ಸುಳ್ಳು ದಾಖಲೆ ಸೃಷ್ಟಿ.. ಹೋರಾಟಗಾರನ ಕಂಪ್ಯೂಟರ್​​ಗೆ ಕನ್ನ ಹಾಕಿದ್ಯಾರು?

ಸುಳ್ಳು ದಾಖಲೆ ಸೃಷ್ಟಿ.. ಹೋರಾಟಗಾರನ ಕಂಪ್ಯೂಟರ್​​ಗೆ ಕನ್ನ ಹಾಕಿದ್ಯಾರು?

ಭೀಮಾ ಕೊರೆಗಾಂವ್ ಗಲಭೆ ಕೇಸ್​ನಲ್ಲಿ ಬಂಧನಕ್ಕೊಳಗಾಗಿದ್ದ ಸಾಮಾಜಿಕ ಹೋರಾಟಗಾರ ಸ್ಟಾನ್​​ ಸ್ವಾಮಿಯವರ ವಿಚಾರಕ್ಕೆ ಸಂಬಂಧಿ ಸ್ಫೋಟಕ ಸಂಗತಿಯೊಂದು ಬೆಳಕಿಗೆ ಬಂದಿದೆ. ಸ್ಟಾನ್​ ಸ್ವಾಮಿಯವರ ಲ್ಯಾಪ್​ಟಾಪ್​​​ನ್ನ ಹ್ಯಾಕ್ ಮಾಡಲಾಗಿದ್ದು, ಅದರಲ್ಲಿ ಹಲವು ದಾಖಲೆಗಳನ್ನ ಸೃಷ್ಟಿ ಮಾಡಲಾಗಿತ್ತು ಅಂತಾ ಅಮೆರಿಕದ ವಿಧಿ ವಿಜ್ಞಾನ ಸಂಸ್ಥೆಯೊಂದು ವರದಿ ಮಾಡಿದೆ. ನಕ್ಸಲರ ಜೊತೆಗೆ ಲಿಂಕ್ ಮತ್ತು ದೇಶದ್ರೋಹ ಕೃತ್ಯಗಳಲ್ಲಿ ಭಾಗಿಯಾಗಿರೋ ಆರೋಪದ ಅಡಿ 2020ರಲ್ಲಿ ಎನ್​ಐಎ ಅಧಿಕಾರಿಗಳು ಸ್ಟಾನ್​ ಸ್ವಾಮಿ ನಿವಾಸದ ಮೇಲೆ ರೇಡ್ ಮಾಡಿ, ನಂತರ ಬಂಧಿಸಲಾಗಿತ್ತು. ಈ ವೇಳೆ ಸ್ಟಾನ್ ಸ್ವಾಮಿ ಲ್ಯಾಪ್​​ಟಾಪ್​​ನಲ್ಲಿ ನಕ್ಸಲಿಸಂ ಕುರಿತ ಬರಹಗಳು, ಪತ್ರಗಳು ಸೇರಿ 44 ಡಾಕ್ಯುಮೆಂಟ್​ಗಳು ಪತ್ತೆಯಾಗಿತ್ತು. ಆದ್ರೆ, ಇವೆಲ್ಲವನ್ನೂ ಅನಾಮಿಕ ಹ್ಯಾಕರ್​​ಗಳು ಸೃಷ್ಟಿ ಮಾಡಿದ್ದಾರೆ. 2014ರಿಂದ 2019ರವರೆಗೆ ಹ್ಯಾಕರ್​​ ಒಬ್ಬ ಸ್ಟಾನ್​ ಸ್ವಾಮಿ ಲ್ಯಾಪ್​​ಟಾಪ್​​ ಮೇಲೆ ನಿಯಂತ್ರಣ ಹೊಂದಿದ್ದ. ಅಷ್ಟೇ ಅಲ್ಲ, ಎನ್​ಐಎ ರೇಡ್ ಮಾಡೋ ಮುನ್ನಾ ದಿನ ಹ್ಯಾಕರ್ ತನ್ನ ಟ್ರ್ಯಾಕ್​ಗಳನ್ನೆಲ್ಲಾ ಡಿಲೀಟ್ ಮಾಡೋಕೆ ಕೂಡ ಯತ್ನಿಸಿದ್ದ ಅಂತಾ ಅಮೆರಿಕದ ವಿಧಿವಿಜ್ಞಾನ ಸಂಸ್ಥೆ ಹೇಳಿದೆ. ಜೈಲುಪಾಲಾಗಿದ್ದ 83 ವರ್ಷದ ಸ್ಟಾನ್ ಸ್ವಾಮಿ ಕಳೆದ ವರ್ಷ ಅನಾರೋಗ್ಯದಿಂದ ಮೃತಪಟ್ಟಿದ್ರು.

ಸುಳ್ಳು ದಾಖಲೆ ಸೃಷ್ಟಿ.. ಹೋರಾಟಗಾರನ ಕಂಪ್ಯೂಟರ್ಗೆ ಕನ್ನ ಹಾಕಿದ್ರಾ?

suddiyaana