ರಸ್ತೆ  ಬಳಿ ಪಾರ್ಕ್‌ ಮಾಡಿದ್ದ ಬೈಕ್‌ನಿಂದ ಪೆಟ್ರೋಲ್‌ ಕಳವು – ತಪ್ಪಿನ ಬಗ್ಗೆ ಪತ್ರ ಬರೆದಿಟ್ಟ ಖದೀಮ!

ರಸ್ತೆ  ಬಳಿ ಪಾರ್ಕ್‌ ಮಾಡಿದ್ದ ಬೈಕ್‌ನಿಂದ ಪೆಟ್ರೋಲ್‌ ಕಳವು – ತಪ್ಪಿನ ಬಗ್ಗೆ ಪತ್ರ ಬರೆದಿಟ್ಟ ಖದೀಮ!

ಕಳ್ಳರ ಕಣ್ಣಿಗೆ ಏನಾದರೊಂದು ಬೆಲೆಬಾಳುವ ವಸ್ತು ಕಂಡರೆ ಸಾಕು. ಅದನ್ನು ಹೇಗಾದರೂ ಮಾಡಿ ಲಪಟಾಯಿಸಿಕೊಳ್ಳುತ್ತಾರೆ. ಕೈಗೆ ಸಿಕ್ಕಿದ್ದನ್ನೆಲ್ಲಾ ಬಾಚಿಕೊಂಡು ಹೋಗುತ್ತಾರೆ. ಇತ್ತೀಚೆಗೆ ಕಳ್ಳರ ಗುಂಪೊಂದು ಮನೆಯಲ್ಲಿ ಕಳ್ಳತನಕ್ಕೆ ಏನೂ ಸಿಗದೇ ಇದ್ದಾಗ 500 ರೂಪಾಯಿ ಬಿಟ್ಟುಹೋದ ಪ್ರಸಂಗ ನಡೆದಿತ್ತು. ಇದೀಗ ಇಲ್ಲೊಬ್ಬ ಕಳ್ಳ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್‌ನಿಂದ ಪೆಟ್ರೋಲ್​ ಕದ್ದು ಕ್ಷಮೆಯಾಚಿಸಿದ್ದಾನೆ.

ಇದನ್ನೂ ಓದಿ: ಮಹಿಳೆಯರ ಸಿಂಗಾರಕ್ಕೂ ಸರ್ಕಾರದ ತಕರಾರು – ಸಾವಿರಾರು ಬ್ಯೂಟಿ ಪಾರ್ಲರ್‌ಗಳಿಗೆ ಬೀಗಮುದ್ರೆ..!

ಕಳ್ಳತನ ಮಾಡಿದ ಬಳಿಕ ಕೆಲವೊಮ್ಮೆ ತನ್ನ ತಪ್ಪಿನ ಅರಿವಾಗಿ ಕಳ್ಳ, ಕ್ಷಮಾಪಣೆ ಪತ್ರ ಬರೆದಿಟ್ಟು ಹೋಗುವಂತಹ ಪ್ರಸಂಗಗಳನ್ನು ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಇಲ್ಲೊಬ್ಬ ಕಳ್ಳ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್‌ನಿಂದ ಅನಿವಾರ್ಯವಾಗಿ ಪೆಟ್ರೋಲ್​ ಕದ್ದಿದ್ದಾನೆ. ಅಷ್ಟೇ ಅಲ್ಲದೇ ಆತನಿಗೆ ತನ್ನ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿ ಪತ್ರ ಬರೆದಿರುವುದಲ್ಲದೆ, ಬೈಕ್​ ಮಾಲೀಕನಿಗೆ ಐದು ರೂಪಾಯಿಯ ಎರಡು ನಾಣ್ಯಗಳನ್ನು ಇಟ್ಟು ಹೋಗಿದ್ದಾನೆ. ಅಪರಿಚಿತ ಬರೆದಿರುವ ಪತ್ರದ ಫೋಟೋವನ್ನು ಬೈಕ್​ ಮಾಲೀಕ ಅರುಣ್​ಲಾಲ್​ ಎಂಬುವರು ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಅರುಣ್​ಲಾಲ್​ ಎಂಬುವರು ಕೋಯಿಕ್ಕೋಡ್​ ಬೈಪಾಸ್​ನಲ್ಲಿ ತಮ್ಮ ಬುಲೆಟ್​ ಅನ್ನು ಪಾರ್ಕ್​ ಮಾಡಿ, ಎಲ್ಲೋ ಹೋಗಿದ್ದರು. ವಾಪಸ್​ ಬಂದು ನೋಡುವಾಗ ಬುಲೆಟ್​ ಮೇಲೆ ಇದ್ದ ಪತ್ರ ಮತ್ತು ಐದು ರೂಪಾಯಿ ಎರಡು ನಾಣ್ಯಗಳನ್ನು ನೋಡಿದ್ದಾರೆ. ಪತ್ರವನ್ನು ಓದಿದಾಗ, ನಾನು ನಿಮ್ಮ ವಾಹನದಲ್ಲಿ ಒಂದಿಷ್ಟು ಪೆಟ್ರೋಲ್​ ತೆಗೆದುಕೊಂಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ. ನನಗೆ ಬೇರೆ ದಾರಿ ಇರಲಿಲ್ಲ. ನಾನು 10 ರೂಪಾಯಿಯನ್ನು ಬೈಕ್​ನಲ್ಲಿ ಇಟ್ಟಿದ್ದೇನೆ. ಪೆಟ್ರೋಲ್​ ಬಂಕ್​ಗಳಲ್ಲಿ ಬಾಟಲ್​ಗೆ ಪೆಟ್ರೋಲ್​ ಕೊಡದೇ ಇರುವುದರಿಂದ ಪೆಟ್ರೋಲ್​ ಪಂಪ್​ ತಲುಪಲು ನಮಗೆ ಬೇರೆ ದಾರಿ ಕಾಣಲಿಲ್ಲ ಎಂದು ಬರೆದಿದ್ದಾರೆ. ಸದ್ಯ ಕಳ್ಳ ಬರೆದ ಪತ್ರ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ.

suddiyaana