ಗಂಭೀರ್ ಗೆ ಆಟ.. KLಗೆ ಪ್ರಾಣಸಂಕಟ – ಪದೇಪದೇ SLOT ಬದಲಿಸಿ ತಲೆಬಿಸಿ
ರಾಹುಲ್ ಕೆರಿಯರ್ ಗೆ ಎಫೆಕ್ಟ್ ಆಗ್ತಿದ್ಯಾ?

ಟೀಂ ಇಂಡಿಯಾದಲ್ಲಿ ಅತೀ ಹೆಚ್ಚು ಪ್ರಯೋಗಕ್ಕೆ ಒಳಗಾದ ಆಟಗಾರ ಅಂತಾ ಯಾರಾದ್ರೂ ಇದ್ರೆ ಅದು ನಮ್ಮ ಕನ್ನಡಿಗ ಕೆಎಲ್ ರಾಹುಲ್. ಸ್ಲಾಟ್ ವೇರಿಯೇಷನ್ಸ್, ರೆಸ್ಪಾನ್ಸಿಬಿಲಿಟೀಸ್ ಅಂತಾ ರಾಹುಲ್ ಮೇಲೆ ಎಕ್ಸ್ಪೆರಿಮೆಂಟ್ ನಡಿತಾನೇ ಇರುತ್ತೆ. ಆದ್ರೆ ಇದು ಅವ್ರ ಪರ್ಫಾಮೆನ್ಸ್ ಮೇಲೆ ಎಫೆಕ್ಟ್ ಆಗ್ತಿದ್ದು ಈ ಬಗ್ಗೆ ಮಾಜಿ ಆಟಗಾರರೇ ಧ್ವನಿ ಎತ್ತಿದ್ದಾರೆ. ಕೆಎಲ್ ರಾಹುಲ್ ಬೆನ್ನಿಗೆ ನಿಂತಿದ್ದಾರೆ.
ಇದನ್ನೂ ಓದಿ : ಟಾಸ್ ಗೆದ್ದ ಅಫ್ಘಾನ್ – K.L ರಾಹುಲ್ , ಅರ್ಶ್‌ದೀಪ್, ಕುಲ್‌ದೀಪ್ ಪ್ಲೇಯಿಂಗ್ 11 ನಿಂದ OUT
ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ್ಮೇಲೆ ಸ್ಲಾಟ್ಗಳ ವಿಚಾರದಲ್ಲಿ ಮ್ಯೂಸಿಕಲ್ ಚೇರ್ ಆಡಿಸ್ತಿರೋದು ನಿಮ್ಗೆಲ್ಲಾ ಗೊತ್ತೇ ಇದೆ.. ಅದ್ರಲ್ಲೂ ಕೆಎಲ್ ರಾಹುಲ್ ಮೇಲೆಯೇ ಅತೀ ಹೆಚ್ಚು ಪ್ರೆಶರ್ ಬೀಳ್ತಾ ಇರುವಂಥದ್ದು. ಒಂದು ಮ್ಯಾಚಲ್ಲಿ ಓಪನರ್, ಮತ್ತೊಂದ್ರಲ್ಲಿ ಫಿನಿಶರ್, ಮತ್ತೊಂದ್ರಲ್ಲಿ ಲೋವರ್ ಆರ್ಡರ್ ಹೀಗೆ ಕಂಪ್ಲೀಟ್ ಆಗಿ ಚೇಂಜಸ್ ಮಾಡ್ತಾನೇ ಇದ್ದಾರೆ. ಬಿಸಿಸಿಐನ ಇದೇ ಕಣ್ಣಾಮುಚ್ಚಾಲೆ ಮಾಜಿ ಆಟಗಾರರ ಪಿತ್ತ ನೆತ್ತಿಗೇರುವಂತೆ ಮಾಡಿದೆ.
ಏಕದಿನದಲ್ಲಿ 6ನೇ ಕ್ರಮಾಂಕದಲ್ಲಿ ರಾಹುಲ್ ಬ್ಯಾಟಿಂಗ್ ಬಗ್ಗೆ ಅಪಸ್ವರ!
ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನ ಗೆದ್ದಿರೋ ಭಾರತ ನೆಕ್ಸ್ಟ್ ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಆಡಲಿದೆ. ಇದಕ್ಕೂ ಮುನ್ನ ಐರ್ಲೆಂಡ್ ವಿರುದ್ಧ ಹಾಗೇ ಇಂಗ್ಲೆಂಡ್ ವಿರುದ್ಧ ಟಿ-20ಐ ಸರಣಿಗಳೂ ಇವೆ. ಆದ್ರೆ ಆಫ್ಘನ್ ವಿರುದ್ಧದ ಸರಣಿಯಲ್ಲಿ ಕೆಎಲ್ ರಾಹುಲ್ ಅವ್ರ ಸ್ಲಾಟ್ ಬಗ್ಗೆ ಚರ್ಚೆಯಾಗ್ತಿದೆ. ಮೊದಲ ಮ್ಯಾಚಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದಿದ್ದ ರಾಹುಲ್ 19 ಬಾಲಲ್ಲೇ 39 ರನ್ಸ್ ಸಿಡಿಸಿದ್ರು. ಆದ್ರೆ ಎರಡನೇ ಮ್ಯಾಚಲ್ಲಿ 6ನೇ ಸ್ಲಾಟ್ನಲ್ಲಿ ಕಣಕ್ಕಿಳಿಸಲಾಗಿತ್ತು. ಈ ವೇಳೆ ಫಸ್ಟ್ ಬಾಲಲ್ಲೇ ಔಟ್ ಆಗಿದ್ರು. ಇದಕ್ಕೆ ಬಿಸಿಸಿಐ ಆಯ್ಕೆ ಸಮಿತಿಯೇ ನೇರ ಕಾರಣ ಅಂತಾ ಭಾರತ ತಂಡದ ಮಾಜಿ ನಾಯಕ ಶ್ರೀಕಾಂತ್ ಆರೋಪಿಸಿದ್ದಾರೆ. ರಾಹುಲ್ ಟಾಪ್ ಆರ್ಡರ್ ಸ್ಪೆಷಲಿಸ್ಟ್ ಬ್ಯಾಟರ್. ಹೀಗಾಗಿ ಅವ್ರನ್ನ 4 ಅಥವಾ 5ನೇ ಕ್ರಮಾಂಕದಲ್ಲಿ ಬಳಸಿಕೊಳ್ಳಬೇಕು ಎಂದಿದ್ದಾರೆ. 6ನೇ ಕ್ರಮಾಂಕದಲ್ಲಿ ಆಡಿಸೋದು ಅವ್ರ ಕೆರಿಯರ್ಗೆ ಒಳ್ಳೆಯದಲ್ಲ ಎಂದಿದ್ದಾರೆ. ಹಾಗೇ ಗೌತಮ್ ಗಂಭೀರ್ ಅವ್ರ ತಂತ್ರಗಾರಿಕೆಯನ್ನ ಪ್ರಶ್ನೆ ಮಾಡಿದ್ದಾರೆ.
ಕೆಎಲ್ ರಾಹುಲ್ ಮೇಲೆ ಅದೆಷ್ಟು ಜವಾಬ್ದಾರಿ!
ಕೆಎಲ್ ರಾಹುಲ್ ವಿಚಾರದಲ್ಲಿ ಈ ರೀತಿಯ ವರ್ತನೆ ಇದೇ ಮೊದಲೇನಲ್ಲ. ಕಳೆದ ಎರಡು ವರ್ಷಗಳಿಂದ ನಡೀತಾನೇ ಇದೆ. ಅಷ್ಟೇ ಯಾಕೆ ಟೆಸ್ಟ್ ಫಾರ್ಮೆಟ್ ಅಂತಾ ಬಂದಾಗ ಯಶಸ್ವಿ ಜೈಸ್ವಾಲ್ ಜೊತೆ ಇನ್ನಿಂಗ್ಸ್ ಆರಂಭ ಮಾಡೋ ರಾಹುಲ್ ಏಕದಿನ ಅಂತಾ ಬಂದಾಗ ಫಿನಿಶರ್ ರೋಲ್ ಪ್ಲೇ ಮಾಡ್ಬೇಕು. ಫಿನಿಶರ್ ಆಗಿ ರನ್ಸ್ ಕಲೆ ಹಾಕೋದ್ರ ಜತೆಗೆ ಪ್ರೆಶರ್ ಹ್ಯಾಂಡಲ್ ಮಾಡೋ ಜವಾಬ್ದಾರಿಯೂ ಇರುತ್ತೆ. ಮತ್ತೊಂದು ಮೇನ್ ಥಿಂಗ್ ಅಂದ್ರೆ ಕೆಲ ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ಗೆ ಅವಕಾಶ ಕೊಟ್ರೆ ಮತ್ತೆ ಕೆಲ ಪಂದ್ಯಗಳಲ್ಲಿ ಬೇರೆಯವ್ರಿಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡಲಾಗ್ತಿದೆ. ಇದ್ರ ನಡುನೆ ಇಶಾನ್ ಕಿಶನ್ ತಂಡಕ್ಕೆ ಜಾಯ್ನ್ ಆಗಿರೋದು ಹಲವರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಿಶನ್ ಆಟಕ್ಕೆ ಜೈಸ್ವಾಲ್ ಮತ್ತು ರೋಹಿತ್ ಗೆ ಟೆನ್ಷನ್!
ಇನ್ನು ಇಶಾನ್ ಕಿಶನ್ ಏಕದಿನ ತಂಡಕ್ಕೆ ಕಂ ಬ್ಯಾಕ್ ಮಾಡಿ ಸೆಂಚುರಿ ಸಿಡಿಸಿರೋದು ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮಾಗೆ ಟೆನ್ಷನ್ ತಂದಿಟ್ಟಿದೆ. ಜೈಸ್ವಾಲ್ಗೆ ತುಂಬಾ ದಿನಗಳ ನಂತ್ರ ಅವಕಾಶ ಕೊಟ್ರೂ ಬಳಸಿಕೊಂಡಿರಲಿಲ್ಲ. ಅತ್ತ ರೋಹಿತ್ ವಿಚಾರದಲ್ಲೂ ಸಾಕಷ್ಟು ಚರ್ಚೆಯಾಗ್ತಿರೋದ್ರಿಂದ ಎಲ್ಲರ ಒಲವೂ ಇಶಾನ್ ಕಿಶನ್ ಕಡೆಗೆ ಹೋಗ್ತಿದೆ. ಹೀಗಾಗಿ ಇನ್ಮುಂದೆ ಏಕದಿನ ಮಾದರಿಯಲ್ಲಿ ಒಬ್ಬ ಆಟಗಾರನ ಸಕ್ಸಸ್ ಮತ್ತೊಬ್ಬ ಆಟಗಾರರ ಸ್ಥಾನಕ್ಕೆ ತೂಗುಗತ್ತಿಯಂತಾಗುತ್ತೆ.

ನೋಡಿರಿ

