CSKಯಿಂದ ಧೋನಿಗೆ ಮಹಾ ಮೋಸ! ವೈಭವ್ ಟೆಸ್ಟ್ ಆಸೆಗೆ ತಡೆ ‘ಗೋಡೆ’

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ಲಂಕಾ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ ಸರ್ಫರಾಜ್ ಖಾನ್ ಲಂಕಾ ಬ್ಯಾಟರ್ನನ್ನ ತಮ್ಮ ಮಾತಿನ ಮೂಲಕವೇ ಒತ್ತಡಕ್ಕೆ ಸಿಲುಕಿಸಿ ಔಟ್ ಮಾಡಿದ ವಿಡಿಯೋ ವೈರಲ್ ಆಗ್ತಿದೆ. ಮಾನವ್ ಸುತಾರ್ ಬೌಲಿಂಗ್ ಮಾಡಲು ಸಜ್ಜಾಗಿದ್ದಾಗ, ಸೈಟ್ಸ್ಕ್ರೀನ್ ಬಳಿ ಏನೋ ಚಲನೆ ಇದೆಯೆಂದು ಧನಂಜಯ ಡಿ ಸಿಲ್ವಾ ಆಟವನ್ನು ಕ್ಷಣಕಾಲ ನಿಲ್ಲಿಸಿದರು. ಈ ವೇಳೆ ಶಾರ್ಟ್ ಲೆಗ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸರ್ಫರಾಝ್ ಖಾನ್ “ಅಲ್ಲಿ ಏನೂ ಇಲ್ಲ ಬ್ರೋ, ನೀನು ಸುಮ್ಮನೆ ಅಲ್ಲಿ ನೋಡುತ್ತಿದ್ದೀಯಾ. ಭಯ ಪಡಬೇಡ. ನೀನು ತಂಡದ ಕ್ಯಾಪ್ಟನ್, ಆಡು ಬ್ರೋ ಎಂದಿದ್ದಾರೆ. ಹೀಗೆ ಹೇಳಿದ ತಕ್ಷಣ ಸಿಲ್ಟಾ ಔಟ್ ಆಗಿದ್ದಾರೆ.
ಬಿಸಿಸಿಐ ಸೆಪ್ಟೆಂಬರ್ 18 ರಂದು ಮುಂಬೈನಲ್ಲಿರುವ ತನ್ನ ಪ್ರಧಾನ ಕಚೇರಿಯಲ್ಲಿ ತನ್ನ ಚುನಾವಣೆ ಮತ್ತು ವಾರ್ಷಿಕ ಸಾಮಾನ್ಯ ಸಭೆ ನಡೆಸಲಿದೆ. ಐಪಿಎಲ್ ಆಡಳಿತ ಮಂಡಳಿಯ ಇಬ್ಬರು ಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ಸಭೆಯ ಮುಖ್ಯ ಉದ್ದೇಶವಾಗಿದೆ. ಸೆಪ್ಟೆಂಬರ್ 9 ಮತ್ತು 10 ರಂದು ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ ನಾಮಪತ್ರಗಳನ್ನು ಸಲ್ಲಿಸಬಹುದು. ಸೆಪ್ಟೆಂಬರ್ 12 ರಂದು ಸ್ಪರ್ಧಿಸುವ ಅಭ್ಯರ್ಥಿಗಳ ಘೋಷಣೆ ಪಟ್ಟಿ ಬಿಡುಗಡೆಯಾಗಲಿದ್ದು, ನಂತರ ಚುನಾವಣೆಗಳು ನಡೆಯಲಿವೆ. ಸೆಪ್ಟೆಂಬರ್ 18 ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ಟೀಂ ಇಂಡಿಯಾಗೆ ದ್ರಾವಿಡ್ ವಾರ್ನಿಂಗ್ – RO-KO ಇಲ್ಲದೇ ಫ್ಲಾಪ್ ಆಗ್ತಿದ್ದಾರಾ?
ಕೋಚ್ ಗೌತಮ್ ಗಂಭೀರ್ ಮೇಲೆ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಆಕ್ರೋಶ ಹೊರಹಾಕಿದ್ದಾರೆ. ಭಾರತ ತಂಡಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿ ಮ್ಯಾಚ್ ವಿನ್ನರ್ ಆಟಗಾರರಾದ ಸೂರ್ಯಕುಮಾರ್ ಯಾದವ್ ಅವರನ್ನು ಸೀಮಿತ ಓವರ್ಗಳ ತಂಡದಿಂದ ದಿಢೀರನೆ ಕೈಬಿಟ್ಟಿದ್ದು ಸರಿಯಲ್ಲ ಎಂದಿದ್ದಾರೆ. ಹಾಗೇ ಶಮಿ ಅವರಂತಹ ಹಿರಿಯ ಆಟಗಾರನನ್ನು ಮತ್ತಷ್ಟು ಗೌರವಯುತವಾಗಿ ನಡೆಸಿಕೊಳ್ಳಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಟೆಸ್ಟ್ ಕ್ರಿಕೆಟ್ಗೆ ವೈಭವ್ ಬರುವ ಬಗ್ಗೆ ರಾಹುಲ್ ದ್ರಾವಿಡ್ ಮಾತನಾಡಿದ್ದಾರೆ.. ವೈಭವ್ ಅವರು ಈಗಾಗಲೇ ಟಿ20 ಮತ್ತು ಐಪಿಎಲ್ ಮೂಲಕ ವೈಟ್-ಬಾಲ್ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ, ಟೆಸ್ಟ್ ಕ್ರಿಕೆಟ್ಗೆ ಸಿದ್ಧರಾಗಲು ಅವರು ಭಾರತೀಯ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಕನಿಷ್ಠ ಎರಡು ಸೀಸನ್ಗಳ ಕಾಲ ಕೆಂಪು ಚೆಂಡಿನ ಕ್ರಿಕೆಟ್ ಆಡಿ ಅನುಭವ ಗಳಿಸಬೇಕು ಎಂದು ದ್ರಾವಿಡ್ ಸಲಹೆ ನೀಡಿದ್ದಾರೆ.
ಎಂಎಸ್ ಧೋನಿ ಮತ್ತು CSK ಫ್ರಾಂಚೈಸಿ ಆಡಳಿತ ಮಂಡಳಿಯ ನಡುವೆ ಬಿರುಕು ಮೂಡಿದೆ ಎಂದು ವರದಿಯಾಗಿದೆ. ಎಂ.ಎಸ್. ಧೋನಿ ಅವರು ಸಿಎಸ್ಕೆ ತಂಡದಲ್ಲಿ ಗೌರವಯುತ ಪಾಲುದಾರರಾಗಲು ಬಯಸಿದ್ದರು. ಧೋನಿ ಆರಂಭದಲ್ಲಿ ಶೇ. 25ರಷ್ಟು ಪಾಲನ್ನು ಕೇಳಿದ್ದರೆ, ಮ್ಯಾನೇಜ್ಮೆಂಟ್ ಕೇವಲ ಶೇ. 3ರಷ್ಟು ನೀಡಲು ಮುಂದಾಗಿತ್ತು. ಧೋನಿ ಶೇ. 18ಕ್ಕೆ ಇಳಿದರೂ, ಸಿಎಸ್ಕೆ ಶೇ. 5.5ಕ್ಕಿಂತ ಹೆಚ್ಚು ನೀಡಲು ನಿರಾಕರಿಸಿತು. ಈ ದೊಡ್ಡ ವ್ಯತ್ಯಾಸದಿಂದಾಗಿ ಮಾತುಕತೆ ಸಂಪೂರ್ಣವಾಗಿ ಮುರಿದು ಬಿದ್ದಿದೆ ಎನ್ನಲಾಗಿದೆ.
ಆರ್ಸಿಬಿ ನಾಯಕ ರಜತ್ ಪಾಟೀದಾರ್ 11 ಆಟಗಾರರನ್ನೊಳಗೊಂಡ ಬಲಿಷ್ಠ ಐಪಿಎಲ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಆರಂಭಿಕರನ್ನಾಗಿ ವಿರಾಟ್ ಕೊಹ್ಲಿ ಹಾಗೂ ಕ್ರಿಸ್ ಗೇಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಸೂರ್ಯಕುಮಾರ್ ಯಾದವ್ಗೆ ಮೂರನೇ ಸ್ಥಾನ ನೀಡಿದ್ದರೇ, ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾಗೆ ನಾಲ್ಕನೇ ಹಾಗೂ ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಅವರಿಗೆ ಐದನೇ ಸ್ಥಾನ ನೀಡಿದ್ದಾರೆ.
