‘ಶ್ರೀದೇವಿಯದ್ದು ಸಹಜ ಸಾವಲ್ಲ’ – ನಟಿಯ ಸಾವಿನ ಬಗ್ಗೆ ಕೊನೆಗೂ ಸತ್ಯ ಬಹಿರಂಗಪಡಿಸಿದ ಬೋನಿ ಕಪೂರ್

‘ಶ್ರೀದೇವಿಯದ್ದು ಸಹಜ ಸಾವಲ್ಲ’ – ನಟಿಯ ಸಾವಿನ ಬಗ್ಗೆ ಕೊನೆಗೂ ಸತ್ಯ ಬಹಿರಂಗಪಡಿಸಿದ ಬೋನಿ ಕಪೂರ್

ಬಾಲಿವುಡ್ ಬ್ಯೂಟಿ, ಬಾಲಿವುಡ್ ಚಾಂದಿನಿ ಅಂತಾನೇ ಫೇಮಸ್ ಆದವರು ನಟಿ ಶ್ರೀದೇವಿ. ಖ್ಯಾತ ನಟಿ ಶ್ರೀದೇವಿ ದಿಢೀರ್ ಸಾವು ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ವಿದೇಶದಲ್ಲಿ ಮೃತಪಟ್ಟಿರುವ ನಟಿ ಶ್ರೀದೇವಿ ಅವರ ಸಾವು ಇಂದಿಗೂ ಅನೇಕ ಅನುಮಾನಗಳಿಂದಲೇ ಕೂಡಿದೆ. ಆ ಘಟನೆ ನಡೆದು ಇಷ್ಟು ವರ್ಷಗಳು ಕಳೆದ ಬಳಿಕ ಮೊದಲ ಬಾರಿಗೆ ಶ್ರೀದೇವಿ ಪತಿ ಬೋನಿ ಕಪೂರ್ ಅವರು ಮೌನ ಮುರಿದಿದ್ದಾರೆ. ಪತ್ನಿಯ ಸಾವಿನ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ‘ನಿಮಗಾಗಿ ಎಲ್ಲಾ ಕಡೆ ಹುಡುಕುತ್ತೇನೆ ಅಮ್ಮಾ..’ – ಜಾನ್ವಿ ಕಪೂರ್ ಭಾವುಕ ಮಾತು..

ಖ್ಯಾತ ನಟಿ ಶ್ರೀದೇವಿ 2018ರ ಫೆಬ್ರವರಿ 24ರಂದು ದುಬೈನಲ್ಲಿ ನಿಧನರಾದರು. ಸ್ಟಾರ್ ಹೋಟೆಲ್‌ನ ಬಾತ್ ಟಬ್‌ನಲ್ಲಿ ಮುಳುಗಿ ಮೃತಪಟ್ಟಿದ್ದರು. ಈ ದುರಂತ ಘಟನೆ ಬಗ್ಗೆ ಶ್ರೀದೇವಿ ಪತಿ ಬೋನಿ ಕಪೂರ್ ಮತ್ತಷ್ಟು ಸತ್ಯ ಬಿಚ್ಚಿಟ್ಟಿದ್ದಾರೆ. ಪತ್ನಿ ಸಾವಿನ ಬಗ್ಗೆ ಕೆಲವೊಂದು ವಿಚಾರವನ್ನು ಹೇಳಿದ್ದಾರೆ.

ಶ್ರೀದೇವಿ ಸಾವಿನ ಕುರಿತು ವಿಚಾರಣೆ ವೇಳೆ ನಾನು 48 ಗಂಟೆಗಳ ಕಾಲ ಮಾತನಾಡಿದ್ದೆ. ಹಾಗಾಗಿ ಮತ್ತೆ ಮಾತನಾಡುವುದು ಬೇಡ ಎಂದು ನಿರ್ಧರಿಸಿದೆ. ಸುಳ್ಳು ಪತ್ತೆ ಪರೀಕ್ಷೆ ಸೇರಿದಂತೆ ಅನೇಕ ಟೆಸ್ಟ್‌ ಗಳಿಗೆ ನಾನು ಒಳಗಾದೆ. ಕೊನೆಗೂ ವರದಿಯಲ್ಲಿ ಅದು ಆ್ಯಕ್ಸಿಡೆಂಟಲ್ ಸಾವು ಎಂಬುದು ತಿಳಿಯಿತು’ ಎಂದು ಬೋನಿ ಕಪೂರ್ ಹೇಳಿದ್ದಾರೆ.

