ವಿಜಯ್ ದೇವರಕೊಂಡ ಸಿನಿಮಾದಲ್ಲಿ ಶ್ರೀಲೀಲಾ- ರಶ್ಮಿಕಾ ನಂತರ ಮತ್ತೊಬ್ಬ ಕನ್ನಡತಿ ಜೊತೆ ರೋಮ್ಯಾನ್ಸ್

ವಿಜಯ್ ದೇವರಕೊಂಡ ಸಿನಿಮಾದಲ್ಲಿ ಶ್ರೀಲೀಲಾ- ರಶ್ಮಿಕಾ ನಂತರ ಮತ್ತೊಬ್ಬ ಕನ್ನಡತಿ ಜೊತೆ ರೋಮ್ಯಾನ್ಸ್

ಟಾಲಿವುಡ್ ಹೀರೋ ವಿಜಯ್ ದೇವರಕೊಂಡ ಜೊತೆ ಕನ್ನಡತಿ ರಶ್ಮಿಕಾ ಮಂದಣ್ಣ ಮಿಂಚಿದ್ದಾಯ್ತು. ಇದೀಗ ತೆಲುಗಿನ ರೋಮ್ಯಾಂಟಿಕ್ ಹೀರೋ ವಿಜಯ್ ದೇವರಕೊಂಡ ಮತ್ತೊಬ್ಬ ಕನ್ನಡತಿ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ‘ಗೀತಾ ಗೋವಿಂದಂ’ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಜೊತೆ ವಿಜಯ್ ದೇವರಕೊಂಡ ಕಾಂಬಿನೇಷನ್ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಜೊತೆಗೆ ಟಾಲಿವುಡ್ ನಲ್ಲಿ ಗೀತಾ ಗೋವಿಂದಂ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಲೈಗರ್ ಹೀರೋ ಭರಾಟೆ ಬ್ಯೂಟಿ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ನಿರ್ದೇಶಕ ಗೌತಮ್ ತಿನ್ನುವಾರಿ- ವಿಜಯ್ ದೇವರಕೊಂಡ ಕಾಂಬಿನೇಷನ್‌ನ ಹೊಸ ಸಿನಿಮಾಗೆ ಇದೀಗ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸ್ಪೈ ಥ್ರಿಲರ್ ಕಥೆಯಲ್ಲಿ ಪೊಲೀಸ್ ಅಧಿಕಾರಿಯಾಗಿ ವಿಜಯ್ ದೇವರಕೊಂಡ ಬರುತ್ತಿದ್ದಾರೆ.

ಇದನ್ನೂ ಓದಿ:  ‘ಫಿಫಾ’ ಬಳಿಕ ‘ಆಸ್ಕರ್’ ಅಂಗಳಕ್ಕೆ ದೀಪಿಕಾ ಪಡುಕೋಣೆ – ಹಾಲಿವುಡ್ ಮಂದಿ ಜತೆ ಮಿಂಚಲಿದ್ದಾರೆ ಬಾಲಿವುಡ್ ಬೆಡಗಿ!

ರವಿತೇಜಾ ಜೊತೆ ಧಮಾಕ ಚಿತ್ರದಲ್ಲಿ ಶ್ರೀಲೀಲಾ ಮೋಡಿ ಮಾಡಿದ್ದರು. ಸೌತ್‌ನ 8 ಸಿನಿಮಾಗಳಲ್ಲಿ  ಶ್ರೀಲೀಲಾ ಈಗಾಗಲೇ ನಾಯಕಿಯಾಗಿ ಮಿಂಚಿದ್ದಾರೆ. ಕನ್ನಡ ಚಿತ್ರರಂಗದ ಬ್ಯೂಟಿಕ್ವೀನ್ ಶ್ರೀಲೀಲಾ ಈಗ ಟಾಲಿವುಡ್ ಹೀರೋ ವಿಜಯ್ ದೇವರಕೊಂಡ ಜೊತೆ ನಟಿಸಲು ಚಾನ್ಸ್ ಸಿಕ್ಕಿದ್ದಕ್ಕೆ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ವಿಜಯ್ -ರಶ್ಮಿಕಾ ಜೋಡಿ ನೋಡಿ ಮೆಚ್ಚಿಕೊಂಡಿದ್ದ ಅಭಿಮಾನಿಗಳಿಗೆ ಶ್ರೀಲೀಲಾ-ವಿಜಯ್ ಜೋಡಿಯನ್ನ ತೆರೆ ಮೇಲೆ ನೋಡುವ ಚಾನ್ಸ್ ಸಿಕ್ಕಿದೆ. ಮತ್ತೊಬ್ಬ ಕನ್ನಡತಿಗೆ ವಿಜಯ್ ದೇವರಕೊಂಡ ಜೋಡಿಯಾಗುತ್ತಿರುವ ವಿಚಾರ ಅಭಿಮಾನಿಗಳಿಗೂ ಕೂಡಾ ಖುಷಿ ತಂದಿದೆಯಂತೆ.

suddiyaana