ರಾಜಹಂಸಗಡದಲ್ಲಿ ತಾರಕಕ್ಕೇರಿದ ಪ್ರತಿಮೆ ‘ರಾಜಕೀಯ’ – ಶಿವಾಜಿ ಪುತ್ಥಳಿ ಇವತ್ತು ಮತ್ತೊಮ್ಮೆ ಲೋಕಾರ್ಪಣೆ..!

ರಾಜಹಂಸಗಡದಲ್ಲಿ ತಾರಕಕ್ಕೇರಿದ ಪ್ರತಿಮೆ ‘ರಾಜಕೀಯ’ – ಶಿವಾಜಿ ಪುತ್ಥಳಿ ಇವತ್ತು ಮತ್ತೊಮ್ಮೆ ಲೋಕಾರ್ಪಣೆ..!

ಬೆಳಗಾವಿ ಗ್ರಾಮಾಂತರ ಕ್ಷೇತ್ರದ ರಾಜಹಂಸಗಡ ಕೋಟೆಯಲ್ಲಿ ರೆಡಿಯಾಗಿರುವ ಶಿವಾಜಿ ಪ್ರತಿಮೆ ಉದ್ಘಾಟನೆ ಸಮರ ಮುಂದುವರಿದಿದೆ. ಮೊನ್ನೆಯಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಮೆ ಲೋಕಾರ್ಪಣೆ ಮಾಡಿದ್ರು. ಇದೀಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತೊಮ್ಮೆ ಉದ್ಘಾಟನೆ ಮಾಡಲು ಭರ್ಜರಿ ಇದ್ಧತೆ ಮಾಡಿದ್ದಾರೆ.

ರಾಜಹಂಸಗಡ (Rajahamsagada) ಕದನ ಮುಂದುವರಿದಿದ್ದು, ಸಿಎಂ ಉದ್ಘಾಟಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ (Chhatrapati Shree Shivaji Maharaj Statue) ಇವತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ನೇತೃತ್ವದಲ್ಲಿ ಮತ್ತೊಮ್ಮೆ ಲೋಕಾರ್ಪಣೆಗೊಳ್ಳಲಿದೆ. ಲೋಕಾರ್ಪಣೆ ಸಂದರ್ಭದಲ್ಲಿ ಮಹಾರಾಷ್ಟ್ರದ (Maharashtra) ತುಳಜಾಪುರದಿಂದ ಆಗಮಿಸಿದ ಅರ್ಚಕರಿಂದ ಶಿವಾಜಿ ಪ್ರತಿಮೆಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಗುತ್ತದೆ. ಮಹಾರಾಜರ 13ನೇ ವಂಶಸ್ಥ ಯುವರಾಜ ಸಂಭಾಜಿರಾಜೇ ಛತ್ರಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಇದೆ. ಭಾನುವಾರ ಬೆಳಗ್ಗೆ 9 ಗಂಟೆಯಿಂದ ಕಾರ್ಯಕ್ರಮ ಶುರುವಾಗಲಿದ್ದು, ಪಲ್ಲಕ್ಕಿ ಉತ್ಸವ, ಧ್ವಜಾರೋಹಣ, ಉತ್ಸವಮೂರ್ತಿ ಪೂಜೆಯೊಂದಿಗೆ ಪ್ರತಿಮೆ ಉದ್ಘಾಟನೆಗೊಳ್ಳಲಿದೆ.

ಇದನ್ನೂ ಓದಿ : ಚಾಲಕನಿಲ್ಲದೆ  ಶೋ ರೂಮ್ ಒಳಗೆ ನುಗ್ಗಿದ ಟ್ರ್ಯಾಕ್ಟರ್  – ಆಮೇಲೆನಾಯ್ತು ಗೊತ್ತಾ?  

ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D K Shivakumar), ಮಹಾರಾಷ್ಟ್ರದ ಮಾಜಿ ಗೃಹಸಚಿವ ಸತೇಜ್ ಪಾಟೀಲ್, ಮರಾಠಿ ನಟ ಹಾಗೂ ಸಂಸದ ಡಾ.ಅಮೋಲ್ ಕೋಲೆ, ಲಾತೂರು ಶಾಸಕ ಧೀರಜ್ ದೇಶಮುಖ್, ಖ್ಯಾತ ಚಿತ್ರನಟ ರಿತೇಶ್ ದೇಶಮುಖ್ ಸೇರಿ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ.

ಭಾನುವಾರ ಸಂಜೆ 5.30ರಿಂದ ರಾಜಹಂಸಗಡ ಕೋಟೆಯಲ್ಲಿ ವಿವಿಧ ಸಾಂಸ್ಕೃತಿಕ ಕಾಯಕ್ರಮಗಳು, ಡೋಲ್ ತಾಶಾ, ಲೇಸರ್ ಶೋ, ಕ್ರ್ಯಾಕರ್ ಶೋ, ಮರದಾನಿ ಖೇಳ ಸೇರಿ ಪಾರಂಪರಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

suddiyaana