ಎರಡೂ ಪಂದ್ಯಗಳಲ್ಲಿ ಸೋತು ಸುಣ್ಣವಾದ ಬಲಿಷ್ಠ ಆಸ್ಟ್ರೇಲಿಯಾ – ವಿಶ್ವಕಪ್‌ನಲ್ಲಿ ಆಸೀಸ್ ಶಾಕಿಂಗ್ ಪರ್ಫಾಮೆನ್ಸ್

ಆಸ್ಟ್ರೇಲಿಯನ್ ಕ್ರಿಕೆಟ್ ತಂಡ ಈ ಬಾರಿಯ ವರ್ಲ್ಡ್ಕಪ್ನಲ್ಲಿ ನಿಜಕ್ಕೂ ಶಾಕಿಂಗ್ ಪರ್ಫಾಮೆನ್ಸ್ ನೀಡ್ತಾ ಇದೆ. ಟೂರ್ನಿಯ ಆರಂಭದಲ್ಲೇ ಮೇಲಿಂದ ಮೇಲೆ ಹೊಡೆತ ತಿಂತಿದೆ. ಆಡಿದ ಎರಡೂ ಪಂದ್ಯಗಳನ್ನ ಆಸ್ಟ್ರೇಲಿಯಾ ಸೋತಿದೆ. ಕ್ರಿಕೆಟ್ ಅಭಿಮಾನಿಗಳೆಲ್ಲಾ ಆಸ್ಟ್ರೇಲಿಯನ್ನರಿಗೆ ಏನಾಯ್ತಪ್ಪಾ ಅಂತಾನೆ ಮಾತನಾಡಿಕೊಳ್ತಿದ್ದಾರೆ. ಯಾಕಂದ್ರೆ 5 ಬಾರಿ ವರ್ಲ್ಡ್ಕಪ್ ಗೆದ್ದಿರುವ ಆಸ್ಸೀಗಳು ಈ ರೀತಿ ಮೇಲಿಂದ ಮೇಲೆ ಸೋಲೋದನ್ನ ಯಾರೂ ನಿರೀಕ್ಷಿಸಿರಲಿಲ್ಲ. ಅದು ಕೂಡ ಹೀನಾಯವಾಗಿ ಸೋಲ್ತಾರೆ ಅಂತಾ ಯಾರೂ ಅಂದುಕೊಂಡೇ ಇಲ್ಲ.
ಇದನ್ನೂ ಓದಿ: ಪಾಕ್ ವಿರುದ್ಧ ಕಣಕ್ಕಿಳಿಯಲು ಶುಭ್‌ಮನ್ ಗಿಲ್ ಪ್ರ್ಯಾಕ್ಟೀಸ್ – ಇಶಾನ್ ಕಿಶನ್ ಮತ್ತು ಗಿಲ್ ನಡುವೆ ಆಡೋದ್ಯಾರು?
ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಭಾರತದ ಎದುರು ಸೋತಿತ್ತು. ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬರೋಬ್ಬರಿ 134 ರನ್ಗಳ ಅಂತರದಿಂದ ಸೋತಿದೆ. ಆಡಿದ ಎರಡೂ ಮ್ಯಾಚ್ಗಳಲ್ಲೂ ಆಸ್ಟ್ರೇಲಿಯಾ ಸೋಲುಕಂಡಿದೆ. ಒಂದು ಕಾಲದಲ್ಲಿ ಆಸ್ಟ್ರೇಲಿಯಾ ಟೀಂ ಅಂದ್ರೆ ಸಾಕು ಫೈನಲ್ಗೆ ಗ್ಯಾರಂಟಿ ಎಂಬಂತಿತ್ತು. ವರ್ಲ್ಡ್ಕಪ್ ಸೇರಿದಂತೆ ಐಸಿಸಿ ಟೂರ್ನಿಗಳಲ್ಲಿ ಆಸ್ಟ್ರೇಲಿಯಾವನ್ನ ಮಣಿಸೋದೆ ದೊಡ್ಡ ಸಾಧನೆ. ಟೂರ್ನಿಯುದ್ದಕ್ಕೂ ಒಂದೇ ಮ್ಯಾಚ್ ಕೂಡ ಸೋಲದೆ ಟ್ರೋಫಿ ಗೆದ್ದಂತ ಟ್ರ್ಯಾಕ್ ರೆಕಾರ್ಡ್ ಆಸ್ಟ್ರೇಲಿಯನ್ ಕ್ರಿಕೆಟ್ ಟೀಂಗೆ ಇದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಾ ಡಿಪಾರ್ಟ್ಮೆಂಟ್ಗಳಲ್ಲೂ ಆಸ್ಟ್ರೇಲಿಯಾ ಒಂದು ಫುಲ್ ಫ್ಲೆಡ್ಜ್ ಟೀಂ ಆಗಿತ್ತು. ಆದ್ರೆ ಈ ಬಾರಿಯ ವರ್ಲ್ಡ್ಕಪ್ ಟೂರ್ನಿಯ ಮೊದಲ ಎರಡು ಪಂದ್ಯ ಮತ್ತು ಇತ್ತೀಚಿನ ಕೆಲ ಸರಣಿಗಳಲ್ಲಿ ಆಸ್ಸೀಗಳ ಪರ್ಫಾಮೆನ್ಸ್ ನೋಡಿದ್ರೆ ಇದೇನಾ ಆಸ್ಟ್ರೇಲಿಯನ್ ಟೀಂ ಅನ್ನೋ ಪ್ರಶ್ನೆ ಬರುತ್ತೆ.
