SSLC ವಿದ್ಯಾರ್ಥಿಗಳಿಗೆ ಶಾಕ್‌!  – ಮಾ. 30 ರಂದು ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ!

SSLC ವಿದ್ಯಾರ್ಥಿಗಳಿಗೆ ಶಾಕ್‌!  – ಮಾ. 30 ರಂದು ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ!

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕಿಂಗ್‌ ಸುದ್ದಿಯಿದೆ. ಮಾರ್ಚ್‌ 30ರಂದು ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆಯಾಗಿದೆ.

ಇದನ್ನೂ ಓದಿ:IPL ಮ್ಯಾಚ್‌ ನೋಡ್ಬೇಕು.. ಟಿಕೆಟ್‌ ಸಿಕ್ತಿಲ್ಲ!‌ – ಸರ್ಕಾರ ವಿರುದ್ಧ ಆಕ್ರೋಶ ಹೊರ ಹಾಕಿದ ವಿಪಕ್ಷ ನಾಯಕರು!

ಮಹಾವೀರ ಜಯಂತಿ ರಜೆ ಹಿಂದೂಡಿಕೆ ಮಾಡಿದ ಹಿನ್ನೆಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಒಂದು ದಿನ ಮುಂದೂಡಿಕೆ ಮಾಡಲಾಗಿದೆ. ತೃತೀಯ ಭಾಷೆ ಹಿಂದಿ ಪರೀಕ್ಷೆಯನ್ನು ಮಾ.31ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ನೀಡಿದೆ.

ಈ ಮೊದಲು ಮಾ.31ಕ್ಕೆ ರಜೆಯಿದ್ದ ಹಿನ್ನೆಲೆ ಮಾ.30ಕ್ಕೆ ಹಿಂದಿ ಪರೀಕ್ಷೆ ನಿಗದಿಯಾಗಿತ್ತು. ಇದೀಗ ಸರ್ಕಾರ ಪರಿಷ್ಕರಣೆ ಮಾಡಿ, ಮಾ.31ರ ರಜೆಯನ್ನು ಮಾ.30ಕ್ಕೆ ಘೋಷಿಸಿದೆ. ಹೀಗಾಗಿ ಪರೀಕ್ಷಾ ದಿನಾಂಕವನ್ನು ಬದಲಿಸಿ, ಮಾ.31ಕ್ಕೆ ನಡೆಸಲು ತೀರ್ಮಾನಿಸಿದೆ.

Shwetha M