ಅಭಿಷೇಕ್ ಇದ್ರಷ್ಟೇ ಹೊಡಿಬಡಿ – ಟಾಪ್-8ರಲ್ಲಿ ವೀಕೆಸ್ಟ್ ಟೀಂ ಭಾರತ
ಬೌಲಿಂಗ್ ನಿಂದಲೇ ವಿಶ್ವಕಪ್ ಗೆಲ್ತಾರಾ?

ಅಭಿಷೇಕ್ ಇದ್ರಷ್ಟೇ ಹೊಡಿಬಡಿ – ಟಾಪ್-8ರಲ್ಲಿ ವೀಕೆಸ್ಟ್ ಟೀಂ ಭಾರತಬೌಲಿಂಗ್ ನಿಂದಲೇ ವಿಶ್ವಕಪ್ ಗೆಲ್ತಾರಾ?

ಟಿ-20ಐ ಫಾರ್ಮೆಟ್​ನಲ್ಲಿ ಭಾರತ ಗೆಲ್ತಾ ಬರ್ತಿದ್ರೂ ಬ್ಯಾಟಿಂಗ್ ಅಷ್ಟೊಂದು ಇಂಪ್ರೆಸ್ಸಿವ್ ಆಗಿಲ್ಲ. ಕ್ಯಾಪ್ಟನ್ ಮತ್ತು ವೈಸ್ ಕ್ಯಾಪ್ಟನ್ ಫೇಲ್ಯೂರ್ ದೊಡ್ಡ ತಲೆನೋವಾಗಿದೆ. ಌಂಡ್ ಅಭಿಷೇಕ್ ಶರ್ಮಾ ಮೇಲೆಯೇ ಕಂಪ್ಲೀಟ್ ಡಿಪೆಂಡ್ ಆಗ್ತಿದ್ದಾರೆ. ಇಲ್ದಿದ್ರೆ ಬೌಲಿಂಗ್​ನಿಂದಾಗಿ ಮ್ಯಾಚ್ ಗೆಲ್ತಿದ್ದಾರೆ.

ಇದನ್ನೂ ಓದಿ : IPL ಬಾಗಿಲು ಒಡೆದ ಸರ್ಫರಾಜ್ – ಬೆಳಗ್ಗೆ 73 ರನ್.. ಸಂಜೆ CSKಗೆ ಖಾನ್

ಟಿ-20ಐ ಫಾರ್ಮೆಟ್​ನಲ್ಲಿ ಟೀಂ ಇಂಡಿಯಾ ಜಗತ್ತಿನಲ್ಲೇ ನಂಬರ್ 1 ಟೀಂ.. 2024ರ ಟಿ-20 ವಿಶ್ವಕಪ್ ಗೆದ್ಮೇಲೆ ಅನ್​ಬೀಟೆಬೆಲ್ ಟೀಂ.. ಇಂಗ್ಲೆಂಡ್, ಆಸೀಸ್​ನಂತ ಬಲಿಷ್ಠ ತಂಡಗಳೇ ಬಂದ್ರೂ ಭಾರತ ಜಗ್ಗಿಲ್ಲ. ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲೂ ನಂಬರ್ 1 ಪ್ಲೇಯರ್​ಗಳೇ ಇದ್ದಾರೆ. ಌಂಡ್ 20 ತಿಂಗಳಿಂದ ಒಂದೇ ಒಂದು ಸರಣಿ ಸೋತಿಲ್ಲ. ಬ್ಯಾಕ್​ ಟು ಬ್ಯಾಕ್ ಪಂದ್ಯ ಬಿಟ್ಟುಕೊಟ್ಟಿಲ್ಲ. ರಿಸಲ್ಟ್ ಮಾತ್ರ ದಿ ಬೆಸ್ಟ್ ಅನ್ನೋ ಹಾಗೇ ಇದೆ. ಹಾಗಂತ ತಂಡದಲ್ಲಿ ಎಲ್ಲವೂ ಬ್ಯಾಲೆನ್ಸಿಂಗ್ ಇದ್ಯಾ ಅಂದ್ರೆ ಇಲ್ವೇಇಲ್ಲ. ಬ್ಯಾಟಿಂಗ್ ಕಂಪ್ಲೀಟ್ ಕೊಲ್ಯಾಪ್ಸ್ ಆಗ್ತಿದೆ. ಇದೇ ವೀಕ್​ನೆಸ್ ಈಗ ಭಾರತಕ್ಕೆ ದೊಡ್ಡ ವಿಲನ್ ಆಗಿದೆ. ಇಡೀ ತಂಡ ಅಭಿಷೇಕ್ ಶರ್ಮಾ ಮೇಲೇ ಡಿಪೆಂಡ್ ಆಗಿದೆ. ಅಥವಾ ಬೌಲರ್​ಗಳನ್ನೇ ನಂಬಿಕೊಂಡಿದೆ.

