ವಾಂಖೆಡೆ ಸ್ಟೇಡಿಯಂನಲ್ಲಿ ಕ್ರಿಕೆಟ್ ದೇವರ ಪ್ರತಿಮೆ ಅನಾವರಣ – ಸಚಿನ್ ತೆಂಡೂಲ್ಕರ್ ಸ್ಟ್ಯಾಂಡ್‌ನಲ್ಲಿ ತಲೆಯೆತ್ತಿದ ಪ್ರತಿಮೆ

ವಾಂಖೆಡೆ ಸ್ಟೇಡಿಯಂನಲ್ಲಿ ಕ್ರಿಕೆಟ್ ದೇವರ ಪ್ರತಿಮೆ ಅನಾವರಣ – ಸಚಿನ್ ತೆಂಡೂಲ್ಕರ್ ಸ್ಟ್ಯಾಂಡ್‌ನಲ್ಲಿ ತಲೆಯೆತ್ತಿದ ಪ್ರತಿಮೆ

ವಾಂಖೆಡೆ ಸ್ಟೇಡಿಯಂನಲ್ಲಿ ಕ್ರಿಕೆಟ್ ದೇವರ ಪ್ರತಿಮೆ ಅನಾವರಣ – ಸಚಿನ್ ತೆಂಡೂಲ್ಕರ್ ಸ್ಟ್ಯಾಂಡ್‌ನಲ್ಲಿ ತಲೆಯೆತ್ತಿದ ಪ್ರತಿಮೆ ಒಂದು ಕಾಲದಲ್ಲಿ ಸಚಿನ್ ತೆಂಡೂಲ್ಕರ್ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಬಾಲ್ ಬಾಯ್ ಆಗಿದ್ದರು. 10 ವರ್ಷದ ಹುಡುಗನಾಗಿದ್ದಾಗ ಬಾಂದ್ರಾದಲ್ಲಿರುವ ತಮ್ಮ ಕಾಲೋನಿಯ 30-40 ವರ್ಷದ ಪರಿಚಿತರ ಜೊತೆಗೆ ವಾಂಖೆಡೆ ಸ್ಟೇಡಿಯಂನ ನಾರ್ತ್ ಸ್ಟ್ಯಾಂಡ್ನಲ್ಲಿ ಕುಳಿತು ಮ್ಯಾಚ್ ನೋಡುತ್ತಿದ್ದರು. ವಾಖೆಂಡೆ ಸ್ಟೇಡಿಯಂನ ನಾರ್ತ್ ಸ್ಟ್ಯಾಂಡ್ ಅಂದ್ರೆ ಅದಕ್ಕೊಂದು ವಿಶೇಷ ಐಡೆಂಟಿಟಿ ಇದೆ. ಇದು ಪಕ್ಕಾ ಹಾರ್ಡ್ಕೋರ್ ಕ್ರಿಕೆಟ್ ಫ್ಯಾನ್ಸ್ಗಳು ಕುಳಿತುಕೊಳ್ಳುವ ಜಾಗ. ಮ್ಯಾಚ್ ಆರಂಭವಾದಾಗಿನಿಂದ ಮುಗಿಯೋವರೆಗೂ ನಾರ್ತ್ ಸ್ಟ್ಯಾಂಡ್ನಲ್ಲಿ ಕುಳಿತ ಜನರು ಟೀಂ ಇಂಡಿಯಾಗೆ ಚೀಯರ್ ಮಾಡ್ತಾನೆ. ಇರ್ತಾರೆ. ನಾರ್ತ್ ಸ್ಟ್ಯಾಂಡ್ನಲ್ಲಿ ಕುಳಿತ ಮಂದಿ ಮೈದಾನದಲ್ಲಿ ಆಡುವ ಪ್ಲೇಯರ್ಸ್ಗಳಿಗೆ ಒಂಥರಾ ಬೂಸ್ಟರ್ ಇದ್ದಂತೆ. ಈ ನಾರ್ತ್ ಸ್ಟ್ಯಾಂಡ್ ಗ್ಯಾಂಗ್ ಮೆಂಬರ್ಗಳ ಪೈಕಿ 10 ವರ್ಷದ ಸಚಿನ್ ತೆಂಡೂಲ್ಕರ್ ಕೂಡ ಒಬ್ಬರಾಗಿದ್ರು. ಟಿಕೆಟ್ ಕೂಡ ಪಡೆಯದೆ, ತನಗಿಂತ ದೊಡ್ಡವರ ಜೊತೆಗೆ ಯಾರ ಸುಳಿವಿಗೂ ಸಿಗದಂತೆ ಸಚಿನ್ ಸ್ಟೇಡಿಯಂಗೆ ನುಗ್ಗುತ್ತಿದ್ರು. ಬಳಿಕ ಸಚಿನ್ ಅದೇ ವಾಂಖೆಡೆ ಗ್ರೌಂಡ್ನಲ್ಲಿ ಕ್ರಿಕೆಟ್ ಪ್ರಾಕ್ಟೀಸ್ ಮಾಡಿದ್ದರು. ಮೂರು ದಶಕಗಳ ಕಾಲ ಭಾರತದ ಪರ ಇದೇ ಗ್ರೌಂಡ್ನಲ್ಲೂ ಆಡಿದ್ದರು. ಅಷ್ಟೇ ಅಲ್ಲ, ಬಾಲಕನಾಗಿದ್ದಾಗ ಕುಳಿತು ಕ್ರಿಕೆಟ್ ನೋಡ್ತಿದ್ದ ಜಾಗಕ್ಕೆ ಸಚಿನ್ ತೆಂಡೂಲ್ಕರ್ ಸ್ಟ್ಯಾಂಡ್ ಅಂತಾನೆ ಹೆಸರಿಡಲಾಯ್ತು. ಅಷ್ಟೇ ಯಾಕೆ, ಈಗ ಅದೇ ಸ್ಟ್ಯಾಂಡ್ನಲ್ಲಿ ಕ್ರಿಕೆಟ್ ದೇವರ ಪ್ರತಿಮೆಯನ್ನ ಕೂಡ ನಿರ್ಮಿಸಲಾಗಿದೆ.

ಇದನ್ನೂ ಓದಿ: ನವೆಂಬರ್ 1ರಂದು ಸಚಿನ್ ತೆಂಡೂಲ್ಕರ್ ಪ್ರತಿಮೆ ಅನಾವರಣ – ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕ್ರಿಕೆಟ್ ದೇವರಿಗೆ ಗೌರವ

ವಾಂಖೆಡೆ ಸ್ಟೇಡಿಯಂನಲ್ಲಿ ಸಚಿನ್ ತೆಂಡೂಲ್ಕರ್ ಪ್ರತಿಮೆಯನ್ನ ಅನಾವರಣಗೊಳಿಸಲಾಗಿದೆ. 22 ಫೀಟ್ ಎತ್ತರದ ಪ್ರತಿಮೆ ಇದಾಗಿದೆ. ಸಚಿನ್ರ ಫೇಮಸ್ ಲಾಫ್ಟೆಡ್ ಶಾಟ್ ಮಾದರಿಯಲ್ಲೇ ಈ ಪ್ರತಿಮೆಯನ್ನ ನಿರ್ಮಾಣ ಮಾಡಲಾಗಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಶೇನ್ ವಾರ್ನ್ ಬೌಲಿಂಗ್ಗೆ ಲಾಫ್ಟೆಡ್ ಶಾಟ್ ಮೂಲಕ ಸಚಿನ್ ಸಿಕ್ಸರ್ ಹೊಡೆದಿದ್ದರು. ಅಂದು ಆ ಶಾಟ್ ಭಾರಿ ಫೇಮಸ್ ಆಗಿತ್ತು. ಹೀಗಾಗಿ ಅದೇ ಶಾಟ್ನ ಪ್ರತಿಮೆಯನ್ನ ನಿರ್ಮಿಸಲಾಗಿದೆ. ಅಹ್ಮದ್ನಗರ್ನ ಪ್ರಮೋದ್ ಕಾಂಬ್ಳೆ ಅನ್ನೋ ವಾಸ್ತುಶಿಲ್ಪಿ ಸಚಿನ್ ಪ್ರತಿಮೆಯನ್ನ ನಿರ್ಮಾಣ ಮಾಡಿದ್ದಾರೆ. ಸಚಿನ್ ಪಾಲಿಗೆ ವಾಂಖೆಡೆ ಸ್ಟೇಡಿಯಂ ತುಂಬಾನೆ ಸ್ಪೆಷಲ್. ತಮ್ಮ ಮೊದಲ ರಣಜಿ ಮ್ಯಾಚ್ನ್ನ ಸಚಿನ್ ಆಡಿದ್ದು ಇದೇ ಗ್ರೌಂಡ್ನಲ್ಲಿ. 