ಸಾಲು ಮರದ ತಿಮ್ಮಕ್ಕನವರ ಹೃದಯಕ್ಕೆ ಸ್ಟೆಂಟ್ ಅಳವಡಿಕೆ- ವೃಕ್ಷಮಾತೆ ಆರೋಗ್ಯದಲ್ಲಿ ಸುಧಾರಣೆ

ಸಾಲು ಮರದ ತಿಮ್ಮಕ್ಕನವರ ಹೃದಯಕ್ಕೆ ಸ್ಟೆಂಟ್ ಅಳವಡಿಕೆ- ವೃಕ್ಷಮಾತೆ ಆರೋಗ್ಯದಲ್ಲಿ ಸುಧಾರಣೆ

ಅನಾರೋಗ್ಯದಿಂದ ಬಳಲುತ್ತಿರುವ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಸಾಲುಮರದ ತಿಮ್ಮಕ್ಕನವರ ಹೃದಯದ ಕಾರ್ಯನಿರ್ವಹಣೆಯಲ್ಲಿ ಕೊಂಚ ವ್ಯತ್ಯಾಸವಾಗಿದ್ದು ಅವರ ಹೃದಯದಲ್ಲಿ ಸ್ಟೆಂಟ್ ಅಳವಡಿಸಲಾಗಿದೆ. ವೃಕ್ಷಮಾತೆಯನ್ನು 48 ಗಂಟೆಗಳ ಕಾಲ ವೈದ್ಯಕೀಯ ನಿಗಾ ಘಟಕದಲ್ಲಿಡಲಾಗಿದೆ.

ಇದನ್ನೂ ಓದಿ:ಏಕೈಕ ಹೆಣ್ಣು ಮಗುವಿನ ಪೋಷಕರಿಗೆ ಬಂಪರ್‌ – ಸರ್ಕಾರದಿಂದ ಸಿಗುತ್ತೆ ಲಕ್ಷಾಂತರ ರೂಪಾಯಿ ಪ್ರೋತ್ಸಾಹ ಧನ!

ಸಾಲುಮರದ ತಿಮ್ಮಕ್ಕನವರ ಆರೋಗ್ಯದಲ್ಲಿ ಅ. 5ರಂದು ಕೊಂಚ ಏರಿಳಿತ ಕಾಣಿಸಿಕೊಂಡಿತ್ತು. ಹೀಗಾಗಿ ಅವರ ಹೃದಯದಲ್ಲಿ ಸ್ಟೆಂಟ್ ಅಳವಡಿಸಲಾಗಿದೆ ಎಂದು ಅವರನ್ನು ನೋಡಿಕೊಳ್ಳುತ್ತಿರುವ ಅವರ ಪುತ್ರ ಉಮೇಶ್ ತಿಳಿಸಿದ್ದಾರೆ. ವೈದ್ಯರು ಆ್ಯಂಜಿಯೋಗ್ರಾಮ್ ಮೂಲಕ ಅವರ ಹೃದಯಕ್ಕೆ ಸ್ಟೆಂಟ್ ಅಳವಡಿಸಿದ್ದಾರೆ ಎಂದು ಉಮೇಶ್ ತಿಳಿಸಿದರು. ಸ್ಟೆಂಟ್ ಅನ್ನು ಅಳವಡಿಸಿದ ನಂತರ ತಿಮ್ಮಕ್ಕನವರ ಆರೋಗ್ಯದಲ್ಲಿ ಕೊಂಚ ಸುಧಾರಣೆಯಾಗಿದೆ. ಅವರ ಆರೋಗ್ಯ ಸ್ಥಿತಿ ಚೆನ್ನಾಗಿದೆ. ಆದರೂ ಅವರನ್ನು 48 ಗಂಟೆಗಳ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ತಿಮ್ಮಕ್ಕನವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಉಮೇಶ್ ತಿಳಿಸಿದ್ದಾರೆ.

ಮೂರು ತಿಂಗಳ ಹಿಂದೆ ತಿಮ್ಮಕ್ಕ ತಮ್ಮ ಮನೆಯ ಸ್ನಾನದ ಕೋಣೆಯಲ್ಲಿ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದರು. ಸುಮಾರು ಮೂರು ತಿಂಗಳುಗಳ ಚಿಕಿತ್ಸೆಯ ಬಳಿಕ ಅವರು ಚೇತರಿಸಿಕೊಂಡಿದ್ದರು. ಸೆ. 26ರಂದು ಅವರ ಉಸಿರಾಟದಲ್ಲಿ ತೊಂದರೆಯಾಗಿದ್ದರಿಂದ ಮೊದಲು ಅವರನ್ನು ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂತರ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಈಗಲೂ ವೃಕ್ಷಮಾತೆಗೆ ಚಿಕಿತ್ಸೆ ಮುಂದುವರೆದಿದೆ.

Sulekha