‘ದಿ ನ್ಯೂ ಇಂಡಿಯನ್’ಗೆ ನೀಡಿದ ಸಂದರ್ಶನದಲ್ಲಿ ಬೋನಿ ಕಪೂರ್ ಅವರು ಈ ವಿಚಾರ ತಿಳಿಸಿದ್ದಾರೆ. ‘ಶ್ರೀದೇವಿಯದ್ದು ಸಹಜ ಸಾವಲ್ಲ. ಅದು ಅನಾಹುತದ ಸಾವು. ಕೊಲೆ ಪ್ರಯತ್ನ ನಡೆದಿಲ್ಲ ಎಂಬುದು ಅಲ್ಲಿನ ಅಧಿಕಾರಿಗಳಿಗೆ ತಿಳಿಯಿತು. ಸುಳ್ಳು ಪತ್ತೆ ಪರೀಕ್ಷೆ ಸೇರಿದಂತೆ ಅನೇಕ ಟೆಸ್ಟ್ಗಳಿಗೆ ನಾನು ಒಳಗಾದೆ. ಕೊನೆಗೂ ವರದಿಯಲ್ಲಿ ಅದು ಆ್ಯಕ್ಸಿಡೆಂಟಲ್ ಸಾವು ಎಂಬುದು ತಿಳಿಯಿತು’ ಎಂದು ಬೋನಿ ಕಪೂರ್ ಹೇಳಿದ್ದಾರೆ. ಚೆನ್ನಾಗಿ ಕಾಣಬೇಕು ಎಂಬ ಕಾರಣಕ್ಕೆ ಶ್ರೀದೇವಿ ಪಾಲಿಸುತ್ತಿದ್ದ ಡಯೆಟ್‌ನಿಂದಾಗಿ ಈ ಸಾವು ಸಂಭವಿಸಿದೆ ಎಂದು ಬೋನಿ ಕಪೂರ್ ಹೇಳಿದ್ದಾರೆ. ‘ಶ್ರೀದೇವಿ ಯಾವಾಗಲೂ ಉಪವಾಸ ಮಾಡುತ್ತಿದ್ದರು. ತೆರೆ ಮೇಲೆ ಚೆನ್ನಾಗಿ ಕಾಣಬೇಕು, ದೇಹದ ಶೇಪ್ ಚೆನ್ನಾಗಿ ಇರಬೇಕು ಎಂಬ ಕಾರಣಕ್ಕೆ ಅವರು ಈ ರೀತಿ ಡಯೆಟ್ ಮಾಡುತ್ತಿದ್ದರು. ನನ್ನನ್ನು ಮದುವೆ ಆದಾಗಿನಿಂದ ಹಲವು ಬಾರಿ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅವರಿಗೆ ಲೋ ಬಿಪಿ ಇದೆ ಅಂತ ವೈದ್ಯರು ಹೇಳುತ್ತಲೇ ಇದ್ದರು’ ಎಂದಿದ್ದಾರೆ ಬೋನಿ ಕಪೂರ್. ಇದು ದುರಾದೃಷ್ಟದ ಸಂಗತಿ.

ಶ್ರೀದೇವಿ ನಿಧನದ ಬಳಿಕ ನಮಗೆ ಸಾಂತ್ವನ ಹೇಳಲು ಬಂದಿದ್ದ ನಾಗಾರ್ಜುನ ಅವರು ಅಂಥದ್ದೇ ಒಂದು ಘಟನೆಯನ್ನು ನೆನಪಿಸಿಕೊಂಡರು. ಕಠಿಣ ಡಯೆಟ್ ಮಾಡುತ್ತಿರುವಾಗ ಒಂದು ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಬಾತ್‌ರೂಮ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದು ಶ್ರೀದೇವಿ ಹಲ್ಲು ಮುರಿದುಕೊಂಡಿದ್ದರು ಎಂಬುದನ್ನು ನಾಗಾರ್ಜುನ ತಿಳಿಸಿದರು’ ಎಂದು ಬೋನಿ ಕಪೂರ್ ಹೇಳಿದ್ದಾರೆ. ಶ್ರೀದೇವಿ ಅವರು ಊಟದಲ್ಲಿ ಕಿಂಚಿತ್ತೂ ಉಪ್ಪು ಬಳಸುತ್ತಿರಲಿಲ್ಲ. ಇದೇ ಅವರ ಸಾವಿಗೆ ಕಾರಣ ಆಯಿತು ಎಂಬುದು ಬೋನಿ ಕಪೂರ್ ವಾದ. ಅವರ ಡಯೆಟ್‌ನಲ್ಲಿ ಉಪ್ಪು ಬಳಸಲು ಸಲಹೆ ನೀಡಿ ಎಂದು ಡಾಕ್ಟರ್ ಬಳಿಯೂ ಬೋನಿ ಮನವಿ ಮಾಡಿದ್ದರಂತೆ. ಆದರೆ ಅದನ್ನು ಶ್ರೀದೇವಿ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಹೊರಗಡೆ ಊಟಕ್ಕೆ ಹೋದಾಗಲೂ ಅವರು ಉಪ್ಪು ರಹಿತವಾದ ಆಹಾರವನ್ನೇ ಕೇಳುತ್ತಿದ್ದರು ಎಂದು ಬೋನಿ ಕಪೂರ್ ಹೇಳಿದ್ದಾರೆ.

Sulekha