ಪ್ರವಾಹದಲ್ಲಿ ಸ*ತ್ತವರ ಚಿನ್ನವನ್ನೂ ಬಿಡಲಿಲ್ಲ! – ನೇಪಾಳದಲ್ಲಿ ಮಾನವೀಯತೆಯನ್ನೇ ಮರೆತ ಜನ..!

ಪ್ರವಾಹದಲ್ಲಿ ಸ*ತ್ತವರ ಚಿನ್ನವನ್ನೂ ಬಿಡಲಿಲ್ಲ! – ನೇಪಾಳದಲ್ಲಿ ಮಾನವೀಯತೆಯನ್ನೇ ಮರೆತ ಜನ..!

ಸಾಲು ಸಾಲು ಶ*ವಗಳು.. ಕೆಸರಲ್ಲಿ ಹೂತುಹೋದ ದೇಹಗಳು, ನಮ್ಮವರು ಎಲ್ಲಿ ಎಂದು ಹುಡುಕಾಡುತ್ತಿರುವ ಸಂಬಂಧಿಕರು.. ಹೆತ್ತವರಿಗಾಗಿ ಕಾಯುತ್ತಾ ಕುಳಿತ ಕರುಳಕುಡಿಗಳು.. ಮಕ್ಕಳಿಗಾಗಿ ಗೋಗೆರೆಯುತ್ತಿರುವ ಅಮ್ಮಂದಿರು.. ಗಂಡ, ಹೆಂಡತಿ, ಅಕ್ಕ, ತಮ್ಮ, ಮಕ್ಕಳಿಗಾಗಿ ಮುಂದುವರೆದ ಹುಡುಕಾಟ.. ಜೀವಂತವಾಗಿ ಸಿಕ್ಕರೆ ಸಾಕು ಅನ್ನೋ ಹತಾಶ ಭಾವನೆ.. ಇಂಥಾ ದುಸ್ಥಿತಿಯಲ್ಲಿ ಬೇರೇನು ಯೋಚಿಸಲು ಸಾಧ್ಯ. ಆದರೆ, ಇಲ್ಲೂ ಕೆಲ ವಿಕೃತ ಮನಸುಗಳಿವೆ. ಪ್ರವಾಹದಲ್ಲಿ ಕೊಚ್ಚಿಹೋದ ಶವಗಳ ಚಿನ್ನವನ್ನು ಕದಿಯುತ್ತಿದ್ದಾರೆ ಮಾನವೀಯತೆ ಮರೆತವರು.

ಇದನ್ನೂ ಓದಿ:3 ದಿನಗಳಲ್ಲಿ ಮತ್ತೊಂದು ಮಹಾ ಪ್ರವಾಹ – ನೇಪಾಳಕ್ಕೆ ಎಚ್ಚರಿಕೆ ಕೊಟ್ಟ ಚೀನಾ

ನೇಪಾಳ ನರಕವಾಗಿದೆ.. ಜನರ ಬದುಕು ಪ್ರವಾಹದಲ್ಲಿ ಕೊಚ್ಚಿಹೋಗಿದೆ. ನಮ್ಮವರು, ತಮ್ಮವರಿಗಾಗಿ ಹುಡುಕಾಟ ಮುಂದುವರೆದಿದೆ. ಬದುಕಿದ್ದವರ ನರಳಾಟ.. ಗೋಳಾಟ ಕರುಳು ಕಿತ್ತು ಬರುವಂತಿದೆ. ಇದರ ಮಧ್ಯೆ ಪ್ರವಾಹದಲ್ಲಿ ಮೃತಪಟ್ಟವರ ದೇಹದಲ್ಲಿದ್ದ ಚಿನ್ನಾಭರಣಗಳನ್ನು ಕದಿಯುವವರ ಸಂಖ್ಯೆಯೂ ಜಾಸ್ತಿಯಾಗಿದೆ.

ನಾರಾಯಣಿ  ನದಿಯಲ್ಲಿ ಕೊಚ್ಚಿ ಬಂದ ಶ*ವದಿಂದ ಆಭರಣ ಕದಿಯುವ ದೃಶ್ಯ ಸೆರೆಯಾಗಿದೆ. ಭೀಕರ ಪ್ರವಾಹದಲ್ಲಿ ಕೊಚ್ಚಿಬಂದ ಮಹಿಳೆಯ ಶವವನ್ನು ನದಿಯಿಂದ ಕೂದಲನ್ನೆಳೆದು ಹೊರತಂದು, ಆಕೆಯ ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನು ಕಳವು ಮಾಡಿದ ಇಬ್ಬರು ಆರೋಪಿಗಳನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ. ನಾರಾಯಣಿ ನದಿ ದಂಡೆಯಲ್ಲಿ ಮೃತದೇಹದಿಂದ ಆಭರಣ ದೋಚುತ್ತಿದ್ದ 41 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆಹಿಡಿದಿದ್ದಾರೆ.

ನಾರಾಯಣಿ ನದಿಯಲ್ಲಿ ತೇಲಿಬಂದ ಅಪರಿಚಿತ ಮಹಿಳೆಯ ಮೃತದೇಹವನ್ನು ಮರದ ಹಲಗೆಗಳು ಮತ್ತು ಆಕೆಯ ತಲೆ ಕೂದಲನ್ನು ಹಿಡಿದು ದಡಕ್ಕೆ ಎಳೆಯಲಾಯಿತು. ಶವ ದಡಕ್ಕೆ ಬಂದ ತಕ್ಷಣವೇ ಇಬ್ಬರು ವ್ಯಕ್ತಿಗಳು ಆಕೆಯ ಎರಡೂ ಕಿವಿಗಳಲ್ಲಿದ್ದ ಕಿವಿಯೋಲೆಗಳನ್ನು ಬಲವಂತವಾಗಿ ಬಿಚ್ಚಿ ತಮ್ಮ ಜೇಬಿಗೆ ಇಳಿಸಿಕೊಂಡರು. ಕೊನೆಗೂ ಪೊಲೀಸರು ಇವರನ್ನು ಬಂಧಿಸಿದ್ದಾರೆ. ಇದೊಂದೇ ಪ್ರಕರಣವಲ್ಲ. ಪ್ರವಾಹದಲ್ಲಿ ತೇಲಿಬಂದವರ ದೇಹದ ಒಡವೆಗಾಗಿ ಹುಡುಕಾಟ ನಡೆಸುವವರು, ಚಿನ್ನ ದೋಚುವವರು ಇದ್ದಾರೆ. ಇಂಥವರ ದುಷ್ಟಬುದ್ದಿಗೆ ಅದೇನ್ ಹೇಳಬೇಕೋ..

Sulekha

Leave a Reply

Your email address will not be published. Required fields are marked *