ಸೌತ್ ಸಿನಿಮಾಗಳಿಗೆ ಬಾಲಿವುಡ್ ಬೆಡಗಿಯರು ಬೆರಗು – ರಾಮ್ ಚರಣ್ ಗೆ ನಾಯಕಿಯಾಗಿ ರವೀನಾ ಟಂಡನ್ ಪುತ್ರಿ ಟಾಲಿವುಡ್ ಗೆ ಎಂಟ್ರಿ
ರವೀನಾ ಟಂಡನ್. ಬಾಲಿವುಡ್‌ನಲ್ಲಿ ಮಿಂಚಿನ ಚೆಂದುಳ್ಳಿ ಚೆಲುವೆ. ಬಾಲಿವುಡ್ ನ ಬಹುತೇಕ ಎಲ್ಲಾ ಸೂಪರ್‌ಸ್ಟಾರ್ ಗಳೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. 90 ರ ದಶಕದಲ್ಲಿ ಅತ್ಯಂತ ಯಶಸ್ವಿ ನಟಿಯಾಗಿದ್ದ ರವೀನಾ, ತಮ್ಮ ವೃತ್ತಿ ಜೀವನದಲ್ಲಿ ಎಲ್ಲರಿಗಿಂತ ವಿಭಿನ್ನವಾಗಿದ್ದರು. ಮುಂಬೈನಲ್ಲಿ ನೆಲೆಸಿರುವ ರವೀನಾ ಟಂಡನ್ ಪರಭಾಷೆಯ ಕೆಲ ಬೆರಳೆಣಿಕೆಯ ಚಿತ್ರಗಳಲ್ಲಷ್ಟೇ ನಟಿಸಿದ್ದಾರೆ. ಕನ್ನಡದಲ್ಲಿ ಉಪೇಂದ್ರ ನಿರ್ದೇಶಿಸಿ ನಟಿಸಿದ ಉಪೇಂದ್ರ ಚಿತ್ರದಲ್ಲಿ ನಟಿಸಿದ್ದಾರೆ. ಇದೀಗ ರವೀನಾ ಟಂಡನ್ ಪುತ್ರಿ ಟಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. RRR ಚಿತ್ರದ ಸ್ಟಾರ್ ನಟ ರಾಮ್ ಚರಣ್ ಗೆ ಜೋಡಿಯಾಗುತ್ತಿದ್ದಾರೆ.
ಇದನ್ನೂ ಓದಿ : 800 ಸಿನಿಮಾದಲ್ಲಿ ನಟಿಸದಂತೆ ವಿಜಯ್ ಸೇತುಪತಿಗೆ ರಾಜಕಾರಣಿಯ ಒತ್ತಡ – ಕಾರಣ ಬಹಿರಂಗ ಪಡಿಸಿದ ಮುತ್ತಯ್ಯ ಮುರಳೀಧರನ್
ಆರ್ ಆರ್ ಆರ್ ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡಿದ ಚಿತ್ರ. ಇದೇ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಕೂಡ ಒಲಿದು ಬಂದಿತ್ತು. ಇದೀಗ ಸ್ಟಾರ್ ರಾಮ್ ಚರಣ್ (Ram Charan) ‘ಉಪ್ಪೇನ’ ನಿರ್ದೇಶಕನ ಜೊತೆ ಕೈಜೋಡಿಸಿದ್ದಾರೆ. ಹೊಸ ಪ್ರಾಜೆಕ್ಟ್ ನಲ್ಲಿ ರಾಮ್ ಚರಣ್ ಗೆ ಜೋಡಿಯಾಗಿ ರವೀನಾ ಟಂಡನ್ ಪುತ್ರಿ ಟಾಲಿವುಡ್ ಗೆ ಪರಿಚಿತರಾಗುತ್ತಿದ್ದಾರೆ. ಸದ್ಯ ಗೇಮ್ ಜೇಂಜರ್ ಸಿನಿಮಾದಲ್ಲಿ ರಾಮ್ ಚರಣ್ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ಉಪ್ಪೇನ ಡೈರೆಕ್ಟರ್ ಬುಚ್ಚಿಬಾಬು ಹೊಸ ಚಿತ್ರದ ಕಥೆ ಕೇಳಿ, ಚರಣ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರಕ್ಕೆ ಬಾಲಿವುಡ್ ನಟಿ ರವೀನಾ ಟಂಡನ್ (Raveena Tandon) ಪುತ್ರಿ ರಾಶಾ (Rasha) ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಗೇಮ್ ಜೇಂಜರ್ ಸಿನಿಮಾದಲ್ಲಿ ರಾಮ್ ಚರಣ್ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ಉಪ್ಪೇನ ಡೈರೆಕ್ಟರ್ ಬುಚ್ಚಿಬಾಬು ಹೊಸ ಚಿತ್ರದ ಕಥೆ ಕೇಳಿ, ಚರಣ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರಕ್ಕೆ ಬಾಲಿವುಡ್ ನಟಿ ರವೀನಾ ಟಂಡನ್ (Raveena Tandon) ಪುತ್ರಿ ರಾಶಾ (Rasha) ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ಕಾಲದಲ್ಲಿ ಸೌತ್ ಸಿನಿಮಾ ಅಂದರೆ ಕಡೆಗಣಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸಲು ಬಾಲಿವುಡ್ ನಟಿಯರು ಆಸಕ್ತಿ ತೋರುತ್ತಿದ್ದಾರೆ. ಹಿಂದಿ ಸಿನಿಮಾಗಿಂತ ಸೌತ್ ಸಿನಿಮಾಗಳೇ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಮಾಡುತ್ತಿವೆ.