SSLV-D2 ರಾಕೆಟ್ ಉಡಾವಣೆ ಯಶಸ್ವಿ – ಕಕ್ಷೆ ಸೇರಿದ ಮೂರು ಉಪಗ್ರಹಗಳು

SSLV-D2 ರಾಕೆಟ್ ಉಡಾವಣೆ ಯಶಸ್ವಿ –  ಕಕ್ಷೆ ಸೇರಿದ ಮೂರು ಉಪಗ್ರಹಗಳು

ಇಸ್ರೋ ನಿರ್ಮಿತ SSLV-D2 ರಾಕೆಟ್ ಉಡಾವಣೆ ಯಶಸ್ವಿಯಾಗಿ ನಡೆದಿದೆ. ಕಳೆದ ವರ್ಷ ಉಡಾವಣೆ ವಿಫಲವಾಗಿತ್ತು. ಕೆಲ ದೋಷಗಳನ್ನು ಸರಿಪಡಿಸಿ ಈಗ ಮತ್ತೊಮ್ಮೆ ರಾಕೆಟ್ ಲಾಂಚ್ ಮಾಡಲಾಗಿದ್ದು, ಯಶಸ್ವೀಯಾಗಿ ನಭಕ್ಕೆ ಹಾರಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ, ರಾಕೆಟ್ ಅನ್ನು ಉಡಾವಣೆ ಮಾಡಲಾಯಿತು. ಉಡಾವಣೆ ಮಾಡುವಾಗ ಎನ್‌ಸಿಸಿ  ಹಾಡು ಹಾಡಿದ್ದು ವಿಶೇಷ. ಎನ್‌ಸಿಸಿಯ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಈ ಹಾಡು ನುಡಿಸಲಾಗಿತ್ತು.

ಇದನ್ನೂ ಓದಿ:  ಸಚಿವರ ಮೇಲೆ ತುರಿಕೆ ಪುಡಿ – ಸಭೆಯಲ್ಲೇ ಬಟ್ಟೆ ಬಿಚ್ಚಿ ತೊಳೆದುಕೊಂಡ ವಿಡಿಯೋ ವೈರಲ್..!

ಇಒಎಸ್-07, ಜೇನಸ್-1 ಮತ್ತು ಆಜಾದಿಸ್ಯಾಟ್-2 ಎಂಬ ಮೂರು ಉಪಗ್ರಹಗಳನ್ನು ಹೊತ್ತು ಎಸ್ಎಸ್ಎಲ್ವಿ ನಭಕ್ಕೆ ಹಾರಿದೆ. ಭೂಮಿಯಿಂದ 450 ಕಿಮೀ ಎತ್ತರದ ಕಕ್ಷೆಯೊಂದರಲ್ಲಿ ಈ ಮೂರು ಉಪಗ್ರಹಗಳನ್ನು ಸೇರಿಸುವ ಕೆಲಸ ಈ ರಾಕೆಟ್‌ನದ್ದು. ಇಒಎಸ್-07 ಸ್ಯಾಟ್‌ಲೈಟ್‌ನ್ನು ಇಸ್ರೋ ಸಂಸ್ಥೆಯೇ ತಯಾರಿಸಿದೆ. ಪ್ರಾಥಮಿಕ ಉಪಗ್ರಹ ಭೂ ವೀಕ್ಷಣಾ ಉಪಗ್ರಹ (EOS-07), 156.3 ಕೆಜಿ ತೂಕದ ISRO ಅಭಿವೃದ್ಧಿಪಡಿಸಿದೆ.

ಕಳೆದ ಆಗಸ್ಟ್‌ ನಲ್ಲಿ ಉಡಾವಣೆಯಾದ SSLV ಯ ಮೊದಲ ಅಭಿವೃದ್ಧಿ ಉಪಗ್ರಹಗಳನ್ನು ನಿಖರ ಕಕ್ಷೆಯಲ್ಲಿ ಇರಿಸಲು ವಿಫಲವಾಗಿತ್ತು. ಶುಕ್ರವಾರ ಬೆಳಗ್ಗೆ ಯಶಸ್ವಿ ಉಡಾವಣೆಯ ನಂತರ ಮಾತನಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಎಸ್.ಸೋಮನಾಥ್, ಉಪಗ್ರಹಗಳನ್ನು ಉಡಾವಣೆ ಮಾಡಲು ದೇಶವು ಇನ್ನೂ ಒಂದು ರಾಕೆಟ್ ಹೊಂದಿದೆ. SSLV-D2 ರಾಕೆಟ್ ಮೂರು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಸಾಧಿಸಿದ ಕಕ್ಷೆ ಉತ್ತಮವಾಗಿತ್ತು. ಎಲ್ಲಾ ರಾಕೆಟ್ ವ್ಯವಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ ಎಂದು ಹೇಳಿದರು. ಇಸ್ರೊ ಇಂಗ್ಲೆಂಡ್ ಮೂಲದ OneWeb ನ 36 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ಎಸ್ಎಸ್ಎಲ್ವಿಯನ್ನು ಆರ್ಥಿಕವಾಗಿ ಮತ್ತು ಉದ್ಯಮದ ಉತ್ಪಾದನೆಗೆ ಸೂಕ್ತವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಲು ಸಹಾಯವಾಗಲಿದೆ. ಯಶಸ್ವಿ ಉಡಾವಣೆಯು ಈಗ 10 ರಿಂದ 500 ಕೆಜಿ ತೂಕದ ಸಣ್ಣ ಉಪಗ್ರಹಗಳಿಗೆ ಬೇಡಿಕೆ ಆಧಾರಿತ ಉಡಾವಣಾ ಸೇವೆಯನ್ನು ಪ್ರಾರಂಭಿಸಲು ಇಸ್ರೋಗೆ ಅವಕಾಶವನ್ನು ನೀಡುತ್ತದೆ. ಭೂಮಿಯ ಮೇಲ್ಭಾಗದಲ್ಲಿನ 500 ಕಿ.ಮೀ ಎತ್ತರಕ್ಕೆ ಉಪಗ್ರಹಗಳನ್ನು ಸುರಕ್ಷಿತವಾಗಿ ಒಯ್ದು ಕಕ್ಷೆಗೆ ಸೇರಿಸುವ ಸಾಮರ್ಥ್ಯ ಈ ಸಣ್ಣ ಉಪಗ್ರಹ ಉಡಾವಣಾ ವಾಹಕಕ್ಕೆ ಇದೆ.

suddiyaana