ವಿದ್ಯಾರ್ಥಿನಿ ಸ್ನಾನ ಮಾಡುವಾಗ ಸಹಪಾಠಿಗಳಿಂದಲೇ ಚಿತ್ರೀಕರಣ – ಮೂವರು ವಿದ್ಯಾರ್ಥಿನಿಯರಿಗೆ ಕಾಲೇಜಿಂದ ಗೇಟ್‌ಪಾಸ್..!
ಕಾಲೇಜು ಅಂದ ಮೇಲೆ ತುಂಟತನ, ಚೇಷ್ಟೆ, ಗಂಭೀರತೆ ಎಲ್ಲವೂ ಇರುತ್ತದೆ. ಇನ್ನು ಕಾಲೇಜ್ ಹಾಸ್ಟೆಲ್ ಅಂದಮೇಲೆ ಕೇಳಬೇಕಾ. ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳ ತರಲೆ, ಖುಷಿಗೆ ಪಾರವೇ ಇರುವುದಿಲ್ಲ. ಆದರೆ, ಇಲ್ಲೊಂದು ಕಾಲೇಜಿನ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಗಾದ ನೋವು ಅವಮಾನಕ್ಕೆ ಸಹಪಾಠಿಗಳೇ ಕಾರಣರಾಗಿದ್ದಾರೆ. ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೊಬ್ಬಳು ಸ್ನಾನ ಮಾಡುವ ವಿಡಿಯೋವನ್ನು ಆಕೆಯ ಸಹಪಾಠಿಗಳೇ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಮಾಡಿದ ತಪ್ಪಿಗೆ ಮೂವರು ವಿದ್ಯಾರ್ಥಿನಿಯರಿಗೆ ಕಾಲೇಜಿಂದ ಗೇಟ್‌ಪಾಸ್ ನೀಡಲಾಗಿದೆ. ಇದು ನಡೆದಿರುವುದು ಉಡುಪಿಯ ಪ್ರತಿಷ್ಠಿತ ಕಾಲೇಜ್ ವೊಂದರಲ್ಲಿ.
ಇದನ್ನೂ ಓದಿ: ಚಳಿಗಾಲಕ್ಕೂ ಮುನ್ನವೇ ರಾಜ್ಯದಲ್ಲಿ `ಮದ್ರಾಸ್ ಐ’ಕಂಟಕ – ಮಕ್ಕಳೇ ಇದರ ಟಾರ್ಗೆಟ್!
ಉಡುಪಿಯ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂವರು ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ಇನ್ನು ಕೃತ್ಯ ಎಸಗಿ, ಕಾಲೇಜಿಂದ ಅಮಾನತು ಆಗಿರುವ ಮೂವರು ವಿದ್ಯಾರ್ಥಿಗಳು ಹಿಂದೂಯೇತರ ಧರ್ಮಗಳಿಗೆ ಸೇರಿದವರಾಗಿರುವುದರಿಂದ ಘಟನೆ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಕಾಲೇಜಿನ ನಿರ್ದೇಶಕರಾದ ರಶ್ಮಿ ಕೃಷ್ಣಪ್ರಸಾದ್ ಅವರು ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದು, ವಿಡಿಯೋ ಚಿತ್ರೀಕರಣದ ಘಟನೆಯು ಬುಧವಾರದಂದು ನಡೆದಿದೆ. ಈ ವಿಚಾರ ನನ್ನ ಗಮನಕ್ಕೆ ಬಂದ ಕೂಡಲೇ ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಕಾಲೇಜು ಆವರಣದಲ್ಲಿ ಮೊಬೈಲ್ ಬ್ಯಾನ್ ಆಗಿದ್ದರೂ ಇವರು ಮೊಬೈಲ್ ಬಳಸಿದ್ದು ತಪ್ಪು. ಅದರ ಜೊತೆಗೆ ವಿದ್ಯಾರ್ಥಿನಿ ಸ್ನಾನ ಮಾಡುತ್ತಿರುವುದನ್ನು ಚಿತ್ರೀಕರಣ ಮಾಡುವುದು ಘೋರ ತಪ್ಪಾಗಿದೆ. ಈ ಎರಡೂ ಕಾರಣಗಳಿಂದ ತಪ್ಪಿತಸ್ಥ ವಿದ್ಯಾರ್ಥಿನಿಯರನ್ನು ಅಮಾನತು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಪಮಾನಕ್ಕೊಳಗಾದ ವಿದ್ಯಾರ್ಥಿನಿಗೆ ತಾವು ತಗೆದ ವಿಡಿಯೋಗಳನ್ನು ಮೂವರು ಆರೋಪಿಗಳು ತೋರಿಸಿದ್ದರು ಎಂದು ಹೇಳಲಾಗಿದೆ. ಜೊತೆಗೆ ಆಕೆಯ ಎದುರೇ ವಿಡಿಯೋ ಡಿಲಿಟ್ ಕೂಡಾ ಮಾಡಿದ್ದಾರಂತೆ. ಆದರೆ, ತನ್ನ ವಿಡಿಯೋವನ್ನು ಚಿತ್ರೀಕರಿಸಿದ್ದು ನೋಡಿ ವಿದ್ಯಾರ್ಥಿನಿ ತೀವ್ರವಾಗಿ ನೊಂದಿದ್ದಾಳೆ. ತೀವ್ರವಾಗಿ ಮನನೊಂದಿದ್ದ ಶೋಷಿತ ವಿದ್ಯಾರ್ಥಿನಿಯು ಪೊಲೀಸ್ ದೂರನ್ನು ನೀಡಲು ಹಿಂದೇಟು ಹಾಕಿದ್ದಳು. ಹಾಗಾಗಿ, ಕಾಲೇಜು ಆಡಳಿತ ಮಂಡಳಿಯೇ, ಪೊಲೀಸರಿಗೆ ಸುದ್ದಿಯನ್ನು ಮುಟ್ಟಿಸಿದೆ. ಪೊಲೀಸರು ಬಂದು ಪ್ರಾಥಮಿಕ ವಿಚಾರಣೆ ನಡೆಸುವಾಗ ಕೃತ್ಯಕ್ಕೆ ಬಳಸಲಾಗಿರುವ ಫೋನ್ ಗಳನ್ನು ಪೊಲೀಸರಿಗೆ ಒಪ್ಪಿಸಿರುವುದಾಗಿ ರಶ್ಮಿ ಕೃಷ್ಣಪ್ರಸಾದ್ ಅವರು ತಿಳಿಸಿದ್ದಾರೆ.