SSLC ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ – ಪಾಸ್‌ ಆದವರಿಗಿಂತ ಫೇಲ್‌ ಆದವರೇ ಹೆಚ್ಚು!

SSLC ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ – ಪಾಸ್‌ ಆದವರಿಗಿಂತ ಫೇಲ್‌ ಆದವರೇ ಹೆಚ್ಚು!

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪೂರಕ ಪರಿಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಶುಕ್ರವಾರ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದು, 1,11,781 ವಿದ್ಯಾರ್ಥಿಗಳ ಪರೀಕ್ಷೆಗೆ ಹಾಜರಾಗಿದ್ದು, 46,270 ವಿದ್ಯಾರ್ಥಿಗಳು ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ.

ಇದನ್ನೂ ಓದಿ: ಜುಲೈ 1 ರಿಂದ ಅನ್ನಭಾಗ್ಯ ಜಾರಿ – ಅಕ್ಕಿ ಜೊತೆ ಖಾತೆಗೆ ಜಮೆಯಾಗುತ್ತೆ ಹಣ

10ನೇ ತರಗತಿಯ ಪೂರಕ ಪರೀಕ್ಷೆಯನ್ನು ಜೂನ್ 12 ರಿಂದ 19 ರವರೆಗೆ ನಡೆಸಲಾಗಿದ್ದು, ಒಟ್ಟು 1.34 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಈ ಬಾರಿಯ ಪೂರಕ ಪರೀಕ್ಷೆಯಲ್ಲಿ ಪಾಸ್‌ ಆದವರ ಸಂಖ್ಯೆಗಿಂತ ಫೇಲ್‌ ಆದ ವಿದ್ತಾರ್ಥಿಗಳ ಸಂಖ್ಯೆಯೆ ಹೆಚ್ಚಾಗಿದೆ. 2023 ನೇ ಸಾಲಿನ ಪೂರಕ ಪರೀಕ್ಷೆಯಲ್ಲಿ 1,11,781 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಈ ಪೈಕಿ 46,270 ಉತ್ತೀರ್ಣರಾಗಿದ್ದು, ದುರದೃಷ್ಟವಶಾತ್, 65,511 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಾರೆ. ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಒಟ್ಟಾರೆ ಉತ್ತೀರ್ಣ ಶೇಕಡಾ 41.39 ರಷ್ಟಿದೆ.

ಕೆಎಸ್‌ಇಎಬಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದವರು- ಭೂಮಿಕಾ ಪೈ, ಯಶಸ್ ಗೌಡ, ಅನುಪಮಾ ಹಿರೇಹೊಳ್ ಮತ್ತು ಭೀಮನಗೌಡ ಪಾಟೀಲ್. ಚಿತ್ರದುರ್ಗ ಶೇ.96.8 ಅಂಕಗಳೊಂದಿಗೆ ಜಿಲ್ಲೆಗಳಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಯಾದಗಿರಿಯಲ್ಲಿ ಅತ್ಯಂತ ಕಡಿಮೆ ಶೇ.75.49 ರಷ್ಟು ಉತ್ತೀರ್ಣರಾಗಿದ್ದಾರೆ.

ಎಸ್ಎಸ್ಎಲ್​​ಸಿ ಪೂರಕ ಪರೀಕ್ಷೆಯನ್ನು ನಿಗದಿತ ವೇಳಾಪಟ್ಟಿಯಂತೆ 12-06-2023ರಿಂದ 19-06-2023ರವರೆಗೆ ಒಟ್ಟು 458 ಪರೀಕ್ಷಾ ಕೇಂದ್ರಗಳಲ್ಲಿ ರಾಜ್ಯಾದ್ಯಂತ ನಡೆಸಲಾಯಿತು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು 21-06-2023ರಿಂದ 26-06-2023ರವರೆಗೆ ರಾಜ್ಯದ 9 ಶೈಕ್ಷಣಿಕ ಜಿಲ್ಲೆಗಳ 51 ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಸಲಾಗಿದೆ. ಒಟ್ಟು 9256 ಮೌಲ್ಯಮಾಪಕರು ಪಾಲ್ಗೊಂಡಿದ್ದಾರೆ.

suddiyaana