MIಗೆ ರೋಹಿತ್ ಗುಡ್ ಬೈ ಫಿಕ್ಸ್  – ಸೂರ್ಯ, ಬುಮ್ರಾನೂ ಕೈ ಕೊಟ್ರಾ?
ಸ್ಟಾರ್ ಪ್ಲೇಯರ್ಸ್ ಗೆ ಕಾಡಿದ ನೋವೇನು?

MIಗೆ ರೋಹಿತ್ ಗುಡ್ ಬೈ ಫಿಕ್ಸ್  – ಸೂರ್ಯ, ಬುಮ್ರಾನೂ ಕೈ ಕೊಟ್ರಾ?ಸ್ಟಾರ್ ಪ್ಲೇಯರ್ಸ್ ಗೆ ಕಾಡಿದ ನೋವೇನು?

ಮಳೆ ನಿಂತ್ರೂ ಮರದ ಹನಿ ನಿಲ್ಲಲ್ಲ ಅನ್ನೋ ಹಾಗೇ ಐಪಿಎಲ್ ಟೂರ್ನಿಯಿಂದ ಮುಂಬೈ ಇಂಡಿಯನ್ಸ್ ತಂಡ ಹೊರ ಬಿದ್ರೂ ಒಳಗಿನ ಬೆಂಕಿ ಮಾತ್ರ ಆರಿಲ್ಲ. ಕ್ಯಾಪ್ಟನ್ ಬದಲಾವಣೆಯಿಂದ ಶುರುವಾದ ಕಿಡಿ ಬಳಿಕ ಸತತ ಸೋಲಿನ ಮೂಲಕ ಕಾಡ್ಗಿಚ್ಚಾಗಿ ಪರಿಣಮಿಸಿದೆ. 5 ಬಾರಿ ಚಾಂಪಿಯನ್ ಆಗಿದ್ದ ತಂಡ 14 ಪಂದ್ಯಗಳ ಪೈಕಿ 10 ಪಂದ್ಯಗಳಲ್ಲಿ ಸೋಲುಂಡು ರೇಸ್​ನಿಂದ ಹೊರಬಿದ್ದಿದೆ. ಆದ್ರೀಗ ಮುಖೇಶ್​ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್​ ತಂಡದಲ್ಲಿ ಭಿನ್ನಾಭಿಪ್ರಾಯ ಭುಗಿಲೆದ್ದಿದ್ದು ದೊಡ್ಡ ಡ್ಯಾಮೇಜ್ ಉಂಟಾಗೋ ಎಲ್ಲಾ ಸಾಧ್ಯತೆ ಇದೆ.  ಮೂವರು ಸ್ಟಾರ್​ ಪ್ಲೇಯರ್ಸ್​ ತಂಡ ತೊರೆಯಲು ನಿರ್ಧರಿಸಿದ್ದಾರೆ ಎಂಬ ಸ್ಫೋಟಕ ಸುದ್ದಿ ಹಲ್ ಚಲ್ ಎಬ್ಬಿಸಿದೆ. ಮುಂಬೈ ಇಂಡಿಯನ್ಸ್​ ತಂಡದಲ್ಲಾದ ಕ್ಯಾಪ್ಟನ್ ಬದಲಾವಣೆಯೇ ಇದಕ್ಕೆಲ್ಲಾ ಮೇನ್ ರೀಸನ್. 10 ವರ್ಷಗಳ ಕಾಲ ಮುಂಬೈ ತಂಡವನ್ನ ಲೀಡ್ ಮಾಡಿದ್ದ ರೋಹಿತ್ ಶರ್ಮಾರನ್ನ ಕ್ಯಾಪ್ಟನ್ಸಿಯಿಂದ ಇಳಿಸಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಿದ್ದೇ ಇದಕ್ಕೆಲ್ಲಾ ಮೂಲ. ಇದೀಗ ರೋಹಿತ್ ಜೊತೆ ಮತ್ತಿಬ್ಬರು ಸ್ಟಾರ್ ಪ್ಲೇಯರ್ಸ್ ಮುಂಬೈ ತಂಡಕ್ಕೆ ಗುಡ್ ಬೈ ಹೇಳೋಕೆ ಮುಂದಾಗಿದ್ದಾರೆ.

