ರಾಜ್ಯದಲ್ಲಿ ಹೆಚ್ಚಾಯ್ತು ಸೈಬರ್ ಕ್ರೈಂ – ಕರ್ನಾಟಕದಲ್ಲಿ 2 ಸೈಬರ್ ಸೆಕ್ಯೂರಿಟಿ ಲ್ಯಾಬ್

ರಾಜ್ಯದಲ್ಲಿ ಹೆಚ್ಚಾಯ್ತು ಸೈಬರ್ ಕ್ರೈಂ – ಕರ್ನಾಟಕದಲ್ಲಿ 2 ಸೈಬರ್ ಸೆಕ್ಯೂರಿಟಿ ಲ್ಯಾಬ್

ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಕರ್ನಾಟಕದಲ್ಲಿ ಎರಡು ಹೊಸ ಸೈಬರ್ ಸೆಕ್ಯೂರಿಟಿ ಲ್ಯಾಬ್ ಸ್ಥಾಪನೆಗೆ ಗೃಹ ಇಲಾಖೆ ತೀರ್ಮಾನಿಸಿದೆ.

ಇದನ್ನೂ ಓದಿ: ಕಳ್ಳರ ಪತ್ತೆಗೆ ಕಾಲೇಜು ಶೌಚಾಲಯದಲ್ಲಿ ಸಿಸಿಟಿವಿ! – ಬೆಚ್ಚಿ ಬಿದ್ದ ಸ್ಟೂಡೆಂಟ್ಸ್

ಶಿವಮೊಗ್ಗ ಮತ್ತು ತುಮಕೂರಿನಲ್ಲಿ ಹೊಸ ಎರಡು ಸೈಬರ್ ಸೆಕ್ಯೂರಿಟಿ ಲ್ಯಾಬ್ ನಿರ್ಮಾಣವಾಗಲಿದೆ. ಪ್ರತಿದಿನ ಸೈಬರ್ ಕ್ರಿಮಿನಲ್ ಗಳು ರಾಜ್ಯದ ಜನರಿಗೆ ಸುಮಾರು ಒಂದು ಕೋಟಿ ರೂಪಾಯಿ ದೋಚುತ್ತಿದ್ದಾರಂತೆ. ಕಳೆದ ಒಂದೇ ವರ್ಷದಲ್ಲಿ 363 ಕೋಟಿ ರೂಪಾಯಿ ಕಳ್ಳತನ ಮಾಡಿದ್ದಾರೆ. 2019ರಿಂದ ಇದುವರೆಗೆ ಬರೋಬ್ಬರಿ 722 ಕೋಟಿ ರೂಪಾಯಿ ಹಣವನ್ನ ರಾಜ್ಯದ ಜನರಿಂದ ದೋಚಲಾಗಿದೆ.

ಇನ್ನು ರಾಜ್ಯದಲ್ಲಿ ಸೈಬರ್ ತಜ್ಞರ ಕೊರತೆ ಇದೆ. ಹೀಗಾಗಿ ಕ್ರಿಮಿನಲ್ ಗಳನ್ನ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಸದ್ಯ ಬೆಂಗಳೂರಿನಲ್ಲಿ ಮಾತ್ರ ಸೈಬರ್ ಸೆಕ್ಯೂರಿಟಿ ಲ್ಯಾಬ್ ಇದ್ದು, ಹೀಗಾಗಿ ಇನ್ನೂ ಎರಡು ಲ್ಯಾಬ್ ಗಳ ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದೆ.

suddiyaana