ಮ್ಯಾಂಗೋ ಪಚ್ಚ ಸಿನಿಮಾಗೆ ಸಖತ್ ರೆಸ್ಪಾನ್ಸ್ – ಜೊತೆಯಲ್ಲೇ ಕುಳಿತು ಸಿನಿಮಾ ನೋಡಿದ ಕಿಚ್ಚ ಸುದೀಪ್ ದಂಪತಿ

ಮ್ಯಾಂಗೋ ಪಚ್ಚ ಸಿನಿಮಾಗೆ ಸಖತ್ ರೆಸ್ಪಾನ್ಸ್ – ಜೊತೆಯಲ್ಲೇ ಕುಳಿತು ಸಿನಿಮಾ ನೋಡಿದ ಕಿಚ್ಚ ಸುದೀಪ್ ದಂಪತಿ

ಮ್ಯಾಂಗೋ ಪಚ್ಚ ಸಿನಿಮಾ ರಿಲೀಸ್ ಆಗಿದೆ. ಮೊದಲ ದಿನವೇ ಮೊದಲ ಶೋ ನೋಡಿದ ಅಭಿಮಾನಿಗಳು ಸಿನಿಮಾ ವಿಚಾರದಲ್ಲಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಕಿಚ್ಚ ಸುದೀಪ್ ಮತ್ತು ಪ್ರಿಯಾ ಸುದೀಪ್ ಜೊತೆಯಾಗಿ ಕುಳಿತು ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ:BBK 13 ಪ್ರೋಮೋ ಔಟ್.. ಹೊಸ ಸೀಸನ್‌ ಸ್ಪರ್ಧಿಗಳು ಇವರೇ? – ಬಿಗ್‌ಬಾಸ್ ಬೇಗ ಶುರುವಾಗ್ತಿರೋದ್ಯಾಕೆ? ‌

ಬೆಂಗಳೂರಿನ ಕೆ.ಜಿ.ರಸ್ತೆಯ ಸಂತೋಷ್ ಥಿಯೇಟರ್ ನಲ್ಲಿ ಫಸ್ಟ್ ಡೇ ಫಸ್ಟ್ ಶೋ ನೋಡಲು ಕಿಚ್ಚನ ಕುಟುಂಬ ಆಗಮಿಸಿದೆ. ಸಾನ್ವಿ ಸುದೀಪ್ ಮತ್ತು ಪ್ರಿಯಾ ಸುದೀಪ್ ಹಾಗೂ. ಸಂಚಿತ್ ಸಂಜೀವ್ ಸೇರಿದಂತೆ ಮನೆಯವರೆಲ್ಲ ಬಂದಿದ್ದಾರೆ. ಸಾನ್ವಿ ಸುದೀಪ್ ಕಪ್ಪು ಶರ್ಟ್ , ಜೀನ್ಸ್  ಪ್ಯಾಂಟ್ , ಕಣ್ಣಿಗೆ ಸ್ಟೈಲಿಶ್ ಆದ ಸನ್ ಗ್ಲಾಸ್ ಹಾಕಿ ಸಖತ್ ಮಿಂಚಿದ್ದಾರೆ. ಇನ್ನು ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ಸುದೀಪ್ ಜೊತೆಯಾಗಿಯೇ ಕುಳಿತು ಸಿನಿಮಾ ನೋಡಿದ್ದು, ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾರೆ.

ಮ್ಯಾಂಗೋ ಪಚ್ಚ ಚಿತ್ರದಲ್ಲಿ ಮೈಸೂರು ಹುಡುಗನ ಕತೆ ಇದೆ. ಮ್ಯಾಂಗೋ ಪಚ್ಚ ಆಗಿಯೇ ಬದಲಾಗುವ ಪ್ರಶಾಂತ್‌ ಎಂಬ ಯುವಕನ ಸುತ್ತ ಕತೆ ಸಾಗುತ್ತದೆ. ಮೈಸೂರಿನಲ್ಲಿ ಗಾಂಜಾ ದಂಧೆ ಹೇಗೆಲ್ಲ ನಡೀತಿತ್ತು ಅನ್ನೋದು ಇದರಲ್ಲಿದೆ. ಕಿಚ್ಚನ ನಿರೂಪಣೆಯಲ್ಲಿ ಪಚ್ಚನ ಪರಿಚಯ ಕೂಡ ಆಗುತ್ತದೆ. ಸಂಚಿತ್ ಸಂಜೀವ್ ಬೆರೆ ಯಾರೋ ಅಲ್ಲ. ಸುದೀಪ್ ಅವರ ಅಕ್ಕನ ಮಗ ಈ ಸಂಚಿತ್ ಸಂಜೀವ್.

ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್ ಈ ಚಿತ್ರದಲ್ಲೂ ಹಾಡಿದ್ದಾರೆ. ಮಾರ್ಕ್ ಚಿತ್ರದಲ್ಲಿ ಅಜನೀಶ್ ಲೋಕನಾಥ್ ಸಂಗೀತದಲ್ಲಿ ಮಸ್ತ್ ಮಲೈಕಾ ಹಾಡಿದರು. ಇದು ಹಿಟ್ ಆಗಿತ್ತು. ವೈರಲ್ ಕೂಡ ಆಗಿತ್ತು. ಚಂದನವನ ಕ್ರಿಟಿಕ್ಸ್ ಅವಾರ್ಡ್ ಕೂಡ ತಂದು ಕೊಡ್ತು ಮ್ಯಾಂಗೋ ಪಚ್ಚ ಚಿತ್ರದಲ್ಲಿ ಚರಣ್ ರಾಜ್ ಸಂಗೀತಕ್ಕೆ ಹಾಡಿದ್ದಾರೆ. ಅರಗಿಣಿ ಅನ್ನುವ ಮಧುರ ಹಾಡಿಗೆ ಧ್ವನಿ ಆಗಿದ್ದಾರೆ. ಚಿತ್ರದಲ್ಲಿ ಖಡಕ್ ಮಾಲ್ ಮತ್ತು ಹಸ್ರವ್ವ ಅನ್ನುವ ಇನ್ನೆರಡು ಹಾಡುಗಳೂ ಇವೆ. ಇವು ಗಮನ ಸೆಳೆದಿವೆ. ಈ ಚಿತ್ರಕ್ಕೆ ಕಾಜಲ್ ಕುಂದರ್ ನಾಯಕಿ ಆಗಿದ್ದಾರೆ. ಸಂಚಿತ್ ಸಂಜೀವ್ ಜೋಡಿ ಆಗಿದ್ದಾರೆ. ವಿಜಯ್ ರಾಘವೇಂದ್ರ ಅಳಿಯ ಜೈ ಇಲ್ಲಿ ಸಂಚಿತ್ ಸಹೋದರ ರೋಲ್ ಮಾಡಿದ್ದಾರೆ.

Sulekha

Leave a Reply

Your email address will not be published. Required fields are marked *