1988ರಲ್ಲಿ ತಮ್ಮ ಫಸ್ಟ್ ರಣಜಿ ಮ್ಯಾಚ್ನ್ನ ಇಲ್ಲಿ ಆಡುತ್ತಾರೆ. ಈ ಮೂಲಕ ಫಸ್ಟ್ ಕ್ಲಾಸ್ ಕ್ರಿಕೆಟ್ಗೆ ಎಂಟ್ರಿ ಕೊಡುತ್ತಾರೆ. 2011ರಲ್ಲಿ ವರ್ಲ್ಡ್ಕಪ್ ಫೈನಲ್ ಮ್ಯಾಚ್ ಕೂಡ ಇದೇ ಗ್ರೌಂಡ್ನಲ್ಲಿ ನಡೆದಿತ್ತು. ತಮ್ಮ ಹೋಮ್ ಗ್ರೌಂಡ್ನಲ್ಲೇ ಸಚಿನ್ ವಿಶ್ವಕಪ್ ಟ್ರೋಫಿಯನ್ನ ಎತ್ತಿ ಹಿಡಿದಿದ್ರು. ನಂತ್ರ 2013ರಲ್ಲಿ ವೆಸ್ಟ್ಇಂಡೀಸ್ ವಿರುದ್ಧ ತಮ್ಮ ಕೊನೆಯ ಮತ್ತು 200ನೇ ಟೆಸ್ಟ್ ಪಂದ್ಯವನ್ನ ಕೂಡ ಇದೇ ವಾಂಖೆಡೆ ಸ್ಟೇಡಿಯಂನಲ್ಲಿ ಆಡಿದ್ದರು. ಆ ಮ್ಯಾಚ್ ನೋಡೋಕೆ ಮೊಟ್ಟ ಮೊದಲ ಬಾರಿಗೆ ಸಚಿನ್ ತಾಯಿ ಸ್ಟೇಡಿಯಂಗೆ ಆಗಮಿಸಿದ್ದರು. 24 ವರ್ಷಗಳ ಕಾಲ ಭಾರತವನ್ನ ಪ್ರತಿನಿಧಿಸಿ ಕೆರಿಯರ್ನ ಫೈನಲ್ ಮ್ಯಾಚ್ ಆಡಿದ ಬಳಿಕ ಸಚಿನ್ ವಾಂಖೆಡೆ ಸ್ಟೇಡಿಯಂನ ಪಿಚ್ಗೆ ನಮಸ್ಕರಿಸಿ.. ಕಣ್ಣೀರಿಡುತ್ತಲೇ ಮೈದಾನವನ್ನ ತೊರೆದಿದ್ದರು. ಅಂದು ಸ್ಟೇಡಿಯಂನಲ್ಲಿದ್ದ ಅಷ್ಟೂ ಮಂದಿ ಸಚಿನ್ ಸಚಿನ್ ಅನ್ನೋ ಘೋಷಣೆ ಕೂಗಿದ್ರು.. ಈಗ ಅದೇ ವಾಂಖೆಡೆ ಸ್ಟೇಡಿಯಂನಲ್ಲಿ ಸಚಿನ್ ತೆಂಡೂಲ್ಕರ್ ಪ್ರತಿಮೆಯೇ ತಲೆ ಎತ್ತಿ ನಿಂತಿದೆ. ಈ ಸ್ಟೇಡಿಯಂನಲ್ಲಿ ಆಡುವ ಪ್ರತಿಯೊಬ್ಬ ಆಟಗಾರರಿಗೂ ಸಚಿನ್ ಸ್ಫೂರ್ತಿಯಾಗಲಿ. ಪ್ರತಿಮೆಯನ್ನ ನೋಡಿದಾಗಲೆಲ್ಲಾ ಯುವ ಕ್ರಿಕೆಟಿಗರಿಗೆ ಸಾಧನೆಯ ಹಾದಿ ತುಳಿಯೋಕೆ, ಸಚಿನ್ ಮಟ್ಟಕ್ಕೆ ಬೆಳೆಯೋಕೆ ಇನ್ಸ್ಪಿರೇಷನ್ ಸಿಗಲಿ ಅನ್ನೋದು ಕೂಡ ಈ ಪ್ರತಿಮೆ ನಿರ್ಮಾಣದ ಇನ್ನೊಂದು ಪ್ರಮುಖ ಉದ್ದೇಶ.

