ಮಾನನಷ್ಟ ಕೇಸ್ ನಲ್ಲಿ ನೀಲಿಚಿತ್ರ ನಟಿಗೆ ಮುಖಭಂಗ – 1 ಕೋಟಿ ಪಾವತಿಸುವಂತೆ ಕೋರ್ಟ್ ಆದೇಶ

ಮಾನನಷ್ಟ ಕೇಸ್ ನಲ್ಲಿ ನೀಲಿಚಿತ್ರ ನಟಿಗೆ ಮುಖಭಂಗ – 1 ಕೋಟಿ ಪಾವತಿಸುವಂತೆ ಕೋರ್ಟ್ ಆದೇಶ

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಾನನಷ್ಟ ಕೇಸ್ ಹಾಕಿದ್ದ ನೀಲಿಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ಸೋಲಾಗಿದೆ. ಹೀಗಾಗಿ ಟ್ರಂಪ್ ಅವರ ವಕೀಲರಿಗೆ 121,000 ಡಾಲರ್ ಮೊತ್ತ (ಸುಮಾರು 1 ಕೋಟಿ ರೂ.) ಪಾವತಿಸುವಂತೆ ಕ್ಯಾಲಿಫೋರ್ನಿಯಾದ ಸರ್ಕ್ಯೂಟ್ ನ್ಯಾಯಾಲಯವು ಸೂಚಿಸಿದೆ.

ಇದನ್ನೂ ಓದಿ: ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಕಿಚ್ಚನಿಗೆ ಬ್ಲ್ಯಾಕ್ ಮೇಲ್ – ಪತ್ರ ಬರೆದವನ ಸುಳಿವು ಸಿಕ್ಕಿದ್ದೇಗೆ?

ಟ್ರಂಪ್ ವಿರುದ್ಧ ಯಾವುದೇ ಆರೋಪ ಮಾಡದಂತೆ ಟ್ವಿಟ್ಟರ್‌ನಲ್ಲಿ ಅನಾಮಿಕ ವ್ಯಕ್ತಿ ಬೆದರಿಕೆ ಹಾಕಿದ್ದ. ತನ್ನ ವಿರುದ್ಧ ಟ್ರಂಪ್ ಕಡೆಯವರೇ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸ್ಟಾರ್ಮಿ ಡೇನಿಯಲ್ಸ್ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಸಾಬೀತಾಗದ ಹಿನ್ನೆಲೆಯಲ್ಲಿ ಕೋರ್ಟ್ ಸ್ಟಾರ್ಮಿ ಡೇನಿಯಲ್ಸ್‌ಗೆ ಭಾರಿ ದಂಡ ವಿಧಿಸಿದೆ.

ಪೋರ್ನ್​ ಸ್ಟಾರ್​ ಸ್ಟೋರ್ಮಿ ಡೇನಿಯಲ್​ ಜೊತೆಗಿನ ದೈಹಿಕ ಸಂಬಂಧದ ಬಗ್ಗೆ ಮಾಹಿತಿ ಬಹಿರಂಗಪಡಿಸದಂತೆ ಒತ್ತಡ ಹೇರಿ ಆಕೆಗೆ ಹಣ ನೀಡಿರುವ ಆರೋಪಕ್ಕೆ ಸಂಬಂಧಿಸಿ ಡೊನಾಲ್ಡ್ ಟ್ರಂಪ್​​ ಕೋರ್ಟ್​ಗೆ ಶರಣಾಗಿದ್ದರು. ಈ ವೇಳೆ ಪೊಲೀಸರು ಟ್ರಂಪ್​​ರನ್ನ್ ಅರೆಸ್ಟ್ ಮಾಡಿದ್ದರು. ಅಷ್ಟೇ ಅಲ್ಲದೇ ವಿಚಾರಣೆ ವೇಳೆ ಟ್ರಂಪ್​​ ತಮ್ಮ ಮೇಲಿನ ಆರೋಪಗಳನ್ನ ತಳ್ಳಿ ಹಾಕಿದ್ದರು.

ಕೋರ್ಟ್​ನಿಂದ ಹೊರ ಬಂದ ಬಳಿಕ ಟ್ರಂಪ್ ತಮ್ಮ ಬೆಂಬಲಿಗರನ್ನ ಉದ್ದೇಶಿಸಿ ಭಾಷಣ ಮಾಡಿದ್ದು, ಅಧ್ಯಕ್ಷ ಜೋ ಬೈಡೆನ್ ವಿರುದ್ಧ ಕಿಡಿ ಕಾರಿದ್ದಾರೆ. ಅಮೆರಿಕ ನರಕದತ್ತ ಸಾಗುತ್ತಿದೆ. ನಮ್ಮ ದೇಶದಲ್ಲೀ ಹೀಗೂ ಆಗುತ್ತೆ ಅಂತಾ ಯಾವತ್ತೂ ಅಂದುಕೊಂಡಿರಲಿಲ್ಲ. ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ ಅನ್ನೋ ದೃಷ್ಟಿಯಿಂದಲೇ ಬೈಡೆನ್ ಸರ್ಕಾರ ನನ್ನ ವಿರುದ್ಧ ಷಡ್ಯಂತ್ರ ನಡೆಸಿದೆ ಅಂತಾ ಟ್ರಂಪ್ ಹೇಳಿದ್ದಾರೆ. ಅಷ್ಟೇ ಅಲ್ಲ, ಬೈಡೆನ್ ಆಡಳಿತದ ಅವಧಿಯಲ್ಲಿ ಶೀಘ್ರವೇ​ ಅಣ್ವಸ್ತ್ರ ಯುದ್ಧ ನಡೆಯಲಿದೆ. ಬೈಡೆನ್​​ರಿಂದಾಗಿ ಮೂರನೇ ಮಹಾಯುದ್ಧ ಸಂಭವಿಸಲಿದೆ ಅಂತಾ ಟ್ರಂಪ್ ಎಚ್ಚರಿಸಿದ್ದಾರೆ.

suddiyaana