ರೋಹಿಲ್ & ಗಿಲ್ ಫೇಲ್.. ಸೂರ್ಯ? – ಪ್ರಜ್ವಲಿಸದೇ ಇದ್ರೆ ಮುಳುಗೋದು ಪಕ್ಕಾ!
T-20 ವಿಶ್ವಕಪ್ ಕೊನೇ ಟೂರ್ನಿಯಾಗುತ್ತಾ?

ನ್ಯೂಜಿಲೆಂಡ್ ವಿರುದ್ಧದ ಟಿ-20ಐ ಸರಣಿಯಲ್ಲಿ ಭಾರತ ಗೆಲ್ಲೋದು ಎಷ್ಟು ಮುಖ್ಯನೋ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಬ್ಯಾಟಿಂದ ಬಿಗ್ ಸ್ಕೋರ್ ಬರೋದು ಅಷ್ಟೇ ಮುಖ್ಯ. ಯಾಕಂದ್ರೆ ಈ ಸರಣಿ ಬಿಟ್ರೆ ನೆಕ್ಸ್ಟ್ ಡೈರೆಕ್ಟ್ ಟಿ-20 ವಿಶ್ವಕಪ್. ಸೋ ಅಲ್ಲಿ ಒಂದೊಂದು ಪಂದ್ಯವೂ ಮಸ್ಟ್ ವಿನ್ ಮ್ಯಾಚ್ಗಳೇ ಆಗಿರುತ್ತೆ. ಪ್ಲೇಯಿಂಗ್ 11ನಲ್ಲಿರೋ ಪ್ರತೀ ಆಟಗಾರನೂ ತನ್ನದೇ ಆದ ಕಾಂಟ್ರಿಬ್ಯೂಷನ್ ಕೊಡ್ಬೇಕಾಗುತ್ತೆ. ಹಾಗೇನಾದ್ರೂ ಸೂರ್ಯ ಈ ಸರಣಿಯಲ್ಲೂ ಪ್ರಜ್ವಲಿಸದೇ ಇದ್ರೆ ಭವಿಷ್ಯಕ್ಕೇ ಗ್ರಹಣ ಹಿಡಿಯೋದು ಗ್ಯಾರಂಟಿ.
ಇದನ್ನೂ ಓದಿ : MI ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ ಭರ್ಜರಿ ಜಯ – ಸತತ ಸೋಲಿನಿಂದ ಕಂಗೆಟ್ಟ ಕೌರ್ ಪಡೆ
ಟಿ-20ಐ ಸ್ಪೆಷಲಿಸ್ಟ್ ಬ್ಯಾಟರ್, ಮಿಸ್ಟರ್ 360 ಡಿಗ್ರಿ ಬ್ಯಾಟರ್, ಐಸಿಸಿ ನಂಬರ್ 1 ರ್ಯಾಂಕಿಂಗ್ ಬ್ಯಾಟರ್ ಆಗಿ ಚುಟುಕು ಮಾದರಿಯಲ್ಲಿ ಮೆರೀತಿದ್ದ ಸೂರ್ಯ ಕ್ಯಾಪ್ಟನ್ ಆದ್ಮೇಲೆ ಕಂಪ್ಲೀಟ್ ಆಗಿ ಡಲ್ ಆದ್ರು. 2025ರ ಇಡೀ ವರ್ಷ ಅವ್ರ ಬ್ಯಾಟಿಂದ ಒಂದೇ ಒಂದು ಅರ್ಧಶತಕ ಬರ್ಲಿಲ್ಲ. ಈಗ ಕಿವೀಸ್ ಪಡೆ ವಿರುದ್ಧವೂ ಸಿಡಿಯದೇ ಇದ್ರೆ ಸೂರ್ಯನ ಭವಿಷ್ಯವೇ ಕತ್ತಲಾಗೋ ಚಾನ್ಸಸ್ ಇದೆ. ಯಾಕಂದ್ರೆ ಟಿ-20 ವಿಶ್ವಕಪ್ಗೂ ಮುನ್ನ ಇರುವಂಥ ಒಂದೇ ಒಂದು ಸರಣಿ ಇದು.
ಸೂರ್ಯನಿಗೆ ಫಾರ್ಮ್ ಚಿಂತೆ ನಡುವೆ 100ನೇ ಟಿ-20ಐ ಪಂದ್ಯ!
