ಪಂದ್ಯ ಆಡುತ್ತಿರುವಾಗಲೇ ತಂದೆ ಸಾವಿನ ಆಘಾತ – ಶ್ರೀಲಂಕಾದ ಡುನಿತ್ ವೆಲ್ಲಾಲ ಅನುಭವಿಸಿದ ಸಂಕಟ ಹೇಗಿತ್ತು ಗೊತ್ತಾ?
ಅಪ್ಪನ ಕನಸು ಈಡೇರುವಾಗಲೇ ವಿಧಿಯಾಟ..

ಶ್ರೀಲಂಕಾದ ಯುವ ಆಲ್‌ರೌಂಡರ್ ಡುನಿತ್ ವೆಲ್ಲಾಲ ಈಗಷ್ಟೇ ಕ್ರಿಕೆಟ್ ಜಗತ್ತಿನಲ್ಲಿ ತನ್ನದೇ ಆದ ಸಾಧನೆ ಮಾಡಲು ಹೊರಟಿದ್ದರು. ವಯಸ್ಸು ಕೇವಲ 22. ಮಗ ಡುನಿತ್ ವೆಲ್ಲಾಲಗೆ ತಂದೆಯೇ ಶಕ್ತಿ. ಕ್ರಿಕೆಟ್ ಆಡಲು ತಂದೆಯೇ ಸ್ಪೂರ್ತಿ. ತಂದೆ ಕ್ರಿಕೆಟರ್ ಆಗಿದ್ದರೂ ಕೂಡಾ ಅಂದುಕೊಂಡ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ತನ್ನ ಕನಸನ್ನು ಮಗನ ಮೂಲಕ ಸಾಕಾರ ಗೊಳಿಸಲು ಮುಂದಾಗಿದ್ದರು. ತನ್ನೆಲ್ಲಾ ಸಮಯವನ್ನು ಮಗನಿಗಾಗಿ ಮೀಸಲಿಟ್ಟು, ಆಲ್‌ರೌಂಡರ್ ಆಗಿ ರೂಪಿಸಿದ್ದರು. ಮಗನು ಕೂಡಾ ಅಷ್ಟೇ.. ಏಷ್ಯಾಕಪ್ ತಂಡಕ್ಕೆ ಎಂಟ್ರಿಕೊಟ್ಟು ಅಪ್ಪನ ಕನಸನ್ನು ಸಾಕಾರ ಮಾಡಲು ಹೊರಟಿದ್ದ. ಆದರೆ, ವಿಧಿಬರಹವೇ ಬೇರೆ ಇತ್ತು..
ಇದನ್ನೂ ಓದಿ: ಸಿಂಹಳೀಯರ ಮುಂದೆ ಮಂಡಿಯೂರಿದ ಅಫ್ಘಾನಿಸ್ತಾನ – ಸೂಪರ್ 4ಗೆ ಹಂತಕ್ಕೇರಿದ ಶ್ರೀಲಂಕಾ
ಏಷ್ಯಾಕಪ್ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಶ್ರೀಲಂಕಾ ಕಣಕ್ಕಿಳಿದಿತ್ತು. ಮೊದಲು ಆಫ್ಘಾನ್ ಬ್ಯಾಟಿಂಗ್ ಸೆಲೆಕ್ಟ್ ಮಾಡಿಕೊಂಡಿತ್ತು. ಹೀಗಾಗಿ ಶ್ರೀಲಂಕಾ ಪರ ಯುವ ಆಲ್‌ರೌಂಡರ್ ಡುನಿತ್ ವೆಲ್ಲಾಲ ಕೂಡಾ ಬೌಲಿಂಗ್ ಮಾಡುತ್ತಿದ್ದರು. ಇದೇ ಸಮಯದಲ್ಲಿ 22 ವರ್ಷದ ಯಂಗ್ ಕ್ರಿಕೆಟರ್ ಡುನಿತ್ ವೆಲ್ಲಾಲಗೆ ಒಂದು ಕೆಟ್ಟ ಸುದ್ದಿ ಕಾದಿತ್ತು. ಒನ್ ಸೈಡ್ ಪಂದ್ಯ ಮುಗಿಯುವವರೆಗೂ ಶ್ರೀಲಂಕಾ ಮ್ಯಾನೇಜ್‌ಮೆಂಟ್ ದುಃಖದಿಂದ ಸುದ್ದಿಯನ್ನು ತಡೆಹಿಡಿದುಕೊಂಡಿದ್ದರು. ಡುನಿತ್ ವೆಲ್ಲಾಲ ಪಂದ್ಯ ಮುಗಿಸಿ ಬರುತ್ತಿದ್ದಂತೆ, ತಂದೆಯ ಮರಣದ ಸುದ್ದಿಯನ್ನು ತುಂಬಾ ನೋವಲ್ಲೇ ತಿಳಿಸಿದರು. ಯಾರಿಗಾಗಿ ಕ್ರಿಕೆಟ್ ನಲ್ಲಿ ಸಾಧನೆ ಮಾಡ ಹೊರಟಿದ್ದನೋ, ಅವರೇ ತನ್ನನ್ನು ಬಿಟ್ಟು ಹೋಗಿದ್ದಾರೆ ಎಂಬ ಸುದ್ದಿ ಕೇವಲ 22 ವರ್ಷದ ಕ್ರಿಕೆಟರ್ ತಡೆದುಕೊಂಡಿದ್ದೇ ಹೆಚ್ಚು.. ಈ ಸಮಯದಲ್ಲಿ ಲಂಕಾ ಟೀಮ್ ಡುನಿತ್ ಜೊತೆಗಿತ್ತು. ತಂದೆ ಸುರಂಗ ವೆಲ್ಲಾಲ ಇನ್ನಿಲ್ಲ ಎಂಬ ಸುದ್ದಿ ಕೇಳಿ ಸ್ವಲ್ಪ ಹೊತ್ತು ಡುನಿತ್ ಮೌನವಾದರು. ನಂತರ ತನಗೆಂದು ಕಾಯುತ್ತಿದ್ದ ಹೆಲ್ಮೆಟ್ ಧರಿಸಿ, ಬ್ಯಾಟ್ ಹಿಡಿದುಕೊಂಡು ವಾಪಸ್ ಡ್ರೆಸ್ಸಿಂಗ್ ರೂಮ್‌ಗೆ ದುಃಖದಲ್ಲೇ ತೆರಳಿದರು.