ವಿಶ್ವಕಪ್ಗೂ ಮುನ್ನ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಂಡೇ ಸೀರಿಸ್ನಲ್ಲಿ 2-1 ಅಂತರದಿಂದ ಆಸ್ಟ್ರೇಲಿಯಾ ಸೀರಿಸ್ ಸೋತಿತ್ತು. ಬಳಿಕ ಭಾರತದಲ್ಲಿ ನಡೆದು ವಂಡೇ ಸೀರಿಸ್ನಲ್ಲೂ 2-1 ಅಂತರದಿಂದ ಸರಣಿ ಸೋತ್ರು. ಈಗ ವರ್ಲ್ಡ್ಕಪ್ನ ಮೊದಲ ಎರಡೂ ಮ್ಯಾಚ್ನ್ನ ಕೂಡ ಸೋತಿದ್ದಾರೆ. ಅದ್ರಲ್ಲೂ ಆಸ್ಟ್ರೇಲಿಯನ್ನರು ತಮ್ಮ ಫೀಲ್ಡಿಂಗ್ನಿಂದಾಗಿ ಮ್ಯಾಚ್ ಕಳೆದುಕೊಳ್ತಿದ್ದಾರೆ. ಭಾರತ ವಿರುದ್ಧ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕ್ಯಾಚ್ ಡ್ರಾಪ್ ಮಾಡಿ ಮ್ಯಾಚ್ ಕಳೆದುಕೊಂಡರು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯನ್ಸ್ ಒಟ್ಟು 6 ಕ್ಯಾಚ್ಗಳನ್ನ ಡ್ರಾಪ್ ಮಾಡಿದ್ದಾರೆ. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ್ದ ಸೌತ್ ಆಫ್ರಿಕಾ 311ರನ್ ಗಳಿಸಿತ್ತು. ಇನ್ನು ಆಸ್ಟ್ರೇಲಿಯನ್ ಬೌಲರ್ಸ್ ಯಾರು ಕೂಡ ಅಷ್ಟೊಂದು ಎಫೆಕ್ಟಿವ್ ಆಗಿ ಬೌಲಿಂಗ್ ಮಾಡುತ್ತಿಲ್ಲ. ಅದ್ರಲ್ಲೂ ಭಾರತದ ಪಿಚ್ನಲ್ಲಿ ಆಸ್ಟ್ರೇಲಿಯಾ ಪ್ರಮುಖ ಸ್ಪಿನ್ ಅಸ್ತ್ರವಾಗಿರುವ ಆ್ಯಡಮ್ ಜಾಂಪಾ ಬೌಲಿಂಗ್ ನಡೀತಾನೆ ಇಲ್ಲ. ಭಾರತ ಮತ್ತು ದಕ್ಷಿಣ ಆಫ್ರಿಕಾ ಬ್ಯಾಟ್ಸ್ಮನ್ಗಳು ಜಾಂಪಾ ಎಸೆದ ಬಾಲ್ಗಳಿಗೆ ಸರಿಯಾಗಿಯೇ ಚಚ್ಚಿದ್ದಾರೆ. ಇನ್ನು ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಮಿಂಚಿದ್ದ ಕ್ಯಾಮರೂನ್ ಗ್ರೀನ್ ಬೆಟ್ರಿ ಖಾಲಿಯಾದಂತೆ ಕಾಣ್ತಿದೆ. ಇವೆಲ್ಲದರ ಜೊತೆಗೆ ಆಸ್ಟ್ರೇಲಿಯನ್ ಪ್ಲೇಯರ್ಸ್ ಭಾರತದ ಕಂಡೀಷನ್ಗೆ ಇನ್ನೂ ಹೊಂದಿಕೊಂಡಂತೆ ಕಾಣ್ತಿಲ್ಲ. ಇಲ್ಲಿನ ಬಿಸಿಲಿಗೆ ಬಸವಳಿದು ಹೋಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧವಂತೂ ಕೇವಲ 177 ರನ್ಗಳಿಗೆ ಆಲೌಟ್ ಆಗಿದ್ದಾರೆ. ಯಾವ ಹಂತದಲ್ಲೂ ಆಸ್ಟ್ರೇಲಿಯನ್ ಸೈಡ್ನಿಂದ ಫೈಟೇ ಇಲ್ಲಿ. ಆಸ್ಟ್ರೇಲಿಯಾ ಬಲವಾಗಿ ನಂಬಿಕೊಂಡಿರುವ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಕೂಡ ಪರ್ಫಾಮ್ ಮಾಡ್ತಿಲ್ಲ.