ಅಭಿಷೇಕ್ ಇದ್ದಾಗ ರಾಕೆಟ್ ಸ್ಪೀಡ್.. ಔಟಾದ್ರೆ ಕೊಲ್ಯಾಪ್ಸ್!

ಕಳೆದ ಇಂಗ್ಲೆಂಡ್ ಸಿರೀಸ್​ನಿಂದ ಹಿಡ್ದು ಇತ್ತೀಚೆಗಿನ ಪಂದ್ಯದವರೆಗೂ ಪವರ್​ಪ್ಲೇನಲ್ಲಿ ಅಭಿಷೇಕ್ ಶರ್ಮಾ ಕಡೆಯಿಂದ 42 ಪರ್ಸೆಂಟ್ ರನ್ಸ್ ಬಂದಿದೆ. ಅಭಿಷೇಕ್ ಕ್ರೀಸ್​ನಲ್ಲಿದ್ದಾಗ ಟಾಪ್ 4 ಬ್ಯಾಟರ್​ಗಳು ಆರಾಮಾಗಿ 150 ಕ್ಕಿಂತ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸ್ತಿದ್ದಾರೆ. ಗಿಲ್ ಮತ್ತು ಸೂರ್ಯಕುಮಾರ್ ಕೂಡ ಅಭಿ ಇದ್ರಷ್ಟೇ ಹೊಡಿಬಡಿ ಆಟವಾಡ್ತಾರೆ. ಆದ್ರೆ ಅಭಿಷೇಕ್ ವಿಕೆಟ್ ಬಿತ್ತು ಅಂದ್ರೆ ನೆಕ್ಸ್​ಟ್ ಅಗ್ರ-ಕ್ರಮಾಂಕದ ಸ್ಟ್ರೈಕ್ ರೇಟ್ 147.79 ರಿಂದ 124.20 ಕ್ಕೆ ಕುಸಿದಿದೆ. ಸೌತ್ ಆಫ್ರಿಕಾ ವಿರುದ್ಧದ ಮೂರನೇ ಪಂದ್ಯದಲ್ಲಿ ಆರಂಭದಲ್ಲಿ ಅಭಿಷೇಕ್ ಮತ್ತು ಗಿಲ್ ಅದ್ಭುತವಾಗಿ ಬ್ಯಾಟ್​ ಬೀಸ್ತಿದ್ರು. ಗಿಲ್ ಅಂತೂ ಅಭಿಷೇಕ್ ನೇ ಓವರ್​ಟೇಕ್ ಮಾಡೋ ಥರ ಕಾಣ್ತಿದ್ರು. 16 ಎಸೆತಗಳಲ್ಲಿ 24 ರನ್ಸ್ ಬಂದಿತ್ತು. ಆದ್ರೆ ಯಾವಾಗ ಅಭಿ 35 ರನ್ಸ್ ಹೊಡ್ದು ಔಟ್ ಆದ್ರೋ ಗಿಲ್ ಕೂಡ ಡಲ್ ಆದ್ರು. ಮುಂದಿನ 12 ಎಸೆತಗಳಲ್ಲಿ ಕೇವಲ ನಾಲ್ಕು ರನ್‌ ಗಳಿಸಿ ವಿಕೆಟ್ ಒಪ್ಪಿಸಿದ್ರು.  ಕಳೆದ 20 ಪಂದ್ಯಗಳ ಸರಾಸರಿಯನ್ನ ಲೆಕ್ಕ ಹಾಕಿ ಈ ರಿಪೋರ್ಟ್ ನೀಡಲಾಗಿದೆ. ಶುಭ್​ಮನ್ ಗಿಲ್ 120ರ ಆಸುಪಾಸಿನಲ್ಲಿ ಬ್ಯಾಟ್ ಬೀಸಿದ್ರೆ ತಿಲಕ್ ವರ್ಮಾ 119ರ ಸ್ಟ್ರೈಕ್​ರೇಟ್ ಇದೆ. ಇನ್ನು ಸೂರ್ಯ ಕೂಡ ಇಂಪ್ರೆಸ್ಸಿವ್ ಆಗಿಲ್ಲ. ಌಂಡ್ ನಂಬರ್ 3ನಲ್ಲಿ 6 ಬ್ಯಾಟರ್ಸ್ ಚೇಂಜ್ ಆದ್ರೂ ಯಾರೊಬ್ರಿಂದಲೂ ಬಿಗ್ ಇನ್ನಿಂಗ್ಸ್ ಬಂದೇ ಇಲ್ಲ. ಸೋ ಇದನ್ನೆಲ್ಲಾ ನೋಡಿದಾಗ 2025ರಲ್ಲಿ ಭಾರತದ ಟಾಪ್ ಆರ್ಡರ್ ಬ್ಯಾಟಿಂಗ್ ಕಂಪ್ಲೀಟ್ ಕೊಲ್ಯಾಪ್ಸ್ ಆಗಿದೆ.

