ರಾತ್ರಿ ಊಟದ ಬಳಿಕ ಅನ್ನ ಉಳಿಯುತ್ತಾ? – ಆ ಅನ್ನದಲ್ಲೇ ಮಾಡಿ ರುಚಿಕರ ದೋಸೆ

ರಾತ್ರಿಯ ಊಟದ ಬಳಿಕ ಉಳಿದ ಅನ್ನವನ್ನು ಏನು ಮಾಡಬೇಕು ಎಂಬ ಗೊಂದಲ ಹಲವರಲ್ಲಿ ಇರುತ್ತದೆ. ಹೆಚ್ಚಿನವರು ಇದನ್ನು ಎಸೆಯುತ್ತಾರೆ ಅಥವಾ ಸಾಂಪ್ರದಾಯಿಕವಾಗಿ ಚಿತ್ರಾನ್ನ ಮಾಡುತ್ತಾರೆ. ಆದರೆ, ಉಳಿದ ಅನ್ನದಿಂದಲೇ ಗರಿಗರಿಯಾದ ಮತ್ತು ಸ್ವಾದಿಷ್ಟವಾದ ‘ದೋಸೆ’ ತಯಾರಿಸ ಬಹುದು ಅದು ಹೇಗೆ ಅನ್ನೋದ್ದನ್ನ ನೋಡೋಣ.
ದೋಸೆ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಉಳಿದ ಅನ್ನ • ರವೆ (ಸೂಜಿ) • ಮೊಸರು • ನೀರು • ಉಪ್ಪು • ಹಸಿಮೆಣಸಿನಕಾಯಿ • ಶುಂಠಿ • ಎಣ್ಣೆ ಅಥವಾ ತುಪ್ಪ
ದೋಸೆ ಮಾಡುವ ವಿಧಾನ
ಮೊದಲಿಗೆ, ಒಂದು ಮಿಕ್ಸರ್ ಜಾರ್‌ಗೆ ಉಳಿದ ಅನ್ನ, ರವೆ ಮತ್ತು ಮೊಸರನ್ನು ಹಾಕಿ. ಇದಕ್ಕೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣವು ಸಾಮಾನ್ಯ ದೋಸೆ ಹಿಟ್ಟಿನ ಹದಕ್ಕೆ ಇರಬೇಕು. ಅಂದರೆ, ಹೆಚ್ಚು ತೆಳುವಾಗಿಯೂ ಇರಬಾರದು, ಅತಿಯಾಗಿ ಗಟ್ಟಿಯಾಗಿಯೂ ಇರಬಾರದು ಎಂಬುದನ್ನು ಗಮನದಲ್ಲಿಡಿ.
ನಂತರ, ರುಬ್ಬಿದ ಮಿಶ್ರಣವನ್ನು ಒಂದು ದೊಡ್ಡ ಪಾತ್ರೆಗೆ ವರ್ಗಾಯಿಸಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ಮತ್ತು ತುರಿದ ಶುಂಠಿಯನ್ನು ಹಾಕಿ ಚೆನ್ನಾಗಿ ಬೆರೆಸಿ. ಈ ಮಸಾಲಾ ಪದಾರ್ಥಗಳು ದೋಸೆಗೆ ವಿಶಿಷ್ಟವಾದ ಮತ್ತು ಆಕರ್ಷಕವಾದ ಫ್ಲೇವರ್ ನೀಡುತ್ತವೆ.
ಈ ದೋಸೆ ಹಿಟ್ಟಿನ ಮಿಶ್ರಣವನ್ನು ಮುಚ್ಚಿ ಸುಮಾರು 10 ರಿಂದ 15 ನಿಮಿಷಗಳ ಕಾಲ ನೆನೆಯಲು ಬಿಡಿ. ಹೀಗೆ ಮಾಡುವುದರಿಂದ ರವೆಯು ನೀರನ್ನು ಸರಿಯಾಗಿ ಹೀರಿಕೊಂಡು, ಹಿಟ್ಟು ದೋಸೆಗೆ ಸೂಕ್ತವಾದ ಹದವನ್ನು ತಲುಪುತ್ತದೆ ಮತ್ತು ಬೆಂದಾಗ ದೋಸೆ ಗರಿಗರಿಯಾಗಿ ಹೊರಬರುತ್ತದೆ ಎಂದು ಖಚಿತಪಡಿಸಿಕೊಳ್ಳಿ.
ಈಗ ದೋಸೆ ಹೆಂಚನ್ನು ಗ್ಯಾಸ್ ಮೇಲೆ ಇಟ್ಟು ಚೆನ್ನಾಗಿ ಬಿಸಿ ಮಾಡಿ. ಇದಕ್ಕೆ ಸ್ವಲ್ಪ ಎಣ್ಣೆಯನ್ನು ಸವರಿ. ಹೆಂಚು ಬಿಸಿಯಾದ ನಂತರ ಒಂದು ಸೌಟು ಹಿಟ್ಟನ್ನು ಹಾಕಿ ತೆಳುವಾಗಿ ಮತ್ತು ವೃತ್ತಾಕಾರವಾಗಿ ಹರಡಿ. ದೋಸೆಯ ಅಂಚುಗಳ ಸುತ್ತಲೂ ಸ್ವಲ್ಪ ಎಣ್ಣೆ
– ದೋಸೆಯು ಕೆಳಭಾಗದಲ್ಲಿ ಬೆಂದ ನಂತರ ಅದನ್ನು ಮತ್ತೊಂದು ಕಡೆಗೆ ತಿರುಗಿಸಿ ಹಾಕಿ. ಎರಡೂ ಬದಿಗಳಲ್ಲೂ ಹೊಂಬಣ್ಣ ಬರುವವರೆಗೆ ಚೆನ್ನಾಗಿ ಬೇಯಿಸಿದರೆ, ನಿಮ್ಮ ಸುಲಭವಾದ ‘ಇನ್ಸ್ಟಂಟ್ ರೈಸ್ ದೋಸೆ’ ಸವಿಯಲು ಸಿದ್ಧವಾಗುತ್ತದೆ. ಬಿಸಿಬಿಸಿ ದೋಸೆಯನ್ನು ಕೂಡಲೇ ಬಡಿಸುವುದು ಉತ್ತಮ.

ನೋಡಿರಿ

