ಮೊಟ್ಟೆಯಲ್ಲಿ ಕ್ಯಾನ್ಸರ್ಕಾರಕ ಅಂಶ – ಖಾಸಗಿ ಲ್ಯಾಬ್ನಲ್ಲಿ ಮೊಟ್ಟೆ ಟೆಸ್ಟ್ಗೆ ರಾಜ್ಯ ಸರ್ಕಾರ ಅದೇಶ

ಮೊಟ್ಟೆ ತಿಂದ್ರೆ ಕ್ಯಾನ್ಸರ್ ಬರುತ್ತೆ. ನಿರ್ದಿಷ್ಟ ಬ್ರ್ಯಾಂಡ್ನ ಮೊಟ್ಟೆಗಳಲ್ಲಿ ಕ್ಯಾನ್ಸರ್ ಉಂಟುಮಾಡಬಲ್ಲ ಜೀನೋಟಾಕ್ಸಿಕ್ ಕೂಡಿದೆ ಎಂಬ ಸುದ್ದಿ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ. ಈ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಇದೀಗ ಮೊಟ್ಟೆ ಪರೀಕ್ಷೆಗೆ ರಾಜ್ಯದ ಹಲವು ಭಾಗಗಳಿಂದ ಸ್ಯಾಂಪಲ್ ಕಲೆಕ್ಟ್ ಮಾಡಿದೆ.
ಇದನ್ನೂ ಓದಿ: ಜೈಲಿನಲ್ಲಿ ದರ್ಶನ್ ಭೇಟಿಗೆ ಹಠ ಹಿಡಿದ ಪವಿತ್ರಾ ಗೌಡ – ಯಾವುದೇ ಕಾರಣಕ್ಕೂ ಮೀಟ್ ಮಾಡಲ್ಲ ಎಂದ ದರ್ಶನ್
ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ಖಾಸಗಿ ಲ್ಯಾಬ್ನಲ್ಲಿ ಟೆಸ್ಟ್ಗೆ ಸೂಚಿಸಿರುವ ಸರ್ಕಾರ ಒಂದು ವಾರದಲ್ಲಿ ವರದಿ ನೀಡಲು ಆದೇಶಿಸಿದೆ. ಸರ್ಕಾರಿ ಲ್ಯಾಬ್ನಲ್ಲಿ ಹೆಚ್ಚಿನ ತಂತ್ರಜ್ಞಾನ ವ್ಯವಸ್ಥೆ ಇಲ್ಲದ ಕಾರಣ ಖಾಸಗಿ ಲ್ಯಾಬ್ ನಲ್ಲಿ ಟೆಸ್ಟ್ ಮಾಡಲು ಆದೇಶಿಸಿದೆ.
ರಾಜ್ಯದ 13 ಜಿಲ್ಲೆಗಳಲ್ಲಿ ನೂರಾರು ಕಡೆಯಿಂದ ವಿವಿಧ ಮಾದರಿಯ ಮೊಟ್ಟೆಗಳನ್ನ ಪರೀಕ್ಷೆಗೆ ಕಳುಹಿಸಲು ಸಂಗ್ರಹಿಸಲಾಗಿದೆ. ಬೆಂಗಳೂರು ಬಿಬಿಎಂಪಿ ವಲಯಗಳು, ಪೂರ್ವ ವಲಯ, ದಕ್ಷಿಣ ವಲಯ, ಪಶ್ವಿಮ ವಲಯ, ಉತ್ತರ ವಲಯ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ, ತುಮಕೂರು, ಬಾಗಲಕೋಟೆ, ಮೈಸೂರು, ಕಲಬುರಗಿ, ದಕ್ಷಿಣ ಕನ್ನಡ, ಬೆಳಗಾವಿ, ದಾವಣಗೆರೆ, ರಾಯಚೂರು ಜಿಲ್ಲೆಗಳಲ್ಲಿ ಮೊಟ್ಟೆ ಮಾದರಿಗಳನ್ನ ಸಂಗ್ರಹಿಸಿ ತಪಾಸಣೆಗೆ ಕಳುಹಿಸಿದೆ. ಇನ್ನು ಒಂದು ವಾರದಲ್ಲಿ ಮೊಟ್ಟೆ ಪರೀಕ್ಷೆಯ ವರದಿ ಸರ್ಕಾರದ ಕೈ ಸೇರಲಿದೆ.

ನೋಡಿರಿ

