ಶ್ರೀಲಂಕಾದ ಹೊಸ ಸ್ಪಿನ್ ಸೆನ್ಸೇಶನ್ ದುನಿತ್ ವೆಲ್ಲಲಗೆ – ಟೀಂ ಇಂಡಿಯಾದ ಬ್ಯಾಟಿಂಗ್ ಬೆನ್ನೆಲುಬು ಮುರಿದ ಈ ಯಂಗ್‌ಸ್ಟರ್ ಬಗ್ಗೆ ವಿಶೇಷ ಮಾಹಿತಿ
ಟೀಮ್ ಇಂಡಿಯಾ ಮತ್ತು ಶ್ರೀಲಂಕಾ ನಡುವೆ ನಡೆದ ರೋಚಕ ಪಂದ್ಯದ ಸ್ಟಾರ್ ಆಫ್ ಅಟ್ರಾಕ್ಷನ್ ಅಂದರೆ ಶ್ರೀಲಂಕಾದ 20 ವರ್ಷದ ಪ್ರತಿಭೆ ದುನಿತ್ ವೆಲ್ಲಲಗೆ. ಟೀಂ ಇಂಡಿಯಾದ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದು ಮಾತ್ರವಲ್ಲ, ಬ್ಯಾಟಿಂಗ್‌ನಲ್ಲೂ ಉತ್ತಮ ಲಯಕಂಡುಕೊಂಡು ಬೌಲರ್ಗಳನ್ನೂ ಬೆವರಿಳಿಸಿದ್ದು ಇದೇ ಯಂಗ್‌ಸ್ಟರ್. ಲಂಕಾದ ಯುವ ಸ್ಪಿನ್ನರ್ ಬಗ್ಗೆ ವಿಶೇಷ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸ್ಪಿನ್ ಬೌಲರ್‌ಗಳ ಮುಂದೆ ಮತ್ತೆ ಎಡವಿದ ಟೀಮ್ ಇಂಡಿಯಾ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು – ಗಿಲ್‌ಗೆ ಪಾಠ ಮಾಡಿದ ಗಂಭೀರ್
ಶ್ರೀಲಂಕಾದ ಹೊಸ ಸ್ಪಿನ್ ಸೆನ್ಸೇಶನ್ ದುನಿತ್ ವೆಲ್ಲಲಗೆ ಭಾರತ ವಿರುದ್ಧದ ಮ್ಯಾಚ್ನಲ್ಲಿ ಒಟ್ಟು 5 ವಿಕೆಟ್ ಕಬಳಿಸಿದ್ದಾರೆ. ಈ ಪೈಕಿ ಮೊದಲ ವಿಕೆಟ್ಗೆ ಉತ್ತಮ ಪಾಟ್ನರ್ಶಿಪ್ ಮಾಡಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ರನ್ನ ಔಟ್ ಮಾಡಿ. ಬಳಿಕ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯಾರನ್ನ ಕೂಡ ಇದೇ 20 ವರ್ಷದ ಸ್ಪಿನ್ ಮಾಸ್ಟರ್ ಪೆವಿಲಿಯನ್ಗೆ ಕಳುಹಿಸಿದರು. ಇಂಡಿಯಾದ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳ ವಿಕೆಟ್ ಕೆಡವಿ ವೆಲ್ಲಲಗೆ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದಾರೆ. ವೆಲ್ಲಲಗೆ ಒಂದೊಂದು ಬಾಲ್ನ್ನ ಎದುರಿಸಲು ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಪರದಾಡಿದರು. ಕೇವಲ ಬೌಲಿಂಗ್ನಲ್ಲಷ್ಟೇ ಅಲ್ಲ, ಬ್ಯಾಟಿಂಗ್‌ನಲ್ಲೂ ಭಾರತೀಯ ತಂಡಕ್ಕೆ ಬಿಸಿ ಮುಟ್ಟಿಸಿದ್ರು. ಇನ್ನೇನು ಶ್ರೀಲಂಕಾ ಆಲ್ಔಟ್ ಆಗಿಯೇ ಬಿಡುತ್ತೆ ಅನ್ನೋವಷ್ಟರಲ್ಲಿ ದುನಿತ್ ವೆಲ್ಲಲಗೆ ತಂಡಕ್ಕೆ ನೆರವಾಗಿದ್ರು.