MIನಿಂದ ಮೂವರು ಔಟ್? 

ರೋಹಿತ್ ಶರ್ಮಾ ಟೀಂ ಇಂಡಿಯಾ ಕಂಡ ಶ್ರೇಷ್ಠ ಆಟಗಾರ. ಮುಂಬೈ ಇಂಡಿಯನ್ಸ್ ಅಭಿಮಾನಿಗಳ ಆರಾಧ್ಯ ದೈವ. ಆದ್ರೆ ಈ ಬಾರಿ ನಾಯಕತ್ವ ಕೈತಪ್ಪಿದ್ದಕ್ಕೆ ರೋಹಿತ್​ಗೆ ತುಂಬಾನೇ ಅಸಮಾಧಾನವಿದೆ. ಮಾತ್ರವಲ್ಲದೆ ಇತ್ತೀಚೆಗೆ ತಂಡ ಮತ್ತು ಡ್ರೆಸ್ಸಿಂಗ್​ ರೂಂನಲ್ಲಿ ಏನು ನಡೆಯುತ್ತದೆ ಎಂಬ ಬಗ್ಗೆ ಮಾತನಾಡಿರುವ ಸಂಗತಿ ಕೂಡ ವೈರಲ್​ ಆಗಿತ್ತು. ತಮ್ಮನ್ನ ಫ್ರಾಂಚೈಸಿ ನಡೆಸಿಕೊಂಡಿರೋ ರೀತಿಗೆ ನೊಂದಿರೋ ರೋಹಿತ್​ ತಂಡದಿಂದ ಹೊರ ಬರಲು ಮುಂದಾಗಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ರೋಹಿತ್ ಈ ಬಗ್ಗೆ ಮಾತನಾಡಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ಹಾಗೇನಾದ್ರೂ ರೋಹಿತ್ ಹರಾಜಿಗೆ ಬಂದ್ರೆ ಮುಂದಿನ ವರ್ಷ ಬೇರೆ ತಂಡಗಳು ಖರೀದಿ ಮಾಡಬಹುದು. ಇನ್ನು ಮುಂಬೈನ ಬೌಲಿಂಗ್ ಬೆನ್ನೆಲುಬಾಗಿರೋ ಬುಮ್ರಾ ಕೂಡ ಒಂದು ಕಾಲು ಹೊರಗಿಟ್ಟಿದ್ದಾರೆ. ನಾಯಕತ್ವದ ಅಸಮಾಧಾನದ ಜೊತೆಗೆ ಸಂಭಾವನೆ ವಿಚಾರವಾಗಿಯೂ ವೈಮನಸ್ಸಿದೆ. ಬೂಮ್ರಾ ಮುಂಬೈನ ಪ್ರಮುಖ ಬೌಲರ್​. ಅವರ ಸಂಭಾವನೆ 12 ಕೋಟಿ. ಅಗ್ರಮಾನ್ಯ ಬೌಲರ್​ ಎಂದೆನಿಸಿಕೊಂಡಿರುವ ಈ ವೇಗಿಗೆ ಉಳಿದವರಿಗಿಂತ ನೀಡುವ ಸಂಭಾವನೆ ತೀರಾ ಕಡಿಮೆ. ಹೀಗಾಗಿ ಮುಂದಿನ ವರ್ಷ ಐಪಿಎಲ್​ ಹರಾಜಿನಲ್ಲಿ ಭಾಗವಹಿಸಿದರೆ 15 ಕೋಟಿಯಿಂದ 25 ಕೋಟಿಯವರೆಗೆ ಖರೀದಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಹಾಗೇ ರೋಹಿತ್​ ಬಳಿಕ ಬೂಮ್ರಾಗೆ ನಾಯಕತ್ವ ನೀಡುವ ನಿರೀಕ್ಷೆಯಿತ್ತು. ಆದರೆ ಮುಂಬೈ ತಂಡ ಹಾರ್ದಿಕ್​ಗೆ ಚಾನ್ಸ್​ ನೀಡಿದರು. ಇದರಿಂದ ಬುಮ್ರಾ ಬೇಜಾರಾಗಿ ತಂಡ ತೊರೆಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ ವಿಶ್ವದ ನಂಬರ್​ ಒನ್​ ಟಿ20 ಬ್ಯಾಟ್ಸ್​ಮನ್​ ಸೂರ್ಯ ಕುಮಾರ್​ ಯಾದವ್​ಗೆ ಮುಂಬೈ ನೀಡುತ್ತಿರುವ ಸಂಭಾವನೆ ತೀರಾ ಕಡಿಮೆ. 