ಶ್ರೀಲಂಕಾದ ಮಾಧ್ಯಮ ವರದಿಗಳ ಪ್ರಕಾರ, ಡುನಿತ್ ಅವರ ತಂದೆ ಸುರಂಗ ವೆಲ್ಲಾಲಗೆ ಅವರಿಗೆ ಹೃದಯಾಘಾತವಾಗಿದೆ. ಇನ್ನು ಸುರಂಗ ವೆಲ್ಲಾಲ ಕ್ರಿಕೆಟರ್ ಆಗಿದ್ದರು. ಕಾಲೇಜ್ ಲೆವೆಲ್ ನಲ್ಲಿ ಕ್ರಿಕೆಟ್ ಕ್ಯಾಪ್ಟನ್ ಆಗಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಡುವ ಕನಸು ನನಸಾಗಿರಲೇ ಇರಲಿಲ್ಲ. ಹೀಗಾಗಿ ಸುರಂಗ ವೆಲ್ಲಾಲ ಅವರು ಮಗ ಡುನಿತ್‌ಗೆ ಕ್ರಿಕೆಟ್‌ಗೆ ಕಲಿಸ್ತಾರೆ. ಅಪ್ಪನ ಆಸೆಯಂತೆ ಮಗ ಡುನಿತ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿಕೊಡ್ತಾರೆ. ವಿಪರ್ಯಾಸವೆಂದರೆ, ಕ್ರಿಕೆಟ್ ಜಗತ್ತಿನಲ್ಲಿ ಯಶಸ್ಸಿನ ಒಂದೊಂದೇ ಮೆಟ್ಟಿಲು ಮಗ ಏರುತ್ತಿರುವುದನ್ನು ನೋಡಬೇಕು ಅಂತಾ ಆಸೆಯಿಂದ ಕಾಯುತ್ತಿದ್ದ ಅಪ್ಪ ಕಾಲನ ಕರೆಗೆ ಓಗೊಟ್ಟಿದ್ದಾರೆ.. ಮಗ ಕ್ರಿಕೆಟ್ ಆಡುತ್ತಿರುವಾಗಲೇ ಹೃದಯಾಘಾತದಿಂದ ಪ್ರಾಣ ಬಿಟ್ಟಿದ್ದಾರೆ.
ಗುರುವಾರ ಡುನಿತ್ ವೆಲ್ಲಾಲಗೆ ಒಂದು ರೀತಿ ಕೆಟ್ಟ ದಿನವಾಗಿತ್ತು. ಅಫ್ಘಾನಿಸ್ತಾನ ವಿರುದ್ಧದ ಪಂದ್ಯವೂ ನಿರಾಶಾದಾಯಕವಾಗಿತ್ತು. ಅವರು ನಾಲ್ಕು ಓವರ್‌ಗಳಲ್ಲಿ 49 ರನ್ ಬಿಟ್ಟುಕೊಟ್ಟು ಕೇವಲ ಒಂದು ವಿಕೆಟ್ ಪಡೆದರು. ಇದಲ್ಲದೆ, ಇನ್ನಿಂಗ್ಸ್‌ನ ಕೊನೆಯ ಓವರ್ ಬೌಲಿಂಗ್ ಮಾಡಲು ಬಂದ ವೆಲ್ಲಾಲಗೆ ವಿರುದ್ಧ ಮೊಹಮ್ಮದ್ ನಬಿ ಸತತ ಐದು ಸಿಕ್ಸರ್‌ಗಳನ್ನು ಬಾರಿಸಿದರು. ಕಳೆದ ತಿಂಗಳು ಕೊಲಂಬೊದಲ್ಲಿ ವೃತ್ತಿಜೀವನದ ಅತ್ಯುತ್ತಮ 5/27 ಸೇರಿದಂತೆ ಭಾರತ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ, ವೆಲ್ಲಾಲ ಶ್ರೀಲಂಕಾ ತಂಡದಲ್ಲಿ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ನೋಡಿರಿ

