ಬೈಕ್ ನಲ್ಲೇ ಬೆಟ್ಟ ಹತ್ತಿದ ಯುವಕ – ಉಸಿರು ಬಿಗಿ ಹಿಡಿದು ನೋಡುವಂತಿದೆ ದೃಶ್ಯ

ಬೈಕ್ ನಲ್ಲೇ ಬೆಟ್ಟ ಹತ್ತಿದ ಯುವಕ – ಉಸಿರು ಬಿಗಿ ಹಿಡಿದು ನೋಡುವಂತಿದೆ ದೃಶ್ಯ

ದಿಢೀರ್ ಖ್ಯಾತಿ ಗಳಿಸಬೇಕೆಂಬುದು ಇಂದಿನ ಯುವಕರ ಕ್ರೇಜ್. ಇದಕ್ಕಾಗಿ ಕೆಲವರು ಬೈಕ್ ಸ್ಟಂಟ್‌ ಅನ್ನು ಆಯ್ಕೆ ಮಾಡಿ, ರಸ್ತೆಗಳಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡುತ್ತಾರೆ. ಇಂತಹ  ಅಪಾಯಕಾರಿ ಸ್ಟಂಟ್‌ಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತವೆ. ಹೀಗೆ ಕಾಣಸಿಗುವ ದೃಶ್ಯಗಳು ಒಂದೊಂದು ಸಲ ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತವೆ. ಸದ್ಯ ಅಂತಹದ್ದೇ ದೃಶ್ಯವೊಂದು ವೈರಲ್ ಆಗುತ್ತಿದೆ.

ಇದನ್ನೂ ಓದಿ: ಈ ಕೋಳಿ ಮರಿಗೆ ಎರಡಲ್ಲ, ನಾಲ್ಕು ಕಾಲು – ಅಪರೂಪದ ದೃಶ್ಯ

ವೈರಲ್ ಆದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಬೈಕ್ ನಲ್ಲಿ ಸವಾರಿ ಮಾಡುತ್ತಿರುತ್ತಾನೆ. ರಸ್ತೆ ಎದುರು ಒಂದು ದೊಡ್ಡ ಬೆಟ್ಟ ಕಾಣುತ್ತದೆ. ನೋಡ ನೋಡುತ್ತಿದ್ದಂತೆಯೇ ಆ ವ್ಯಕ್ತಿ ಬೈಕ್ ಅನ್ನು ಬೆಟ್ಟದ ಮೇಲೆ ಹತ್ತಿಸಿ ಬಿಡುತ್ತಾನೆ. ಬೆಟ್ಟದ ತುದಿಯನ್ನೂ ತಲುಪುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಈಗಾಗಲೇ ಈ ವಿಡಿಯೋ ಅನ್ನು ಸುಮಾರು 6 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 11,500 ಕ್ಕೂ ಹೆಚ್ಚು ಜನರು  ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ಈ ವಿಡಿಯೋದಲ್ಲಿರುವ ವ್ಯಕ್ತಿಯ ಸಾಹಸವನ್ನು ಅನೇಕರು ಮೆಚ್ಚಿದ್ದಾರೆ. ಇನ್ನೂ ಕೆಲವರು ಹೆಲ್ಮೆಟ್​ ಇಲ್ಲದೆ ಈ ಸಾಹಸವನ್ನು ಮಾಡಬಾರದು. ಒಂದು ಕ್ಷಣ ಎಚ್ಚರ ತಪ್ಪಿದರೆ ಈ ವ್ಯಕ್ತಿಯ ಗತಿ? ಎಂದು ಪ್ರಶ್ನಿಸಿದ್ಧಾರೆ. ಬೈಕ್​ ಓಡಿಸುತ್ತಿರುವ ವ್ಯಕ್ತಿ ಮುಂದೆ ಏನಾದ ಎನ್ನುವುದು ಯಾರಿಗಾದರೂ ತಿಳಿಯಿತೇ? ಇದು ತೀರಾ ಅಪಾಯಕಾರಿ ಮತ್ತು ಕಷ್ಟಕರವಾದ ಸಾಹಸ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

suddiyaana