ಇಲ್ಲಿ ಇನ್ನೊಂದು ವಿಚಾರವನ್ನ ಹೇಳಲೇಬೇಕು.. ವಾಂಖೆಡೆ ಸ್ಟೇಡಿಯಂ ಮತ್ತೊಂದು ಪ್ರಮುಖ ಕಾರಣಕ್ಕೆ ಕೂಡ ಸಚಿನ್ ಮತ್ತು ಭಾರತೀಯ ಕ್ರಿಕೆಟ್ ಪಾಲಿಗೆ ಸ್ಪೆಷಲ್ ಆಗುತ್ತೆ. 2007ರಲ್ಲಿ ಮಹೇಂದ್ರ ಸಿಂಗ್ ಧೋನಿಯನ್ನ ಟೀಂ ಇಂಡಿಯಾ ಮುಂದಿನ ಕ್ಯಾಪ್ಟನ್ ಅನ್ನೋ ನಿರ್ಧಾರ ಕೈಗೊಂಡಿರೋದು ಈ ವಾಂಖೆಡೆ ಸ್ಟೇಡಿಯಂನಲ್ಲೇ. ಅದು ಕೂಡ ಸಚಿನ್ ತೆಂಡೂಲ್ಕರ್ ನೀಡಿದ ಸಲಹೆ ಮೇರೆಗೆ. ಅಂದಿನ ಬಿಸಿಸಿಐ ಮುಖ್ಯಸ್ಥರಾಗಿದ್ದ ಶರದ್ ಪವಾರ್, ಸಚಿನ್ ಬಳಿ ನಾಯಕತ್ವದ ಬಗ್ಗೆ ಚರ್ಚೆ ಮಾಡ್ತಾರೆ. ಸಚಿನ್ಗೆ ಟೀಂ ಇಂಡಿಯಾ ಕ್ಯಾಪ್ಟನ್ ಜವಾಬ್ದಾರಿ ಹೊತ್ತುಕೊಳ್ಳುವಂತೆ ಕೇಳಿಕೊಳ್ತಾರೆ. ಆದ್ರೆ, ಸಚಿನ್ ನನಗೆ ನಾಯಕತ್ವ ಬೇಡ.. ಧೋನಿಯನ್ನ ಕ್ಯಾಪ್ಟನ್ ಮಾಡಿ ಅನ್ನೋ ಸಲಹೆ ನೀಡ್ತಾರೆ. ಧೋನಿ ಬಳಿ ನಾಯಕತ್ವದ ಗುಣ ಇದೆ. ಟೀಂ ಇಂಡಿಯಾವನ್ನ ಮುನ್ನಡೆಸೋಕೆ ಧೋನಿ ಸಮರ್ಥ ವ್ಯಕ್ತಿ ಅನ್ನೋ ಮಾತನ್ನ ಸಚಿನ್ ಅವರು ಶರದ್ ಪವಾರ್ ಬಳಿ ಹೇಳ್ತಾರೆ. ಹೀಗಾಗಿ ಅಂದು ಸಚಿನ್ ನೀಡಿದ ಸಲಹೆ ಮೇರೆಗೆ ಧೋನಿಯನ್ನ ಟೀಂ ಇಂಡಿಯಾ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿತ್ತು. ಬಳಿಕ ನಡೆದಿದ್ದೆಲ್ಲಾ ಇತಿಹಾಸ.. ಏನಾಯ್ತು ಅನ್ನೋದು ನಿಮಗೆ ಗೊತ್ತೇ ಇದೆ. ಈ ಎಲ್ಲಾ ಕಾರಣಕ್ಕೆ ಸಚಿನ್ ತೆಂಡೂಲ್ಕರ್ಗೆ ವಾಂಖಡೆ ಸ್ಟೇಡಿಯಂ ತುಂಬಾನೆ ಸ್ಪೆಷಲ್. ತಾವು ಪ್ರಾಕ್ಟೀಸ್ ಮಾಡಿ ಬೆಳೆದ ಸ್ಟೇಡಿಯಂನಲ್ಲೇ ಈಗ ಸಚಿನ್ ತಮ್ಮದೇ ಪ್ರತಿಮೆಯನ್ನ ಅನಾವರಣಗೊಳಿಸಿದ್ದಾರೆ.

Sulekha