ಡ್ಯಾನ್ಸ್‌ ಬಾರ್ ನಲ್ಲಿ ಮೀಟಿಂಗ್‌.. ಡೇಟಿಂಗ್!‌ -ಸ್ಟೀವ್ ಸ್ಮಿತ್ ಲೇಡಿ ಲಕ್‌ಗೆ ನ್ಯೂಯಾರ್ಕ್‌ನಲ್ಲಿ ಪ್ರಪೋಸ್‌

ಡ್ಯಾನ್ಸ್‌ ಬಾರ್ ನಲ್ಲಿ ಮೀಟಿಂಗ್‌.. ಡೇಟಿಂಗ್!‌ -ಸ್ಟೀವ್ ಸ್ಮಿತ್ ಲೇಡಿ ಲಕ್‌ಗೆ ನ್ಯೂಯಾರ್ಕ್‌ನಲ್ಲಿ ಪ್ರಪೋಸ್‌

ಸ್ಟೀವ್ ಸ್ಮಿತ್.. ಸ್ಪಿನ್ನರ್‌ ಆಗಿ ಆಸ್ಟ್ರೇಲಿಯಾ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಈತ ವಿಶ್ವದ ಟಾಪ್​ ಕ್ಲಾಸ್​ ಬ್ಯಾಟ್ಸ್​​ಮನ್​ ಅಂತಾ ಕರೆಸಿಕೊಂಡ್ರು.. ಸ್ಟೀವ್​ ಸ್ಮಿತ್​ ಬ್ಯಾಟಿಂಗ್​ಗೆ ಮಾರು ಹೋಗದ ಕ್ರಿಕೆಟ್​ ಅಭಿಮಾನಿಗಳೇ ಇಲ್ಲ. ಈ ಬಾರಿಯ ಚಾಂಪಿಯನ್‌ ಟ್ರೋಫಿಯಲ್ಲೂ ಉತ್ತಮ ಪ್ರದರ್ಶನ ನೀಡಿದ್ರು.. ಆದ್ರೆ  ಟೀಮ್‌ ಇಂಡಿಯಾ ವಿರುದ್ದ ಆಸೀಸ್‌ ಸೋತು ಚಾಂಪಿಯನ್ಸ್​ ಟ್ರೋಫಿಯಿಂದ ಹೊರಬಿತ್ತು.. ಇದ್ರ ಬೆನ್ನಲ್ಲೇ ಆಸ್ಟ್ರೇಲಿಯಾ ನಾಯಕ ಸ್ಟೀವ್​ ಸ್ಮಿತ್​ ಫ್ಯಾನ್ಸ್​ಗೆ ಶಾಕ್​ ಕೊಟ್ರು.. ಟೀಮ್​ ಇಂಡಿಯಾ ವಿರುದ್ಧದ ಒಂದು ಸೋಲು ಆಸಿಸ್​​ ಲೆಜೆಂಡ್​ ಒನ್​ ಡೇ ಕ್ರಿಕೆಟ್​ ಕರಿಯರ್​ಗೆ ಫುಲ್​ ಸ್ಟಾಫ್​ ಇಟ್ಟಿದೆ. ಭಾರತದ ವಿರುದ್ಧ ಸೋತ ಬೇಸರದಲ್ಲೇ ಸ್ಟೀವ್​ ಸ್ಮಿತ್ ಒನ್​​ ಡೇ ಕ್ರಿಕೆಟ್​​ಗೆ​​ ಗುಡ್​ ಬೈ ಹೇಳಿದ್ರು. ಸ್ಮಿತ್‌ ಆಟದ ಜೊತೆಗೆ ಅವ್ರ ಲವ್‌ ಸ್ಟೋರಿ ಸಖತ್‌ ಇಂಟ್ರೆಸ್ಟಿಂಗ್‌ ಆಗಿದೆ.. ಅಷ್ಟಕ್ಕೂ ಸ್ಮಿತ್‌ ವೈಫ್‌ ಯಾರು? ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಎಕ್ಸ್ ನಲ್ಲಿ ಭಾರೀ ತಾಂತ್ರಿಕ ಸಮಸ್ಯೆ- ದೊಡ್ಡ ಮಟ್ಟದ ಸೈಬರ್ ಅಟ್ಯಾಕ್ ಎಂದ ಎಲಾನ್ ಮಸ್ಕ್

