kishor KV