8 ಕೋಟಿ ಅವರಿಗೆ ನೀಡುತ್ತಿದೆ. ಹೀಗಾಗಿ ಹರಾಜಿನಲ್ಲಿ ಭಾಗವಹಿಸಿದರೆ ಹೆಚ್ಚಿನ ಸಂಭಾವನೆ ಪಡೆಯುವ ಯೋಚನೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ತಂಡದಿಂದ ಹೊರ ಹೋಗಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಸದ್ಯ ತಂಡದ ಸೋಲು ಮತ್ತು ತಂಡದಲ್ಲಿನ ಭಿನ್ನಾಭಿಪ್ರಾಯ ಮುಂಬೈ ಫ್ರಾಂಚೈಸಿಗೂ ದೊಡ್ಡ ತಲೆ ನೋವಾಗಿದೆ. 2025ರ ಐಪಿಎಲ್​ ಹರಾಜಿನಲ್ಲಿ ಮುಂಬೈ ತಂಡ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳೋದೇ ದೊಡ್ಡ ಸವಾಲಾಗಿದೆ. ಅದರಲ್ಲಿ ರೋಹಿತ್​ ಶರ್ಮಾ, ಸೂರ್ಯ ಕುಮಾರ್​ ಯಾದವ್​, ಬೂಮ್ರಾ ಮತ್ತು ಹಾರ್ದಿಕ್​ ಪಾಂಡ್ಯ. ಆದರೀಗ ರೋಹಿತ್​, ಸೂರ್ಯ, ಬೂಮ್ರಾ ಈ ತಂಡದಿಂದ ಹೊರಹೋಗಲು ನಿರ್ಧಿರಿಸಿದ್ದು, ಮುಂಬೈ ತಂಡ ಅವರ ಮನವೊಲಿಕೆಗೆ ಇನ್ನಿಲ್ಲದ ಪ್ರಯತ್ನ ಮಾಡ್ತಿದೆ. ಮತ್ತೊಂದೆಡೆ ರೋಹಿತ್ ಅಭಿಮಾನಿಗಳು ನೀವು ಮುಂಬೈ ತಂಡ ಬಿಟ್ಟು ಬೇರೆ ತಂಡಕ್ಕೆ ಬನ್ನಿ ಎಂದು ಸಲಹೆ ನೋಡ್ತಿದ್ದಾರೆ. ಅದ್ರಲ್ಲೂ ಆರ್​ಸಿಬಿ ಫ್ಯಾನ್ಸ್ ಅಂತೂ ನಮ್ಮ ತಂಡಕ್ಕೆ ಬಂದ್ರೆ ನಿಮ್ಮನ್ನ ತಲೆ ಮೇಲೆ ಹೊತ್ತು ಮೆರೆಸ್ತೇವೆ ಅಂತಿದ್ದಾರೆ. ಒಟ್ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತೆಗೆದುಕೊಂಡ ಒಂದು ನಿರ್ಧಾರ ಇಂದು ತಂಡದ ಒಗ್ಗಟ್ಟನ್ನೇ ಒಡೆಯುತ್ತಿದೆ. ಈ ಒಳಜಗಳ, ಒಳೇಟಿನ ಪರಿಣಾಮ ಮುಂದೆ ಮತ್ತಷ್ಟು ಹೆಚ್ಚಾಗೋ ಸಾಧ್ಯತೆ. ಇದೆಲ್ಲವನ್ನೂ ಫ್ರಾಂಚೈಸಿ ಹೇಗೆ ನಿಭಾಯಿಸುತ್ತೆ ಅನ್ನೋದೇ ಈಗಿರುವ ಪ್ರಶ್ನೆ.

Shwetha M