SSLC ಫಲಿತಾಂಶ ಪ್ರಕಟ! – ದಕ್ಷಿಣ ಕನ್ನಡ ಪ್ರಥಮ.. ಉಡುಪಿ ದ್ವಿತೀಯ, ಕಲಬುರಗಿಗೆ ಕೊನೆ ಸ್ಥಾನ!

SSLC ಫಲಿತಾಂಶ ಪ್ರಕಟ! – ದಕ್ಷಿಣ ಕನ್ನಡ ಪ್ರಥಮ.. ಉಡುಪಿ ದ್ವಿತೀಯ, ಕಲಬುರಗಿಗೆ ಕೊನೆ ಸ್ಥಾನ!

2025-26ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಇಂದು ಮಧ್ಯಾಹ್ನ 12 ಗಂಟೆಗೆ ರಿಸಲ್ಟ್‌ ಪ್ರಕಟವಾಗಿದೆ. ಈ ಬಾರಿ ದಕ್ಷಿಣ ಕನ್ನಡ ಪ್ರಥಮ ಸ್ಥಾನ ಪಡೆದುಕೊಂಡಿದ್ರೆ, ಉಡುಪಿ ದ್ವಿತೀಯ ಸ್ಥಾನ ಹಾಗೂ ಕಲಬುರಗಿ ಕೊನೆಯ ಸ್ಥಾನದಲ್ಲಿದೆ.

ಇದನ್ನೂ ಓದಿ: ನೀರು ಕುಡಿಯಲು ಹೋದ ಗಜರಾಜ ದುರಂತ ಅಂತ್ಯ! – ಕೆಸರಿನಲ್ಲಿ ಸಿಲುಕಿದ್ದ ಕಾಡಾನೆ 3 ದಿನಗಳ ನಂತ್ರ ಸಾವು!

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಕಟವಾದ ಬೆನ್ನಲ್ಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಾರೆ. ಮಾರ್ಚ್ 18ರಿಂದ ಏಪ್ರಿಲ್ 2ರವರೆಗೂ ಒಟ್ಟು 2,870 ಪರೀಕ್ಷಾ ಕೇಂದ್ರಗಳಲ್ಲಿ SSLC ಪರೀಕ್ಷೆ ನಡೆದಿತ್ತು. ಈ ಬಾರಿ  7,70,209 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆ ಮೂಲಕ ಎಸ್​​ಎಸ್​​ಎಲ್​​ಸಿಯಲ್ಲಿ ಶೇ.94.1 ಮಂದಿ ಪಾಸ್​​ ಆಗಿದ್ದಾರೆ.

ಇನ್ನು ಈ ವರ್ಷ ಎಸ್​​ಎಸ್​​ಎಲ್​​ಸಿ ಪರೀಕ್ಷೆಯಲ್ಲಿ ಶೇ. 98.40 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ  ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಶೇ. 98.18 ಫಲಿತಾಂಶ ಪಡೆದ ಉಡುಪಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಶೇ.85.06 ಫಲಿತಾಂಶದೊಂದಿಗೆ ಕಲಬುರಗಿಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

SSLC ಪರೀಕ್ಷೆಯಲ್ಲಿ ಬರೋಬ್ಬರಿ 7 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ದಾವಣಗೆರೆಯ ಭರತ್​, ಚಿಕ್ಕಮಗಳೂರಿನ ಬೃಂದಾ, ಬೆಂಗಳೂರು ಉತ್ತರ ಧನುಷ್​, ಉಡುಪಿಯ ಪ್ರೀತಂ, ಚಿಕ್ಕೋಡಿಯ ಪ್ರಾರ್ಥನಾ, ವಿಜಯಪುರದ ಸೌಜನ್ಯಾ, ರಾಯಚೂರಿನ ವಿದ್ಯಾರ್ಥಿ ಸುಖದೇವ್​ಗೆ​ ಸಂಪೂರ್ಣ ಅಂಕ ದೊರೆತಿದೆ.

ಜಿಲ್ಲಾವಾರು ಫಲಿತಾಂಶ

  • ದಕ್ಷಿಣ ಕನ್ನಡ ಜಿಲ್ಲೆ- 98.40%
  • ಉಡುಪಿ – 98.18%
  • ಉತ್ತರ ಕನ್ನಡ- 98.09%
  • ಹಾಸನ- 97.51%
  • ಮಂಡ್ಯ- 97.45%
  • ಶಿರಸಿ- 97.21%
  • ಹಾವೇರಿ- 96.87%
  • ಕೊಡಗು- 96.70%
  • ಶಿವಮೊಗ್ಗ- 96.56%
  • ವಿಜಯನಗರ- 96.39%
  • ಬೆಂಗಳೂರು ಗ್ರಾಮಾಂತರ – 95.84%
  • ಧಾರವಾಡ – 95.59%
  • ಕೋಲಾರ- 95.50%
  • ಬಾಗಲಕೋಟೆ- 95.42%
  • ಬೆಂಗಳೂರು ಉತ್ತರ- 95.34%
  • ಗದಗ- 95.24%
  • ಚಿಕ್ಕಮಗಳೂರು- 94.99%
  • ಬೆಳಗಾವಿ – 94.75%
  • ದಾವಣಗೆರೆ- 94.64%
  • ಮೈಸೂರು- 94.50%
  • ರಾಯಚೂರು- 94.41%
  • ವಿಜಯಪುರ- 94.17%
  • ಚಿಕ್ಕೋಡಿ- 94.09%
  • ಬಳ್ಳಾರಿ- 93.36%
  • ಕೊಪ್ಪಳ- 93.10%
  • ರಾಮನಗರ- 92.83%
  • ಚಿತ್ರದುರ್ಗ- 92.25%
  • ಬೀದರ್- 92.18%
  • ತುಮಕೂರು- 92.04%
  • ಚಾಮರಾಜನಗರ- 91.89%
  • ಯಾದಗಿರಿ- 91.89%
  • ಬೆಂಗಳೂರು ದಕ್ಷಿಣ- 91.65%
  • ಚಿಕ್ಕಬಳ್ಳಾಪುರ- 90.88%
  • ಮಧುಗಿರಿ- 90.26%
  • ಕಲಬುರಗಿ-85.06%
  • 7 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ

Shwetha M