ತಿಲಕ್ ಗೆ ಗೇಟ್ ಪಾಸ್ ಟೈಂ ಬಂತಾ? – ರಜತ್ ಗೆ ಭಾರತದ ಬಾಗಿಲು ಓಪನ್?
SPIN ಸಮಸ್ಯೆಗೆ ಸಿಕ್ಕಿತಾ ಸಲ್ಯೂಷನ್?

ತಿಲಕ್ ಗೆ ಗೇಟ್ ಪಾಸ್ ಟೈಂ ಬಂತಾ? – ರಜತ್ ಗೆ ಭಾರತದ ಬಾಗಿಲು ಓಪನ್?SPIN ಸಮಸ್ಯೆಗೆ ಸಿಕ್ಕಿತಾ ಸಲ್ಯೂಷನ್?

ಭಾರತ ಟಿ-20ಐ ತಂಡದಲ್ಲಿ ಈಗ ಸಾಕಷ್ಟು ವೀಕ್​ನೆಸ್ ಗಳಿವೆ. ಅದ್ರಲ್ಲೂ ಮಿಡಲ್ ಆರ್ಡರ್ ರನ್ಸ್ ಇಲ್ಲ ಅನ್ನೋ ಕಂಪ್ಲೇಂಟ್ಸ್ ಜಾಸ್ತಿಯಾಗ್ತಿದೆ. ಅದೆಲ್ಲಕ್ಕಿಂತ ಜಾಸ್ತಿ ವೈಸ್ ಕ್ಯಾಪ್ಟನ್ ತಿಲಕ್ ವರ್ಮಾ ಪ್ರದರ್ಶನವೇ ತಲೆಬಿಸಿ ತಂದಿಟ್ಟಿದೆ. ಅವ್ರ ಸ್ಟ್ರೈಕ್ ರೇಟ್ ತೀರಾ ಲೋ ಇದ್ದು ಭಾರತಕ್ಕೆ ಪ್ರೆಶರ್ ಹೆಚ್ಚಿಸ್ತಿದೆ. ಈ ಬಗ್ಗೆ ಮಾಜಿ ಕ್ರಿಕೆಟರ್ಸ್ ಕೂಡ ಧ್ವನಿ ಎತ್ತಿದ್ದು ಅದಕ್ಕೆ ಸಲ್ಯೂಷನ್ ಕೂಡ ಕೊಟ್ಟಿದ್ದಾರೆ.

ಇದನ್ನೂ ಓದಿ : ಕಾಮನ್ ವೆಲ್ತ್ ಗೇಮ್‌ನಲ್ಲಿ ಭಾರತಕ್ಕೆ ಮತ್ತೆರಡು ಸ್ವರ್ಣ- ಪುರುಷರ 10 ಸಾವಿರ ಮೀ. ಓಟದಲ್ಲಿ ಮೊದಲ ಪದಕ ಗೆದ್ದ ಗುಲ್ವಿರ್ ಸಿಂಗ್

ಈಗಾಗ್ಲೇ ಭಾರತ ಟಿ-20ಐ ತಂಡದಲ್ಲಿ ಸಾಕಷ್ಟು ಬದಲಾವಣೆಗಳು ಆಗ್ತಿದೆ. ಯಂಗ್​ಸ್ಟರ್ಸ್ ಬರ್ತಿದ್ದಾರೆ. ಫಾರ್ಮ್ ಇಲ್ಲದ ಕೆಲವ್ರನ್ನ ತಂಡದಿಂದ ಕೈಬಿಟ್ರೆ ಇನ್ನೂ ಕೆಲವ್ರನ್ನ ಬೆಂಚ್ ನಲ್ಲಿ ಕೂರಿಸ್ತಿದ್ದಾರೆ. ಸದ್ಯ ಜಿಂಬಾಬ್ವೆ ವಿರುದ್ಧ ಭಾರತ ಸರಣಿ ಗೆದ್ರೂ ಕೂಡ ಕೆಲ ವೀಕ್​ನೆಸ್​​ಗಳು ಹಾಗೇ ಇದೆ. ಯಾಕಂದ್ರೆ ಜಿಂಬಾಬ್ವೆ ತಂಡವೇನೋ ವೀಕ್ ಟೀಂ. ಮುಂದಿನ ದಿನಗಳಲ್ಲಿ ಸ್ಟ್ರಾಂಗ್ ಟೀಮ್​ಗಳ ಎದುರಿನ ಸರಣಿಗಳಿಗೆ ಈಗ್ಲೇ ಪ್ರಿಪೇರ್ ಆಗ್ಬೇಕು. ಹೀಗಾಗಿ ತಂಡದಲ್ಲಿ ಸದ್ಯಕ್ಕೆ ಮೇಜರ್ ಸರ್ಜರಿಯಲ್ಲಿ ಕೇಳಿ ಬರ್ತಿರೋ ಹೆಸರು ತಿಲಕ್ ವರ್ಮಾ.

ತಿಲಕ್ ಕೈಬಿಟ್ಟು ಪಾಟಿದಾರ್ ಗೆ ಚಾನ್ಸ್ ಕೊಡುತ್ತಾ ಬಿಸಿಸಿಐ?

ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ತಂಡಕ್ಕೆ ಬಂದ್ಮೇಲೆ ವೈಭವ್ ಸೂರ್ಯವಂಶಿಗೆ ನಂಬರ್ 5ನಲ್ಲಿ ಬ್ಯಾಟಿಂಗ್​ಗೆ ಅವಕಾಶ ನೀಡಲಾಗಿದೆ. ಆದ್ರೆ ಮದ್ಯಮ ಕ್ರಮಾಂಕದಲ್ಲಿ ತಿಲಕ್ ಕಡೆಯಿಂದ ಯಾವುದೇ ಸಪೋರ್ಟ್ ಸಿಗ್ತಾ ಇಲ್ಲ. ಸ್ಪಿನ್ ವಿರುದ್ಧ ಅಂತೂ ತೀರಾ ಕಳಪೆ ಪ್ರದರ್ಶನ ನೀಡ್ತಿದ್ದಾರೆ. ಜಿಂಬಾಬ್ವೆ ವಿರುದ್ಧದ 3ನೇ ಟಿ20 ಪಂದ್ಯದಲ್ಲೂ ತಿಲಕ್ 9 ಎಸೆತಗಳಲ್ಲಿ ಕೇವಲ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಪರಿಣಾಮ ಭಾರತ 200 ರನ್‌ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಇದೇ ಪರ್ಫಾಮೆನ್ಸ್​ನಿಂದ ಅವರ ಸ್ಟ್ರೈಕ್ ರೇಟ್ ಕುರಿತು ಮತ್ತೆ ಚರ್ಚೆಯಾಗ್ತಿದೆ. ಇನಿಂಗ್ಸ್‌ನ ಕೊನೆಯ ಹಂತದಲ್ಲಿ ರನ್ ವೇಗ ಕುಸಿತ ಆಗ್ತಿರೋದು ತಲೆಬಿಸಿ ತಂದಿದೆ. ತಿಲಕ್ ಆಟಕ್ಕೆ ಭಾರತ ತಂಡದ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಕೂಡ ಕಿಡಿ ಕಾರಿದ್ದಾರೆ. ತಿಲಕ್​ರನ್ನ ಕೈಬಿಟ್ಟು ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ಅಬ್ಬರಿಸಿರೋ ರಜತ್ ಪಾಟಿದಾರ್ ಗೆ ಅವಕಾಶ ಕೊಡಿ ಅಂತಾ ಆಗ್ರಹಿಸಿದ್ದಾರೆ. ಹಾಗೇ ರಜತ್ ಪಾಟೀದಾರ್‌ಗೆ ಕಂಪೇರ್ ಮಾಡಿದ್ರೆ ತಿಲಕ್ ಏನೂ ಅಲ್ಲ. ನಿಮಗೆ ನಿಜವಾದ, ಗಟ್ಟಿಮುಟ್ಟಾದ ಟಿ20 ಇನಿಂಗ್ಸ್ ಬೇಕಿದ್ದರೆ ಪಾಟೀದಾರ್ ಗೆ ಚಾನ್ಸ್ ಕೊಡಿ. ಯಶ್ ಠಾಕೂರ್ ಸೇರಿದಂತೆ ಸಾಕಷ್ಟು ಯಂಗ್ ಸ್ಟರ್ಸ್ ಗೆ  ಅವಕಾಶ ನೀಡುತ್ತಿರುವಾಗ, ಪಾಟೀದಾರ್‌ಗೆ ಏಕೆ ನೀಡುವುದಿಲ್ಲ?” ಎಂದು ಶ್ರೀಕಾಂತ್ ಕಿಡಿಕಾರಿದ್ದಾರೆ. ಌಕ್ಚುಲಿ ಶ್ರೀಕಾಂತ್ ಅವ್ರ ಒತ್ತಾಯ ಕೂಡ ಕರೆಕ್ಟಾಗೇ ಇದೆ. ರಜತ್ ಪಾಟಿದಾರ್ ಮಿಡಲ್ ಆರ್ಡರ್ ನಲ್ಲಿ ಒಳ್ಳೊಳ್ಳೆ ಇನ್ನಿಂಗ್ಸ್ ಆಡಿದ್ದಾರೆ. ಸ್ಪಿನ್ ವಿರುದ್ಧ ಅದ್ಭುತ ಸ್ಟ್ರೈಕ್ ರೇಟ್ ಇದೆ. ಆದ್ರೆ ಗೌತಮ್ ಗಂಭೀರ್ ಮತ್ತು ಅವ್ರ ಟೀಂ ಆರ್​ಸಿಬಿ ಆಟಗಾರರ ಮೇಲೆ ಜಿದ್ದು ಸಾಧಿಸ್ತಾನೇ ಇದ್ದಾರೆ. ಪ್ರತಿಭೆ ಇದ್ರೂ ತಮ್ಮ ಒಣಜಂಭದಿಂದ ಅವ್ರನ್ನ ಸೈಡ್​ಲೈನ್ ಮಾಡಿದ್ದಾರೆ. ಇದ್ರ ಎಫೆಕ್ಟ್ ಆನ್​ಫೀಲ್ಡ್​ನಲ್ಲಿ ಗೊತ್ತಾಗ್ತಿದ್ರೂ ಎಚ್ಚೆತ್ತುಕೊಳ್ಳೋ ಕೆಲಸ ಮಾಡ್ತಿಲ್ಲ ಅನ್ನೋದೇ ವಿಪರ್ಯಾಸ.

Shantha Kumari