ಬಾಹ್ಯಾಕಾಶದಲ್ಲೇ ಬಾಕಿಯಾದ ಸುನಿತಾ! – ಭೂಮಿಗೆ ವಾಪಾಸಾಗಲಿದೆ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆ

ಬಾಹ್ಯಾಕಾಶದಲ್ಲೇ ಬಾಕಿಯಾದ ಸುನಿತಾ! – ಭೂಮಿಗೆ ವಾಪಾಸಾಗಲಿದೆ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆ

ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್​ ಭೂಮಿಗೆ ಯಾವಾಗ ಬರುತ್ತಾರೆ ಎಂಬ ಕುತೂಹಲತೆ ಎಲ್ಲರಲ್ಲಿ ಮನೆ ಮಾಡಿದೆ. ಅನೇಕರು ಸುನೀತಾ ವಿಲಿಯಮ್ಸ್​ ಮತ್ತು ಬಚ್​ ವಿಲ್ಮೋರ್​ ಸುರಕ್ಷಿತವಾಗಿ ಭೂಮಿಗೆ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಬೋಯಿಂಗ್​ ಸ್ಟಾರ್​ಲೈನರ್​ ಸ್ಪೇಸ್​ ಕ್ಯಾಪ್ಸುಲ್​​ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಅವರು ಭೂಮಿಗೆ ಹಿಂತಿರುಗುವುದು ವಿಳಂಬವಾಗುತ್ತಿದೆ. ಇದೀಗ ಗಗನಯಾತ್ರಿಗಳು ಇಲ್ಲದೆ ಸ್ಟಾರ್‌ಲೈನರ್‌ ಭೂಮಿಗೆ ಮರಳಲಿದೆ.

ಇದನ್ನೂ ಓದಿ: ದುಲೀಪ್ ಟ್ರೋಫಿ.. KLಗೆ ಅಗ್ನಿಪರೀಕ್ಷೆ – ರಾಹುಲ್ ಟೆಸ್ಟ್ ಭವಿಷ್ಯ ನಿರ್ಧರಿಸುತ್ತಾ?

ಹೌದು, ಬಚ್‌ ವಿಲ್ಮೋರ್‌ ಹಾಗೂ ಸುನೀತಾ ವಿಲಿಯಮ್ಸ್‌ ಭೂಮಿಗೆ ವಾಪಾಸಾಗಲಿರುವ ಬೋಯಿಂಗ್‌ ಸ್ಟಾರ್‌ಲೈನರ್‌ ಏರ್‌ಕ್ರಾಫ್ಟ್‌ನ ಸಿದ್ಧತೆಯಲ್ಲಿ ತೊಡಗಿದ್ದಾರೆ. ಆದ್ರೆ ಯಾವುದೇ ಗಗನಯಾತ್ರಿಗಳಿಲ್ಲದೆ ಖಾಲಿಯಾಗಿ ಸ್ಟಾರ್‌ಲೈನರ್‌ ಭೂಮಿಗೆ ಮರಳಲಿದೆ. ಖಾಲಿಯಾಗಿ ತೆರಳುವ ಬದಲು ಈ ನೌಕೆಯಲ್ಲಿ ಕೆಲವು ಕಾರ್ಗೋ ಗೂಡ್ಸ್‌ಗಳನ್ನು ಗಗನಯಾತ್ರಿಗಳು ಲೋಡ್‌ ಮಾಡಿದ್ದು, ಕೊನೆ ಹಂತದ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಭಾರತೀಯ ಕಾಲಮಾನ ಶನಿವಾರ ಬಾಹ್ಯಾಕಾಶ ನಿಲ್ದಾಣವನ್ನು ಬೋಯಿಂಗ್‌ ಸ್ಟಾರ್‌ಲೈನರ್‌ ನೌಕೆ ಬೀಳ್ಕೊಡಲಿದೆ. ಬಾಹ್ಯಾಕಾಶ ನಿಲ್ದಾಣದ ಹಾರ್ಮನಿ ಮಾಡ್ಯುಲ್‌ನಲ್ಲಿ ಡಾಕಿಂಗ್‌ ಆಗಿರುವ ಬೋಯಿಂಗ್‌ ಸ್ಟಾರ್‌ಲೈನರ್‌, ಭಾರತೀಯ ಕಾಲಮಾನ ಶನಿವಾರ ಮುಂಜಾನ 3.34ಕ್ಕೆ ಅನ್‌ಡಾಕ್‌ ಆಗಲಿದೆ. ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟ ಬಳಿಕ ಸ್ಟಾರ್‌ಲೈನರ್‌ ಆರು ಗಂಟೆಗಳ ಕಾಲ ಪ್ರಯಾಣ ಮಾಡಿ ನ್ಯೂ ಮೆಕ್ಸಿಕೋ ಬಳಿ ಲ್ಯಾಂಡ್‌ ಆಗಬೇಕಿದೆ. ಇಡೀ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ಆಯೋಜನೆ ಮಾಡಲಾಗಿದ್ದು, ಸ್ಟಾರ್‌ಲೈನರ್‌ ನೌಕೆಯಲ್ಲಿದ್ದ ಗಗನಯಾತ್ರಿಗಳ ಸೀಟ್‌ಗಳನ್ನು ಕೂಡ ತೆಗೆದುಹಾಕಿದ್ದಾರೆ.

Shwetha M