ಗ್ರಾಮ ಸಿಂಹಗಳಿಗೆ ಬೆದರಿದ ಕಾಡಿನ ರಾಜ – ಬೌ ಬೌ ಸದ್ದಿಗೆ ಓಡಿಹೋದ  ಸಿಂಹ

ಗ್ರಾಮ ಸಿಂಹಗಳಿಗೆ ಬೆದರಿದ ಕಾಡಿನ ರಾಜ – ಬೌ ಬೌ ಸದ್ದಿಗೆ ಓಡಿಹೋದ  ಸಿಂಹ

ಕಾಡಿನಲ್ಲಿ ಹುಲಿ, ಸಿಂಹಗಳದ್ದೇ ಅಧಿಪತ್ಯ. ಅವುಗಳು ಹತ್ತಿರದಲ್ಲಿವೆ ಅಂತಾ ಗೊತ್ತಾದಾಗ ಇತರ ಪ್ರಾಣಿಗಳು ಅಲ್ಲಿಂದ ಓಡಿಹೋಗುತ್ತವೆ. ಇನ್ನು ಕಾಡಿನ ರಾಜ ನಾಡಿನತ್ತ ಕಾಲಿಟ್ಟರೆ ಪ್ರಾಣಿಗಳು ಮಾತ್ರ ಅಲ್ಲ ಮನುಷ್ಯರೂ ಕೂಡ ಭಯಪಡುತ್ತಾರೆ. ಆದರೆ ಕೆಲವೊಂದು ಬಾರಿ ಸಿಂಹಗಳು ಸಾದು ಪ್ರಾಣಿಗಳಿಗೆ ಹೆದರುತ್ತವೆ. ಈಗ ಆಗಿರುವುದೂ ಅದೇ. ಇಲ್ಲೊಂದು ಶ್ವಾನಗಳ ತಂಡ ಕಾಡಿನ ರಾಜನನ್ನೇ ಅಟ್ಟಾಡಿಸಿದೆ..!

ಹೌದು,  ಸಿಂಹ ಕಾಡಿನ ರಾಜ. ಅವುಗಳು ನಾಡಿನತ್ತ ಆಗಮಿಸಿದರೆ ಇಲ್ಲಿ ಶ್ವಾನಗಳು ಜೋರಾಗಿರುತ್ತವೆ. ಹೀಗಾಗಿ ಕೆಲವೊಂದು ಬಾರಿ ಸಿಂಹಗಳು ಹೆದರಿ ಓಡುವ ಸನ್ನಿವೇಶಗಳು ಬರುತ್ತವೆ. ಇದೀಗ ವೈರಲ್ ಆದ ದೃಶ್ಯದಲ್ಲಿ ಶ್ವಾನದ ಗುಂಪೊಂದನ್ನು ಕಂಡ ಸಿಂಹ ಹೆದರಿ ಅಲ್ಲಿಂದ ಎಸ್ಕೇಪ್ ಆಗಿದೆ.

ಇದನ್ನೂ ಓದಿ: ಮಹಿಳೆ ಪಕ್ಕ ರಾತ್ರಿಯಿಡೀ ಮಲಗಿದ ವಿಷಕಾರಿ ಹಾವು – ಆಮೇಲೆ ಏನಾಯ್ತು ಗೊತ್ತಾ?  

ವೈರಲ್ ಆದ ವಿಡಿಯೋದಲ್ಲಿ ಸಿಂಹ ರಸ್ತೆಯಲ್ಲಿ ನಿಂತಿರುತ್ತದೆ. ಈ ವೇಳೆ ಅಲ್ಲಿದ್ದ ಶ್ವಾನಗಳ ಗುಂಪು ಜೋರಾಗಿ ಬೊಗಳುತ್ತಾ ಸಿಂಹದ ಬಳಿ ಬರುತ್ತವೆ. ಶ್ವಾನಗಳ ದೊಡ್ಡ ಗುಂಪನ್ನ ನೋಡಿದ ಸಿಂಹ ಗಾಬರಿಗೊಂಡಿದೆ. ಇಲ್ಲಿ ಒಂದು ಕ್ಷಣ ನಿಂತರೂ ತನಗೆ ಉಳಿಗಾಲವಿಲ್ಲ ಅಂತಾ ಅನ್ನಿಸಿದೆ. ಹೀಗಾಗಿ  ಅಲ್ಲಿಂದ ಓಡಲು ಪ್ರಾರಂಭಿಸಿದೆ. ಶ್ವಾನಗಳು ಕೂಡ ಸಿಂಹವನ್ನು ಅಟ್ಟಿಸುತ್ತಾ ಹೋಗಿವೆ.

ಐಎಫ್ ಎಸ್ ಅಧಿಕಾರಿ ಸುಸಂತ ನಂದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. `ತನ್ನ ಬೀದಿಯಲ್ಲಿ ಶ್ವಾನಗಳು ಸಿಂಹವಾಗುತ್ತವೆ’.  ಈ ಘಟನೆ ಗುಜರಾತ್‌ನ ಗಿರ್ ಸೋಮನಾಥ ಗ್ರಾಮದಲ್ಲಿ ನಡೆದಿದೆ ಎಂದು ಸುಸಂತ ನಂದ ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಸಹಜವಾಗಿಯೇ ಈ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆದಿದೆ.

suddiyaana