ತುಳಸಿ ಇಂಗ್ಲಿಷ್.. ಶಾರ್ವರಿ ಶಾಕ್ – ಮಕ್ಕಳ ಪ್ರೀತಿ ಪಡಿತಾನಾ ಮಾಧವ್
ಶ್ರೀರಸ್ತು ಸೀರಿಯಲ್ ಈಗ ಶುಭಮಸ್ತು

ತುಳಸಿ ಇಂಗ್ಲಿಷ್.. ಶಾರ್ವರಿ ಶಾಕ್ – ಮಕ್ಕಳ ಪ್ರೀತಿ ಪಡಿತಾನಾ ಮಾಧವ್ಶ್ರೀರಸ್ತು ಸೀರಿಯಲ್ ಈಗ ಶುಭಮಸ್ತು

ಸೀರಿಯಲ್ಗಳಲ್ಲಿ ಸಾಮಾನ್ಯವಾಗಿ ನಾಯಕಿ ಅಂದ್ರೆ ಅಳುಮುಂಜಿ.. ಅಗತ್ಯಕ್ಕಿಂತ ಹೆಚ್ಚು ಒಳ್ಳೆಯವಳು ಅಂತಾ ತೋರಿಸಲಾಗುತ್ತೆ.. ಇನ್ನೂ ಆಕೆಗೆ ಬರುವ ಸಂಕಷ್ಟಗಳು ಆ ದೇವರಿಗೆ ಪ್ರೀತಿ.. ವಿಲನ್ಗಳು ಬಂದು ಆಗಾಗ ಕಷ್ಟ ಕೊಡೋದು.. ಯಾರಿಗೂ ಹೇಳಲಾಗದೇ ಆಕೆ ಒಂಟಿಯಾಗಿಯೇ ಒದ್ದಾಡುವುದು.. ಎಲ್ಲವೂ ಸೀರಿಯಲ್ಗಳಲ್ಲಿ ಕಾಮನ್ ಆಗಿದೆ.. ಈ ಗೋಳು ವೀಕ್ಷಕರಿಗೆ ಈಗ ಬೇಡವಾಗಿ ಬಿಟ್ಟಿದೆ.. ಈಗ ಸೀರಿಯಲ್ಗಳಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೋಡಲು ಬಯಸುತ್ತಿದ್ದಾರೆ.. ಇದೀಗ ಇದೊಂದು ಸೀರಿಯಲ್ನಲ್ಲಿ ಬಗೆಬಗೆಯ ಟ್ವಿಸ್ ತೋರಿಸಲಾಗುತ್ತಿದೆ.. ಸೀರಿಯಲ್ ನಾಯಕಿ ವಿಲನ್ಗಳಿಗೆ ಸೆಡ್ಡು ಹೊಡೆದು ಎತ್ತರಕ್ಕೆ ಬೆಳೆಯುತ್ತಿದ್ದಾಳೆ..