ಟೀಂ ಇಂಡಿಯಾ ಪರ ಟಿ-20ಐಗೆ ಲೇಟಾಗಿ ಎಂಟ್ರಿ ಕೊಟ್ರೂ ಕೂಡ ಸೂರ್ಯಕುಮಾರ್ ಬಹುಬೇಗನೇ ಕ್ಲಿಕ್ ಆದ್ರು. 2021ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಪರ ಟಿ-20ಐ ಪಂದ್ಯ ಆಡಿದ ಸೂರ್ಯ ಅಲ್ಲಿಂದ ಹಿಂತಿರುಗಿ ನೋಡಲಿಲ್ಲ. ಸ್ಫೋಟಕ ಬ್ಯಾಟರ್ ಆಗಿ 2024ರಲ್ಲಿ ಟಿ-20ಐ ಕ್ಯಾಪ್ಟನ್ ಕೂಡ ಆದ್ರು. ಈಗ ಭಾರತ ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲೇ ತಮ್ಮ 100 ನೇ ಟಿ20ಐ ಪಂದ್ಯ ಆಡ್ತಾರೆ. ಅಗ್ರೆಸ್ಸಿವ್ ಬ್ಯಾಟಿಂಗ್ಗೆ ಹೆಸರುವಾಗಿಯಾಗಿದ್ದ ಸೂರ್ಯ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 2,788 ರನ್ ಗಳಿಸಿದ್ದಾರೆ, ಸರಾಸರಿ 35.29 ಮತ್ತು 163.23 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. 35ನೇ ವಯಸ್ಸಿನ ಸೂರ್ಯ 4 ಟಿ20ಐ ಶತಕಗಳನ್ನು ಸಿಡಿಸಿದ್ದಾರೆ. 21 ಅರ್ಧಶತಕ ಬಾರಿಸಿದ್ದಾರೆ. ಟಿ-20ಐನಲ್ಲಿ ಗ್ಲೆನ್ ಮ್ಯಾನ್ಸ್ ವೆಲ್ ಮತ್ತು ರೋಹಿತ್ ಶರ್ಮಾ ತಲಾ 5 ಶತಕಗಳೊಂದಿಗೆ ಟಾಪ್ 1 ಪ್ಲೇಸ್ ನಲ್ಲಿದ್ರೆ ಸೂರ್ಯ 4 ಶತಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಹೀಗಿದ್ರೂ ಕಳೆದ ಒಂದೂವರೆ ವರ್ಷಗಳ ರೆಕಾರ್ಡ್ಸ್ ಮಾತ್ರ ತೀರಾ ಕಳಪೆಯಾಗಿದೆ.
ಸೂರ್ಯನಿಗೆ ಕ್ಯಾಪ್ಟನ್ಸಿಯೇ ಮುಳುವಾಯ್ತಾ?
2023ರಲ್ಲಿ ತಮ್ಮ ಕೆರಿಯರ್ನ ಪೀಕ್ನಲ್ಲಿದ್ದ ಸೂರ್ಯ 2024ರಲ್ಲಿ ಮಂಕಾಗಿದ್ರು. 2024ರ ಕ್ಯಾಲೆಂಡರ್ ವರ್ಷದಲ್ಲಿ 11 ಪಂದ್ಯಗಳಿಗೆ 29.10ರ ಸರಾಸರಿಯಲ್ಲಿ 291 ರನ್ಗಳಿಸಿದ್ರು. ಇನ್ನು ನೆಕ್ಸ್ಟ್ 2025ರಲ್ಲಂತೂ ಇನ್ನೂ ವೀಕ್ ಆಗಿತ್ತು. ಕಳೆದ ವರ್ಷ 21 ಪಂದ್ಯಗಳನ್ನ ಆಡಿದ ಸೂರ್ಯ ಒಂದೇ ಒಂದು ಅರ್ಧಶತಕ ಸಿಡಿಸಲಿಲ್ಲ. 13.62ರ ಸರಾಸರಿಯಲ್ಲಿ 218 ರನ್ಗಳಿಸಿದ್ರು. ಅದೂ ಕೂಡ 123.16ರ ಸ್ಟ್ರೈಕ್ರೇಟ್ನಲ್ಲಿ. ಇಡೀ ವರ್ಷ ಅವ್ರ ಬ್ಯಾಟಿಂದ ಬಂದಿದ್ದೇ 18 ಬೌಂಡರಿ, 10 ಸಿಕ್ಸರ್ ಮಾತ್ರ. ಮಾತ್ರ. ಕಳೆದ ಡಿಸೆಂಬರ್ ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧವೂ ಇಂಪ್ರೆಸ್ಸಿವ್ ಇನ್ನಿಂಗ್ಸ್ ಬರಲಿಲ್ಲ. 4 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 34 ರನ್. ಹೀಗಾಗಿ ಸೂರ್ಯನ ಪರ್ಫಾಮೆನ್ಸ್ ಬಗ್ಗೆ ಆಗ್ಗಾಗ್ಗೆ ಟೀಕೆಗಳು ಕೇಳಿ ಬರ್ತಾನೇ ಇದೆ. ಹೀಗಿದ್ರೂ ಟಿ-20ಐ ಫಾರ್ಮೆಟ್ನಲ್ಲಿ ಭಾರತ ಗೆಲ್ತಿದೆ ಅನ್ನೋದಕ್ಕೆ ಮಾತ್ರವೇ ಸೂರ್ಯನನ್ನ ಟಿ-20 ವಿಶ್ವಕಪ್ಗೂ ಕ್ಯಾಪ್ಟನ್ ಆಗಿ ಮುಂದುವರಿಸಿದ್ದಾರೆ. ಸೋ ಈಗ ನ್ಯೂಜಿಲೆಂಡ್ ವಿರುದ್ಧ ಸೂರ್ಯನಿಂದ ಬೆಸ್ಟ್ ಸ್ಕೋರ್ ಬರಲೇಬೇಕು.
ಸೂರ್ಯನಿಗೆ ಬಿಡುತ್ತಾ ಗ್ರಹಣ?
ಟಿ-20 ವಿಶ್ವಕಪ್ ಗೂ ಮುನ್ನ ಮತ್ತೆ ಫಾರ್ಮ್ ಗೆ ಬರಬೇಕು
ಭಾರತದಲ್ಲೇ ನಡೆಯುವ ಐಸಿಸಿ ಟೂರ್ನಿ ಗೆಲ್ಲಲು ಕಾನ್ಫಿಡೆನ್ಸ್
ವಿಶ್ವಕಪ್ ಬಳಿಕವೂ ತಂಡದಲ್ಲಿ ಉಳೀಬೇಕು ಅಂದ್ರೆ ಉತ್ತಮ ಪ್ರದರ್ಶನ
ಶುಭ್ ಮನ್ ಗಿಲ್ ರಂತೆಯೇ ತಂಡದಿಂದ ಹೊರಬೀಳುವ ಸಾಧ್ಯತೆ
2028ರ ಟಿ-20 ವಿಶ್ವಕಪ್ ಗೆ ಹೊಸ ಕ್ಯಾಪ್ಟನ್ ನೇಮಕ ಸಾಧ್ಯತೆ
ಆಲ್ರೆಡಿ ಏಕದಿನ ಮಾದರಿಯಲ್ಲೂ ಕ್ಯಾಪ್ಟನ್ ಶುಭ್ ಮನ್ ಗಿಲ್ ತಂಡಕ್ಕೆ ಹೊರೆಯಾಗಿದ್ದಾರೆ. ಅವ್ರಿಂದಲೂ ಬಿಗ್ ಇನ್ನಿಂಗ್ಸ್ ಬರ್ಲಿಲ್ಲ. ಹೀಗಿದ್ರೂ ಈ ವರ್ಷ ಮೊದಲ ಎರಡು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ದು ಕೊಂಚ ಸಮಾಧಾನ ತಂದಿರ್ಬೋದು. ಆದ್ರೆ ಸೂರ್ಯನ ಬ್ಯಾಟಿಂದ ಇನ್ನೂ ಬಿಗ್ ಇನ್ನಿಂಗ್ಸ್ ಬಂದಿಲ್ಲ. ಟಿ-20 ವಿಶ್ವಕಪ್ ಬಳಿಕ ತಂಡದಲ್ಲಿ ಉಳೀಬೇಕು ಅಂದ್ರೆ ರನ್ಸ್ ಮೂಲಕವೇ ಸಾಧ್ಯ. ಇಲ್ಲದೇ ಇದ್ರೆ ತಂಡದಿಂದಲೇ ಹೊರಗಿಟ್ರೂ ಅಚ್ಚರಿ ಇಲ್ಲ.

ನೋಡಿರಿ

