ಡಿಸೆಂಬರ್ 8ಕ್ಕೆ ರಾಜ್ಯ ವಾಲಿಬಾಲ್ ತಂಡದ ಆಯ್ಕೆ – ರಾಜ್ಯವನ್ನು ಪ್ರತಿನಿಧಿಸುವ ಅವಕಾಶ್ ಮಿಸ್ ಮಾಡಿಕೊಳ್ಳಬೇಡಿ…!

ಕರ್ನಾಟಕ ವಾಲಿಬಾಲ್ ತಂಡಕ್ಕೆ ಆಯ್ಕೆ ಮಾಡುವ ದಿನಾಂಕವನ್ನು ನಿಗದಿ ಪಡಿಸಲಾಗಿದೆ. ಡಿಸೆಂಬರ್ 8 ರಂದು ಈ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ರಾಜ್ಯ ವಾಲಿಬಾಲ್ ತಂಡಕ್ಕೆ ಸೇರುವ ಕನಸು ಕಾಣುವ ಕ್ರೀಡಾಪಟುಗಳಿಗೆ ಇದೊಂದು ಒಳ್ಳೆಯ ಅವಕಾಶ.
ಇದನ್ನೂ ಓದಿ:ಹಾರ್ದಿಕ್ ಪಾಂಡ್ಯಗೆ ಫ್ಯಾನ್ಸ್ ಕಾಟ – ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಪಂದ್ಯ ಸ್ಥಳಾಂತರ
ಕ್ರಿಕೆಟ್, ಕಬಡ್ಡಿ ಕ್ರೀಡೆ ರೀತಿಯೇ ಈಗ ವಾಲಿಬಾಲ್ ಕೂಡ ಗಮನಸೆಳೆಯುವ ಕ್ರೀಡೆಯಾಗಿದೆ. ಕರ್ನಾಟಕ ರಾಜ್ಯ ವಾಲಿಬಾಲ್ ತಂಡಕ್ಕೆ ಆಯ್ಕೆ ಆಗುವ ಕನಸು ಕಂಡಿದ್ದ ವಾಲಿಬಾಲ್ ಪಟುಗಳಿಗೆ ಒಂದೊಳ್ಳೆ ಅವಕಾಶ ಈಗ ಅರಸಿಬಂದಿದೆ. ಕರ್ನಾಟಕ ರಾಜ್ಯ ವಾಲಿಬಾಲ್ ತಂಡದ ಆಯ್ಕೆ ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯಲಿದೆ. ಭಾರತೀಯ ವಾಲಿಬಾಲ್ ಫೆಡರೇಶನ್ (ವಿಎಫ್‌ಐ) ಕಳುಹಿಸಿರುವ ಸುತ್ತೋಲೆಯ ಪ್ರಕಾರ, ಪುರುಷರು ಮತ್ತು ಮಹಿಳೆಯರ 72ನೇ ಸೀನಿಯರ್ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜನವರಿ 04 ರಿಂದ 11, 2026 ರವರೆಗೆ ನಡೆಯಲಿದೆ. ಚಾಂಪಿಯನ್‌ಶಿಪ್‌ಗೆ ಸಿದ್ಧತೆಯಾಗಿ, ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ (ಕೆವಿಎ) ಕರ್ನಾಟಕ ರಾಜ್ಯ ಪುರುಷ ಮತ್ತು ಮಹಿಳಾ ತಂಡಗಳನ್ನು ರಚಿಸಲು ಆಯ್ಕೆ ಪ್ರಕ್ರಿಯೆ ದಿನಾಂಕ ಗೊತ್ತುಪಡಿಸಿದೆ. 08 ಡಿಸೆಂಬರ್ 2025 ರಂದು ಬೆಳಗ್ಗೆ 9:00 ಗಂಟೆಗೆ ಭಾರತೀಯ ಕ್ರೀಡಾ ಪ್ರಾಧಿಕಾರ (SAI), NSSC, ಬೆಂಗಳೂರಿನಲ್ಲಿ ನಡೆಯುತ್ತದೆ. ಕರ್ನಾಟಕದ ವಾಲಿಬಾಲ್ ಆಟಗಾರರು ಮಾತ್ರ ಭಾಗವಹಿಸಲು ಅವಕಾಶವಿದೆ.
ಆಯ್ಕೆಯಾದ ಪುರುಷರ ಮತ್ತು ಮಹಿಳೆಯರ ಆಟಗಾರರಿಗೆ ಉತ್ತಮ ತರಬೇತುದಾರರಿಂದ ಊಟ ಮತ್ತು ವಸತಿಯೊಂದಿಗೆ 20 ದಿವಸದ ತರಬೇತಿ ಶಿಬಿರವನ್ನು ನೀಡಲಾಗುವುದೆಂದು ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಸುತ್ತೋಲೆಯಲ್ಲಿ ತಿಳಿಸಿದೆ.

ನೋಡಿರಿ