ವಿಶ್ವ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾಗೆ ಸರಿ ಸಮಾನವಾಗಿ ನಿಲ್ಲುವ ತಂಡದ ಅಂದ್ರೆ ಅದು ಆಸ್ಟ್ರೇಲಿಯಾ. ಸ್ಲೆಡ್ಜಿಂಗ್‌ ಮೂಲಕವೇ ಎದುರಾಳಿ ತಂಡಗಳನ್ನು ಸೋಲಿನ ಸುಳಿಗೆ ಸಿಲುಕಿಸುವ ತಾಕತ್ತು ಆಸೀಸ್‌ ಆಟಗಾರರಿಗಿದೆ.. ಆ ಪಟ್ಟಿಯಲ್ಲಿ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಹೆಸರು ಕೂಡ ಇದೆ. ಮಾಡ್ರನ್​ ಡೇ ಕ್ರಿಕೆಟ್​ನ ಒನ್​​ ಆಫ್​ ದ ಗ್ರೆಟೆಸ್ಟ್​ ಬ್ಯಾಟರ್​ಗಳಲ್ಲಿ ಸ್ಮಿತ್​ ಕೂಡ ಒಬ್ಬರು. ಆದ್ರೆ ಇನ್ನುಮುಂದೆ ಸ್ಮಿತ್‌ ಅಬ್ಬರ ಬ್ಯಾಟಿಂಗ್‌ ನೋಡೋದಿಕ್ಕೆ ಆಗಲ್ಲ.. ಚಾಂಪಿಯನ್ಸ್‌ ಟ್ರೋಫಿಯಲ್ಲಿ  ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಸೋಲ್ತಿದ್ದಂತೆ, ಏಕದಿನ ಕ್ರಿಕೆಟ್‌ ನಿಂದ ನಿವೃತ್ತಿ ಘೋಷಿಸಿದ್ದಾರೆ. ಇನ್ಮೇಲೆ ಅವರು ಈ ಫಾರ್ಮೆಟ್‌ ನಲ್ಲಿ ಆಡೋದನ್ನ ನೋಡೋಕೆ ಆಗಲ್ಲ.. ಸ್ಟೀವ್‌ ಸ್ಮಿತ್‌ ಆಟ ಮಾತ್ರವಲ್ಲದೇ ಅವರ ಲೈಫ್‌ ಜರ್ನಿ ಕೂಡ ಸಖತ್‌ ಇಂಟ್ರೆಸ್ಟಿಂಗ್‌ ಆಗಿದೆ. ಪ್ರತೀ ಯಶಸ್ವಿ ಪುರುಷನ ಹಿಂದೆ ಒಬ್ಬ ಹೆಣ್ಣು ಇರುತ್ತಾಳೆ ಅನ್ನೋ ಮಾತಿನಂತೆ, ಸ್ಮಿತ್‌ ಯಶಸ್ಸಿನ ಹಿಂದೆಯೂ ಲೇಡಿ ಲಕ್‌ ಇದೆ.. ಅದು ಬೇರೆ ಯಾರು ಅಲ್ಲ ಆತನ ಮುದ್ದಿನ ಮಡದಿ ಡ್ಯಾನಿ ವಿಲ್ಲಿಸ್.. ಸ್ಟೀವ್‌ ಸ್ಮಿತ್‌ ನ ಪ್ರತಿ ಏಳು ಬೀಳಿನಲ್ಲಿ ಈಕೆಯೇ ಸಪೋರ್ಟಿವ್‌ ಆಗಿರ್ತಾರೆ..

