ರಾಹುಲ್‌ ಗಾಂಧಿ ಪ್ರಧಾನಿಯಾಗುವವರೆಗೂ ಸಾಲ ಕೊಡುವುದಿಲ್ಲ! – ಅಂಗಡಿ ಮುಂದೆ ಬೋರ್ಡ್‌ ಹಾಕಿದ ವ್ಯಾಪಾರಿ

ರಾಹುಲ್‌ ಗಾಂಧಿ ಪ್ರಧಾನಿಯಾಗುವವರೆಗೂ ಸಾಲ ಕೊಡುವುದಿಲ್ಲ! – ಅಂಗಡಿ ಮುಂದೆ ಬೋರ್ಡ್‌ ಹಾಕಿದ ವ್ಯಾಪಾರಿ

ಅಂಗಡಿಗಳಲ್ಲಿ ಸಾಲ ಕೇಳುವವರು ಅನೇಕ ಮಂದಿ ಇದ್ದಾರೆ. ಏನಾದರೂ ವಸ್ತುಗಳನ್ನು ಖರೀದಿಸಿ ಲೆಕ್ಕ ಬರೆದುಕೊಳ್ಳಿ.. ನಾಳೆ ಕೊಡುತ್ತೇನೆ ಅಂತಾ ಹೋದವರು ಹಣ ಕೊಡುತ್ತಾರೆ ಅನ್ನೋ ಗ್ಯಾರಂಟಿ ಇರಲ್ಲ.. ಕೆಲವರು ಹಣ ವಾಪಸ್‌ ಕೊಟ್ರೆ, ಇನ್ನೂ ಕೆಲವರು ದುಡ್ಡು ಕೊಡೋದೆ ಇಲ್ಲ.. ಹೀಗಾಗಿ ಅಂಗಡಿಗಳ ಮುಂದೆ ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಅಂತ ಬೋರ್ಡ್‌ ಹಾಕುವುದನ್ನು ನೋಡಿದ್ದೇವೆ.. ಇದೀಗ ಇಲ್ಲೊಬ್ಬ ವ್ಯಾಪಾರಿಗೂ ಸಾಲ ಕೇಳುವವರ ಕಾಟ ಹೆಚ್ಚಾಗಿದೆ. ಹೀಗಾಗಿ ಅಂಗಡಿ ಮುಂದೆ ರಾಹುಲ್ ಗಾಂಧಿ ಪ್ರಧಾನಿಯಾಗುವವರೆಗೆ ಇಲ್ಲಿ ಸಾಲ ಕೊಡುವುದಿಲ್ಲ ಅಂತಾ ಬೋರ್ಡ್‌ ಹಾಕಿದ್ದಾರೆ.

ಇದನ್ನೂ ಓದಿ: ಹೆಚ್‌. ಡಿ ರೇವಣ್ಣಗೆ ಟೆನ್ಶನ್​​ ಟೆನ್ಶನ್​​.. – ಮತ್ತೆ ಜೈಲಿಗೆ ಹೋಗ್ತಾರಾ ಮಾಜಿ ಸಚಿವ?

ಹೌದು, ಅಚ್ಚರಿಯಾದ್ರೂ ಸತ್ಯ.. ಸಾಲ ಕೇಳುವವರ ಕಾಟದಿಂದ ತಪ್ಪಿಸಿಕೊಳ್ಳಲು ಬೀದಿ ಬದಿ ವ್ಯಾಪಾರಿಯೊಬ್ಬರು ಈ ರೀತಿಯಾಗಿ ಬೋರ್ಡ್‌ ಹಾಕಿದ್ದಾರೆ. ರಾಹುಲ್ ಗಾಂಧಿ ಪ್ರಧಾನಿಯಾಗುವವರೆಗೆ ಇಲ್ಲಿ ಸಾಲ ಕೊಡಲಾಗುವುದಿಲ್ಲ ಎಂಬ ಬೋರ್ಡ್ ಅನ್ನು ಹಾಕಿಕೊಂಡಿದ್ದಾರೆ. ಈ ಕುರಿತ ವಿಡಿಯೋ, ಫೋಟೋ  ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಕವಿಶ್ ಅಝೀಝ್ (@azzizkavish) ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, “ಈ ಅಂಗಡಿಯಲ್ಲಿ ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗುವವರೆಗೆ ಸಾಲ ಮಾಡುವುದನ್ನು ನಿಷೇಧಿಸಲಾಗಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಆರು ಸೆಕೆಂಡುಗಳ ಈ ವೈರಲ್ ವಿಡಿಯೋದಲ್ಲಿ  ಬೀದಿ ಬದಿ ವ್ಯಾಪಾರಿಯೊಬ್ಬರು ತಮ್ಮ ಅಂಗಡಿಯ ಮುಂದೆ ʼಸಾಲ ಕೇಳುವಂತಿಲ್ಲ; ರಾಹುಲ್ ಗಾಂಧಿ ಭಾರತದ ಪ್ರಧಾನಿಯಾಗುವವರೆ ಇಲ್ಲಿ ಸಾಲವನ್ನು ನೀಡಲಾಗುವುದಿಲ್ಲʼ ಎಂಬ ಬರಹವನ್ನು ಬರೆದಿರುವ ಬೋರ್ಡ್ ಒಂದನ್ನು ನೇತು ಹಾಕಿರುವ ದೃಶ್ಯವನ್ನು ಕಾಣಬಹುದು.

Shwetha M