ಸೀರಿಯಲ್ ಗಳಲ್ಲಿ ವಿಲನ್ ಗಳಿಗೆ ಸೆಡ್ಡು ಹೊಡೆದು ನಾಯಕಿ ಎತ್ತರಕ್ಕೆ ಬೆಳೆದು ನಿಂತಾಗ.. ಹೆಜ್ಜೆ ಹೆಜ್ಜೆಗೂ ವಿಲನ್ಗಳ ಹೆಡೆಮುರಿ ಕಟ್ಟುತ್ತಲೇ ಹೋದಾಗ ಅಂಥ ಸೀರಿಯಲ್ಗಳು ವೀಕ್ಷಕರಿಗೆ ಇಷ್ಟವಾಗುತ್ತಾ ಹೋಗುತ್ತವೆ.. ಜೀ ಕನ್ನಡದಲ್ಲಿ ಪ್ರಸಾರ ಆಗ್ತಾ ಇರೋ ಅಮೃತಧಾರೆ ಸೀರಿಯಲ್ ಜನರಿಗೆ ಇಷ್ಟವಾಗಲು ಇದೇ ಕಾರಣ. ಅದೇ ರೀತಿ ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಅಳುಮುಂಜಿ ಭಾಗ್ಯ ಸಂಪಾದನೆ ಮಾಡಲು ಶುರು ಮಾಡಿದಾಗ ವೀಕ್ಷಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು.. ಇದನ್ನ ನೋಡಿದಾಗ್ಲೇ ಪ್ರೇಕ್ಷಕರಿಗೆ ಯಾವ ರೀತಿಯ ನಾಯಕಿ ಬೇಕು ಎನ್ನುವುದು ಅರ್ಥವಾಗುತ್ತದೆ. ಇದೀಗ ಜೀ ಕನ್ನಡದ ಶ್ರೀರಸ್ತು ಶುಭಮಸ್ತು ಸೀರಿಯಲ್ ವಿಷಯಕ್ಕೆ ಬರುವುದಾದರೆ, ಇದೊಂದು ರೀತಿಯಲ್ಲಿ ವಿಭಿನ್ನ ಕಥೆ. ತುಳಸಿ ಹಾಗೂ ಮಾಧವ ವಯಸ್ಸಲ್ಲದ ವಯಸ್ಸಲ್ಲಿ ಮದುವೆ ಆಗುತ್ತಾರೆ.. ಮದ್ವೆಯಾಗಿ ಮಾಧವನ ಮನೆಗೆ ಬಂದಾಗ ತುಳಸಿ ಸಾಕಷ್ಟು ನೋವು, ಅವಮಾನಗಳನ್ನು ಅನುಭವಿಸ್ತಾಳೆ.. ಇದರಿಂದ ತುಳಸಿಯ ಗೋಳು ನೋಡಲು ಆಗ್ತಿಲ್ಲ ಅಂತಾ ವೀಕ್ಷಕರು ಹೇಳ್ತಿದ್ರು.. ಆದ್ರೆ ಈಗ ಹಾಗಿಲ್ಲ.. ಈಗ ಸೀನ್ ಫುಲ್ ಚೇಂಜ್ ಆಗಿದೆ. ತುಳಸಿ ಈಗ ಫುಲ್ ಅಪ್ಡೇಟ್ ಆಗಿದ್ದಾಳೆ. ಸೀರಿಯಲ್ನಲ್ಲಿ ಹಲವು ಟ್ವಿಸ್ಟ್ ತೋರಿಸಲಾಗ್ತಿದೆ..
ಮಾಧವ್ ಕಿರಿಯ ಮಗ ಅಭಿಯ ಮನಸ್ಸು ಒಲಿಸಿಕೊಳ್ಳಲು ತುಳಸಿ ಡ್ರೈವಿಂಗ್ ಕಲಿತು ಶಾಕ್ ನೀಡಿದಳು.. ಅದಾದ ನಂತ್ರ ಕಂಪೆನಿಯ ವಾರ್ಷಿಕೋತ್ಸವದಲ್ಲಿ ಭರತನಾಟ್ಯ ಮಾಡಿ ಶಾಕ್ ನೀಡಿದಳು. ಇವೆಲ್ಲವನ್ನೂ ಅಭಿಮಾನಿಗಳು ಅರಗಿಸಿಕೊಳ್ಳುವ ಮೊದಲೇ ತುಳಸಿ ಈಗ ಇಂಗ್ಲಿಷ್ ಮಾತನಾಡಿದ್ದಾಳೆ.. ಮಾಧವ್ ಮನೆಗೆ ಸಂದರ್ಶನಕ್ಕೆ ಬಂದಿರುವವರು ಇಂಗ್ಲಿಷ್ ನಲ್ಲೇ ತುಳಸಿಗೆ ಪ್ರಶ್ನೆಗಳನ್ನು ಕೇಳ್ತಾರೆ.. ಅದಕ್ಕೆ ಶಾರ್ವರಿ , ತುಳಸಿಗೆ ಎಲ್ಲಿ ಇಂಗ್ಲಿಷ್ ಬರುತ್ತೆ ಎಂದು ಹಂಗಿಸುತ್ತಾಳೆ. ಆಗ ತುಳಸಿ ಇಂಗ್ಲಿಷ್ನಲ್ಲಿಯೇ ಉತ್ತರ ಕೊಟ್ಟು ಎಲ್ಲರಿಗೂ ಶಾಕ್ ಕೊಡುತ್ತಾಳೆ. ಈ ಸೀನ್ ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ.. ಪ್ರೋಮೋಗೆ ವಿಕ್ಷಕರು ಪಾಸಿಟಿವ್ ಆಗಿ ಕಾಮೆಂಟ್ ಮಾಡ್ತಿದ್ದಾರೆ..

ತುಳಸಿ ಪಾತ್ರಕ್ಕೆ ಫಿದಾ ಆಗಿರುವ ವೀಕ್ಷಕರು ಗೃಹಿಣಿಯೊಬ್ಬಳು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯವಾಗುತ್ತದೆ ಅಂತಾ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಈ ಸೀರಿಯಲ್ನನ್ನು ನೋಡಲೇಬಾರದು ಎಂದುಕೊಂಡಿದ್ದೆ,, ಆದ್ರೆ ಈಗ ತುಳಸಿ ಪಾತ್ರಕ್ಕೆ ಬೆಲೆ ಬಂದಿದೆ. ಎಲ್ಲಾ ಗೃಹಿಣಿಯರಿಗೂ ಈಕೆ ಮಾದರಿ. ಒಂದು ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ತುಳಸಿಯೇ ಸಾಕ್ಷಿ ಅಂತಾ ಹೇಳಿದ್ದಾರೆ. ಮತ್ತೊಬ್ಬರು ಯಾವುದೇ ಕಲಿಕೆಗೆ ವಯಸ್ಸಿನ ಹಂಗಿಲ್ಲ, ಹೆಣ್ಣು ಗೃಹಿಣಿಯ ಜೊತೆಗೆ ಅವಳಿಗೆ ಅವಕಾಶ ಸಿಕ್ಕರೆ ಎಲ್ಲವನ್ನೂ ಸಾಧಿಸಿ ತೋರಿಸಿಯಾಳು ಎಂದು ಕಾಮೆಂಟ್ ಹಾಕಿದ್ದಾರೆ. ಇನ್ನು ಕೆಲವರು ಇಷ್ಟೆಲ್ಲಾ ಶಾಕ್ ಒಟ್ಟಿಗೇ ಕೊಟ್ಟುಬಿಟ್ಟರೆ ಹಾರ್ಟ್ ಒಡೆದೇ ಹೋಗುತ್ತೆ ಅನ್ನುತ್ತಿದ್ದಾರೆ. ಒಟ್ಟಿನಲ್ಲಿ ತುಳಸಿ ಪಾತ್ರ ಹಾಗೂ ಸೀರಿಯಲ್ ನಲ್ಲಿ ಬರುತ್ತಿರೋ ಟ್ವಿಸ್ಟ್ ಈಗ ವೀಕ್ಷಕರಿಗೆ ಇಷ್ಟವಾಗುತ್ತಿದೆ..

Shwetha M

Leave a Reply

Your email address will not be published. Required fields are marked *