2003ರಲ್ಲಿ ಕೊಲಂಬೋದಲ್ಲಿ ಜನಿಸಿದ ದುನಿತ್ ವೆಲ್ಲಲಗೆ ಅಲ್ಲಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಎಜ್ಯುಕೇಶನ್ ಕಂಪ್ಲೀಟ್ ಮಾಡಿದ್ದರು. ಮೊದಲಿಗೆ ಕಾಲೇಜ್ ಕ್ರಿಕೆಟ್ ತಂಡದಲ್ಲಿ ಗುರುತಿಸಿಕೊಂಡ ವೆಲ್ಲಲಗೆ 2019ರಲ್ಲಿ ಶ್ರೀಲಂಕಾ ಕ್ರಿಕೆಟ್ ಕ್ಲಬ್ನಲ್ಲಿ ಆಡೋಕೆ ಅವಕಾಶ ಪಡೆದುಕೊಂಡಿದ್ದರು. ಅಲ್ಲೂ ಅಷ್ಟೇ ವೆಲ್ಲಲಗೆ ಆಲೌರೌಂಡ್ ಪರ್ಫಾಮೆನ್ಸ್ ನೀಡಿದ್ದರು. ಆಡಿದ ಕೆಲ ಮ್ಯಾಚ್ಗಳಲ್ಲೇ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲೂ ಕ್ಲಿಕ್ ಆಗುತ್ತಲೇ, ಸೆಲೆಕ್ಟರ್ಸ್ಗಳ ಕಣ್ಣಿಗೆ ಬಿದ್ದರು. 2022ರಲ್ಲಿ ಅಂಡರ್-19 ವರ್ಲ್ಡ್ಕಪ್ಗೆ ದುನಿತ್ ವೆಲ್ಲಲಗೆಯನ್ನ ಶ್ರೀಲಂಕಾ ತಂಡದ ಕ್ಯಾಪ್ಟನ್ ಆಗಿ ನೇಮಕ ಮಾಡಲಾಯಿತು. ಅಂಡರ್-19 ವಿಶ್ವಕಪ್‌ನಲ್ಲೂ ವೆಲ್ಲಗೆ ಟಾಪ್ ಕ್ಲಾಸ್ ಅಲ್ರೌಂಡ್ ಪರ್ಫಾಮೆನ್ಸ್ ನೀಡಿದರು. ಟೂರ್ನಿಯಲ್ಲಿ ಆಡಿದ 6 ಮ್ಯಾಚ್ಗಳಲ್ಲಿ ಒಟ್ಟು 17 ವಿಕೆಟ್ಗಳನ್ನ ಪಡೆದರು. ಅಷ್ಟೇ ಅಲ್ಲ, 264 ರನ್ ಚಚ್ಚಿದ್ರು. 2022ರ ವರ್ಲ್ಡ್ಕಪ್ನಲ್ಲಿ ಹೈಯೆಸ್ಟ್ ವಿಕೆಟ್ ಟೇಕರ್ ಆಗೋದ್ರ ಜೊತೆಗೆ ಶ್ರೀಲಂಕಾ ಪರ ಅತೀ ಹೆಚ್ಚು ಸ್ಕೋರ್ ಮಾಡಿರೋದು ಕೂಡ ದುನಿತ್ ವೆಲ್ಲಲಗೆಯೇ. ಅಂಡರ್-19 ವರ್ಲ್ಡ್ಕಪ್ನ ಪರ್ಫಾಮೆನ್ಸ್ ದುನಿತ್ ವೆಲ್ಲಲಗೆ ಕೆರಿಯರ್ನ ದೊಡ್ಡ ಟರ್ನಿಂಗ್ ಪಾಯಿಂಟ್ ಆಗಿತ್ತು. ಯಾಕಂದ್ರೆ ವಿಶ್ವಕಪ್ ಅಂತ್ಯಗೊಂಡ ಒಂದೇ ತಿಂಗಳಿನಲ್ಲಿ ಶ್ರೀಲಂಕಾದ ಟೆಸ್ಟ್ ತಂಡಕ್ಕೆ ಆಯ್ಕೆಯಾದರು. ಪಾಕಿಸ್ತಾನ ವಿರುದ್ಧದ ಟೆಸ್ಟ್ ಸ್ಕ್ವಾಡ್ಗೆ ದುನಿತ್ ವೆಲ್ಲಲಗೆ ಸೆಲೆಕ್ಟ್ ಆದರು. ಪಾಕ್ ವಿರುದ್ಧದ ಟೆಸ್ಟ್ ಸೀರಿಸ್ನಲ್ಲಿ ವೆಲ್ಲಲಗೆ ಒಂದು ಮ್ಯಾಚ್ ಅಷ್ಟೇ ಆಡಿದ್ದು. ನಂತರ 2022ರಲ್ಲಿ ಪಲ್ಲಕೆಲೆ ಸ್ಟೇಡಿಂಯನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಂಡೇ ಕ್ರಿಕೆಟ್ಗೆ ವೆಲ್ಲಲಗೆ ಡೆಬ್ಯೂ ಮಾಡಿದರು. ಇದುವರೆಗೆ 13 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿರುವ ವೆಲ್ಲಲಗೆ ಶ್ರೀಲಂಕಾ ಪರ ಒಟ್ಟು 17 ವಿಕೆಟ್ಗಳನ್ನ ಪಡೆದಿದ್ದಾರೆ. ಈ ಪೈಕಿ ಭಾರತ ವಿರುದ್ಧದ ಒಂದೇ ಮ್ಯಾಚ್ನಲ್ಲಿ 5 ವಿಕೆಟ್ ಕಬಳಿಸಿದ್ದಾರೆ. ಒಂದೇ ಮಾತಲ್ಲಿ ಹೇಳುವುದಾದರೆ, ಶ್ರೀಲಂಕಾ ಪಾಲಿಗಂತೂ ದುನಿತ್ ವೆಲ್ಲಲಗೆ ಗಿಫ್ಟೆಡ್ ಪ್ಲೇಯರ್. ಕೇವಲ 20 ವರ್ಷದ ಈ ಸೆನ್ಸೇಷನ್ನಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಭವಿಷ್ಯವಿದೆ. ಶ್ರೀಲಂಕಾಗೆ ಮತ್ತೊಬ್ಬ ವರ್ಲ್ಡ್ಕ್ಲಾಸ್ ಸ್ಟಾರ್ ಕ್ರಿಕೆಟರ್ ಸಿಕ್ಕಿರೋದಂತೂ ಸತ್ಯ.