ಸೂರ್ಯ ಮತ್ತು ಗಿಲ್ ಬೇಗ ಔಟ್ ಆಗೋದೇ ಪ್ರಾಬ್ಲಂ!

ಅಷ್ಟಕ್ಕೂ ಇಲ್ಲಿ ಭಾರತದ ಟಾಪ್ ಆರ್ಡರ್ ಈ ಮಟ್ಟಿಗೆ ವೀಕ್ ಆಗೋಕೆ ಕಾರಣವೇ ಕ್ಯಾಪ್ಟನ್ ಸೂರ್ಯಕುಮಾರ್ ಮತ್ತು ವೈಸ್ ಕ್ಯಾಪ್ಟನ್ ಶುಬ್​ಮನ್ ಗಿಲ್ ಅವ್ರ ಕಳಪೆ ಫಾರ್ಮ್. ಈ ವರ್ಷ ಇಬ್ರೂ ಕಂಪ್ಲೀಟ್ ಫೇಲ್ಯೂರ್ ಆಗಿದ್ದು ಒಂದೇ ಒಂದು ಅರ್ಧಶತಕ ಬಂದಿಲ್ಲ. ಸ್ಟ್ರೈಕ್​ರೇಟ್ ಕೂಡ ಕಡಿಮೆ ಇದೆ. ಹೀಗಾಗಿ ಟಾಪ್ ಆರ್ಡರ್​ನಲ್ಲಿ ಇವ್ರಿಬ್ಬರ ವಿಕೆಟ್ ಬೇಗ ಬೀಳೋದ್ರಿಂದ ನೆಕ್ಸ್​ಟ್ ಬರೋ ಪ್ಲೇಯರ್​ಗಳಿಗೂ ಪ್ರೆಶರ್ ಆಗ್ತಿದೆ. ವಿಕೆಟ್ ಉಳಿಸಿಕೊಳ್ಳೋ ನಿಟ್ಟಿನಲ್ಲಿ ಸ್ಟ್ರೈಕ್​ರೇಟ್ ಮರೆತು ಸ್ಲೋವಾಗಿ ಇನ್ನಿಂಗ್ಸ್ ಆಡ್ತಿದ್ದಾರೆ. ಆ ನಂತ್ರ ಬಿಗ್ ಸ್ಕೋರ್ ಆಗಿ ಕನ್ವರ್ಟ್ ಮಾಡೋಕೆ ಸಾಧ್ಯವಾಗ್ತಿಲ್ಲ. ಌಂಡ್ ಬ್ಯಾಟಿಂಗ್​ ಆರ್ಡರ್​ನಲ್ಲಿ ಮಾಡ್ತಿರೋ ವೇರಿಯೇಷನ್ಸ್ ಕೂಡ ರನ್ಸ್ ಕಂಟ್ರೋಲ್ ಮಾಡ್ತಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ ಈ ವರ್ಷ ವಿಶ್ವಕಪ್‌ನಲ್ಲಿ ಅಗ್ರ ಎಂಟು ಶ್ರೇಯಾಂಕಿತ ತಂಡಗಳಲ್ಲಿ ಯಾವುದೂ ಕೂಡ ಭಾರತಕ್ಕಿಂತ ನಿಧಾನವಾಗಿ ಬ್ಯಾಟಿಂಗ್ ಮಾಡಿಲ್ಲ. ಅಂದ್ರೆ  ಟಾಪ್ ಆರ್ಡರ್​ನಲ್ಲಿ ಭಾರತಕ್ಕಿಂತ ಯಾವ ತಂಡೂ ಕೂಡ ವೀಕ್ ಇಲ್ಲ. ಒಬ್ರು ಔಟಾದ್ರೂ ಮತ್ತೊಬ್ರು ಅದನ್ನ ಪ್ಯಾಚಪ್ ಮಾಡ್ತಾರೆ. ಬಟ್ ಟೀಂ ಇಂಡಿಯಾದಲ್ಲಿ ಅದು ಸಾಧ್ಯ ಆಗ್ತಿಲ್ಲ. ಅಭಿಷೇಕ್ ಮೇಲೆ ಡಿಪೆಂಡ್ ಆಗೋದು ಅದನ್ನ ಬಿಟ್ರೆ ಮಿಡಲ್ ಆರ್ಡರ್​ನಲ್ಲಿ ಕೆಲವೊಬ್ರು ಕೆಲವೊಂದು ಪಂದ್ಯಗಳಲ್ಲಿ ಬಿಗ್ ಸ್ಕೋರ್ ಕಲೆ ಹಾಕೋದ್ರಿಂದ ಮ್ಯಾಚ್ ವಿನ್ ಆಗ್ತಿದ್ದಾರೆ. ಇಲ್ಲಾಂದ್ರೆ ಬೌಲಿಂಗ್​ನಲ್ಲಿ ಮ್ಯಾಚ್ ವಿನ್ ಮಾಡ್ತಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಇದೇ ಆಗಿದ್ದು. ಫಸ್ಟ್ ಬ್ಯಾಚಲ್ಲಿ ಪಾಂಡ್ಯ ಫಿಫ್ಟಿ ಹೊಡಿತಾರೆ. 170ಪ್ಲಸ್ ಸ್ಕೋರ್ ಆಗುತ್ತೆ. ಸೆಕೆಂಡ್ ಮ್ಯಾಚಲ್ಲಿ ಬೌಲರ್ಸ್ ದುಬಾರಿಯಾಗಿದ್ದಕ್ಕೆ ಮ್ಯಾಚ್ ಬಿಟ್ರು. ಮೂರನೇ ಮ್ಯಾಚಲ್ಲಿ 117 ರನ್​ಗಳಿಗೆ ಕಟ್ಟಿ ಹಾಕಿದ್ರಿಂದ ಭಾರತ ಗೆಲ್ತು. ಹೀಗೆ ಭಾರತ ಟಿ-20ಐನಲ್ಲಿ ಟಾಪ್ ಆರ್ಡರ್ ಬ್ಯಾಟಿಂಗ್​ ಲೆಕ್ಕಕ್ಕೇ ಇಲ್ಲದಂತಾಗಿದೆ. 2026ರ ಟಿ-20 ವಿಶ್ವಕಪ್​ಗೆ ಇದು ದೊಡ್ಡ ಸೆಟ್​ಬ್ಯಾಕ್ ಆಗೋದ್ರಲ್ಲಿ ಡೌಟೇ ಇಲ್ಲ. ಯಾಕಂದ್ರೆ ಅಲ್ಲಿ ಒಂದೊಂದು ಮ್ಯಾಚ್ ಕೂಡ ಡು ಆರ್ ಡೈನಂತೆಯೇ ಇರುತ್ತೆ. 20 ತಂಡಗಳ ಮೆಗಾ ಫೈಟ್​ನಲ್ಲಿ ಅಭಿಷೇಕ್ ಶರ್ಮಾರಿಂದಾಲೋ ಅಥವಾ ಬೌಲರ್​ಗಳಿಂದಲೋ ಪಂದ್ಯ ಗೆಲ್ಸೋಕೆ ಆಗಲ್ಲ. ಸೋ ಭಾರತದ ಟಾಪ್ ಆರ್ಡರ್ ಬ್ಯಾಟಿಂಗ್ ಸುಧಾರಣೆ ಆಗ್ಲೇಬೇಕು.

Shantha Kumari