ಗಿಲ್ಲಿಯೇ ಗೆಲ್ಲುವುದು ಶ್ರೀ ಮಾಯಗಾತಿ ದೇವಿ ಅಭಯ – ಬಲಗಡೆ ಬಿತ್ತು ಹೂವಿನ ಪ್ರಸಾದ
ರಾಜ್ಯಾದ್ಯಂತ ಹೆಚ್ಚಾಗಿದೆ ಗಿಲ್ಲಿ ಮೇಲಿನ ಕ್ರೇಜ್

ಗಿಲ್ಲಿಯೇ ಗೆಲ್ಲುವುದು ಶ್ರೀ ಮಾಯಗಾತಿ ದೇವಿ ಅಭಯ – ಬಲಗಡೆ ಬಿತ್ತು ಹೂವಿನ ಪ್ರಸಾದರಾಜ್ಯಾದ್ಯಂತ ಹೆಚ್ಚಾಗಿದೆ ಗಿಲ್ಲಿ ಮೇಲಿನ ಕ್ರೇಜ್

ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಬಿಗ್‌ಬಾಸ್ ವಿನ್ನರ್ ಆಗಿ ಗಿಲ್ಲಿ ಹೊರಹೊಮ್ಮಿದ್ದಾರೆ. ಆ ಲೆವೆಲ್‌ಗೆ ಗಿಲ್ಲಿಗೆ ಫ್ಯಾನ್ಸ್ ಕ್ರೇಜ್ ಇದೆ. ಅದರಲ್ಲೂ ಮಂಡ್ಯದ ರಾಜಕಾರಣಿಗಳು, ಮಂಡ್ಯದ ಜನತೆ ಗಿಲ್ಲಿ ಪರ ನಿಂತಿದ್ದಾರೆ. ಇನ್ನು ವೀಕ್ಷಕರೂ ಅಷ್ಟೇ. ಗಿಲ್ಲಿಯೇ ಗೆಲ್ಲಬೇಕು ಅಂತಿದ್ದಾರೆ. ಇದರ ಮಧ್ಯೆ ಶ್ರೀ ಮಾಯಗಾತಿ ದೇವಿಯೇ ಗಿಲ್ಲಿ ಗೆಲ್ತಾರೆ ಅನ್ನೋ ಸೂಚನೆ ಕೊಟ್ಟಿದ್ದಾಳೆ ಅಂತ ಫ್ಯಾನ್ಸ್‌ ಹೇಳ್ತಿದ್ದಾರೆ.

ಇದನ್ನೂ ಓದಿ:ಅಶ್ವಿನಿ ಗೌಡ ಇಲ್ಲ ಅಂದಿದ್ರೆ ಬಿಗ್‌ ಬಾಸ್‌ ಮುಚ್ಚಬೇಕಿತ್ತು! – ಕರವೇ ಅಧ್ಯಕ್ಷ ಹೀಗೆ ಹೇಳಿದ್ಯಾಕೆ?

ಬಿಗ್‌ಬಾಸ್ ಸೀಸನ್ 12 ಫಿನಾಲೆ ಭಾನುವಾರ ನಡೆಯಲಿದೆ. ರಾಜ್ಯಾದ್ಯಂತ ಗಿಲ್ಲಿ ಮೇಲಿನ ಕ್ರೇಜ್ ಜೋರಾಗಿದೆ. ಫ್ಯಾನ್ಸ್ ತಮ್ಮ ನೆಚ್ಚಿನ ಸ್ಪರ್ಧಿಯನ್ನ ಗೆಲ್ಲಿಸೋಕೆ ಮಾಡದ ಪೂಜೆ ಇಲ್ಲ, ಸಲ್ಲಿಸದ ಹರಕೆ ಇಲ್ಲ. ಇದರ ನಡುವೆ ಈಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಸಾಕ್ಷಾತ್ ಶ್ರೀ ಮಾಯಗಾತಿ ದೇವಿಯೇ ಗಿಲ್ಲಿಯೇ ಗೆಲ್ಲೋದು ಎಂಬ ಸೂಚನೆ ನೀಡಿದ್ದಾಳೆ. ದೇವಿಯ ಬಲಗಡೆಯಿಂದ ಹೂ ಬಿದ್ದಿದೆ. ಇದು ಮನುಷ್ಯರ ಆಟ ಅಲ್ಲ, ದೇವರೇ ಮೆಚ್ಚಿದ ಆಟ ಅಂತ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಗಿಲ್ಲಿ ಅಭಿಮಾನಿಗಳು ಒಟ್ಟಾಗಿ ಶ್ರೀ ಮಾಯಗಾತಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಿದ್ದರು. ಗರ್ಭಗುಡಿಯಲ್ಲಿ ದೇವಿಯ ವಿಗ್ರಹದ ಮುಂದೆ ಗಿಲ್ಲಿ ನಗುತ್ತಿರುವ ಫೋಟೋ ಇಟ್ಟು, “ತಾಯಿ, ಈ ಸಲ ಕಪ್ ಗಿಲ್ಲಿಗೇ ಸಿಗುವಂತೆ ಮಾಡು, ಆತನೇ ಗೆಲ್ಲಬೇಕು” ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡ್ತಿದ್ರು. ಅರ್ಚಕರು ಮಂಗಳಾರತಿ ಮಾಡುತ್ತಿದ್ದಂತೆಯೇ, ಪವಾಡ ಎಂಬಂತೆ ದೇವಿಯ ಬಲಗಡೆಯಿಂದ ಹೂವೊಂದು ಜಾರಿ ಗಿಲ್ಲಿ ಫೋಟೋ ಕಡೆ ಬಿದ್ದಿದೆ. ನಮ್ಮ ಸಂಪ್ರದಾಯದಲ್ಲಿ ಬಲಗಡೆಯಿಂದ ಹೂ ಬಿದ್ದರೆ ಅಂದುಕೊಂಡ ಕೆಲಸ ಯಶಸ್ವಿಯಾಗುತ್ತೆ, ದೇವಿಯ ಸಂಪೂರ್ಣ ಅನುಗ್ರಹ ಇದೆ ಅಂತ ನಂಬಲಾಗುತ್ತೆ. ದೇವಿಯ ಅನುಗ್ರಹ ಗಿಲ್ಲಿ ಮೇಲಿದೆ ಎಂಬ ಸಂಭ್ರಮ ಮುಗಿಲುಮುಟ್ಟಿದೆ. ಜನಗಳ ಆಶೀರ್ವಾದದ ಜೊತೆಗೆ ಈಗ ದೈವಬಲ ಕೂಡ ಸಿಕ್ಕಿದೆ. ಈ ಸಲ ಕಪ್ ನಮ್ಮ ಗಿಲ್ಲಿ ಬಾಸ್ ಎತ್ತೋದು ಗ್ಯಾರಂಟಿ ಎಂದು ಹೇಳುತ್ತಿದ್ದಾರೆ ಫ್ಯಾನ್ಸ್.

Sulekha