ಅಂದ್ಹಾಗೆ ಡ್ಯಾನಿ ಹಾಗೂ ಸ್ಮಿತ್‌ ಪ್ರೀತಿಸಿ ಮದ್ವೆ ಆಗಿದ್ದಾರೆ.. ಅವ್ರ ಲವ್‌ ಸ್ಟೋರಿ ಸಖತ್‌ ಇಂಟ್ರೆಸ್ಟಿಂಗ್‌ ಆಗಿದೆ. ಸ್ಮಿತ್‌ ಹೆಂಡ್ತಿ ವೃತ್ತಿಯಲ್ಲಿ ಲಾಯರ್..‌ ಇವರಿಬ್ರು 2011 ರಲ್ಲಿ ಫಸ್ಟ್‌ ಟೈಮ್‌ ಮೀಟ್‌ ಆಗ್ತಾರೆ.. ಡ್ಯಾನ್ಸ್ ಬಾರ್‌ ನಲ್ಲಿ ಸ್ಮಿತ್‌ ಗೆ ಡ್ಯಾನಿ ಸಿಗ್ತಾರೆ.. ಆ ಟೈಮಲ್ಲಿ ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಷ್ ಲೀಗ್ ನಡೀತಿತ್ತು. ಈ ವೇಳೆ ಅವರಿಬ್ರು ಫ್ರೆಂಡ್ಸ್‌ ಆದ್ರು.. ಬರ್ತಾ ಬರ್ತಾ ಅವರಿಬ್ರ ಮಧ್ಯೆ ಪ್ರೀತಿ ಚಿಗುರಿತು.. ಡ್ಯಾನಿ ಆಗ ಎಲ್‌ ಎಲ್‌ ಬಿ ಮಾಡ್ತಿದ್ರು.. ಸುಮಾರು ವರ್ಷಗಳ ಕಾಲ ಡೇಟಿಂಗ್‌ ಮಾಡ್ತಾ ಇದ್ರು.. ಬಳಿಕ ಸ್ಮಿತ್ ಡ್ಯಾನಿಯನ್ನ ನ್ಯೂಯಾರ್ಕ್‌ ಕರ್ಕೊಂಡು ಹೋಗಿ ಪ್ರಪೋಸ್‌ ಮಾಡಿದ್ರು.. ಸುಮಾರು 7 ವರ್ಷಗಳ ಕಾಲ ಡೇಟಿಂಗ್‌ ನಡೆಸ್ತಿದ್ದ ಈ ಜೋಡಿ 2018 ರ ಸೆಪ್ಟೆಂಬರ್ 15 ರಂದು ಮದುವೆ ಆದ್ರು. ಸ್ಮಿತ್‌ ನ ಪ್ರತಿ ಸಮಯದಲ್ಲೂ ಡ್ಯಾನಿ ನೈತಿಕ ಬೆಂಬಲ ನೀಡ್ತಿದ್ದಾರೆ.. ಇದನ್ನ ಸ್ಮಿತ್ ಇಂಟರ್ವ್ಯೂ ಟೈಮಲ್ಲಿ ತುಂಬಾ ಸಲ ಹೇಳಿಕೊಂಡಿದ್ದಾರೆ.. ತನ್ನ ಆಟವನ್ನ ಎಷ್ಟು ಕ್ರಿಟಿಕ್‌ ಮಾಡಿದ್ರೂ.. ತನಗೆ ದೊಡ್ಡ ಸಪೋರ್ಟ್ ಆಗಿ ಇರೋದು ತನ್ನ ಹೆಂಡ್ತಿ. ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಡ್ಯಾನಿ ಸಪೋರ್ಟ್ ಸಿಕ್ಕಿದೆ ಅಂತಾ ಹೇಳಿಕೊಂಡಿದ್ದಾರೆ. ಈ ಜೋಡಿ ಸದಾ ಕಾಲ ಖುಷಿಯಾಗಿ ಬಾಳಲಿ ಅನ್ನೋದೇ ಫ್ಯಾನ್ಸ್‌ ಆಶಯ.

Shwetha M

Leave a Reply

Your email address will not be published. Required fields are marked *