ರೋಹಿತ್ ಶರ್ಮಾರ ಕೆಂಪು ಜರ್ಸಿಯ ಫೋಟೋವೊಂದು ಭಾರಿ ಸಂಚಲನ ಮೂಡಿಸಿ, ಅವರು ಆರ್ಸಿಬಿ ಸೆರ್ತಾರೆ ಅನ್ನೋ ಸುದ್ದಿ ಹಬ್ಬಿತ್ತು. ಆದ್ರೆ ಈಗ ಅದು ಸುಳ್ಳು ಅನ್ನೋದು ಗೊತ್ತಾಗಿದೆ. ರೋಹಿತ್ ಶರ್ಮಾ ಅವರು ಬೆಂಗಳೂರು ಮೂಲದ ಗೇಮ್-ಟೆಕ್ ಸ್ಟುಡಿಯೊ ‘ಲೈಟ್ಫುರಿ ಗೇಮ್ಸ್’ ಜೊತೆ ಅಧಿಕೃತವಾಗಿ ಕೈಜೋಡಿಸಿದ್ದು, ಈ ಕೆಂಪು ಜರ್ಸಿ ಈ ಗೇಮ್ನ ‘ಅಲ್ಟಿಮೇಟ್ ಸ್ಕ್ವಾಡ್’ ಮೋಡ್ನ ಸಿನಿಮ್ಯಾಟಿಕ್ ಟೀಸರ್ನದ್ದಾಗಿದೆ.
ಸಂಜಯ್ ಬಂಗಾರ್ ಅವರ ಪುತ್ರಿ, ಟ್ರಾನ್ಸ್ಜೆಂಡರ್ ಕ್ರಿಕೆಟರ್ ಅನಯಾ ಬಂಗಾರ್ ಅವರಿಗೆ ಸ್ಪರ್ಧಾತ್ಮಕ ಕ್ರಿಕೆಟ್ ಆಡಲು ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ದೀರ್ಘಾವಧಿಯ ಕಾನೂನು ಹಾಗೂ ಕ್ರೀಡಾ ನಿಯಮಾವಳಿಗಳ ಹೋರಾಟದ ಬಳಿಕ, ಕ್ರಿಕೆಟ್ ಆಸ್ಟ್ರೇಲಿ ಅನಯಾಗೆ ಮಹಿಳಾ ಕಮ್ಯುನಿಟಿ ಕ್ರಿಕೆಟ್ ಮತ್ತು ಪ್ರೀಮಿಯರ್ ಕ್ರಿಕೆಟ್ನಲ್ಲಿ ಭಾಗವಹಿಸಲು ಅಧಿಕೃತ ಅನುಮತಿ ನೀಡಿದೆ.
ಜಪಾನ್ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್ನ ಕ್ರಿಕೆಟ್ ಪಂದ್ಯಾವಳಿಯ ಅಧಿಕೃತ ವೇಳಾಪಟ್ಟಿ ಪ್ರಕಟಗೊಂಡಿದೆ. ಜಪಾನ್ನ ನಿಸ್ಶಿನ್ನಲ್ಲಿರುವ ‘ಕೊರೊಗಿ ಅಥ್ಲೆಟಿಕ್ ಪಾರ್ಕ್’ ಮೈದಾನದಲ್ಲಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 3ರ ವರೆಗೆ ಈ ಪಂದ್ಯಗಳು ನಡೆಯಲಿವೆ. ಬಲಿಷ್ಠ ತಂಡಗಳಾದ ಭಾರತ, ಪಾಕಿಸ್ತಾನ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ್ ನೇರವಾಗಿ 2ನೇ ಹಂತವಾದ ಕ್ವಾರ್ಟರ್-ಫೈನಲ್ಗೆ ಅರ್ಹತೆ ಪಡೆದಿವೆ.
ಕಳೆದ 10 ವರ್ಷಗಳಿಂದ ಏಷ್ಯಾ ಕಪ್ ಫೈನಲ್ ತಲುಪದ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡವು ಮುಂಬರುವ 2026ರ ಏಷ್ಯಾ ಕಪ್ಗಾಗಿ ವಿನೂತನ ಸಿದ್ಧತೆ ನಡೆಸುತ್ತಿದೆ. ಲಾಹೋರ್ನಲ್ಲಿ ನಡೆಯುತ್ತಿರುವ ಅಭ್ಯಾಸ ಶಿಬಿರದಲ್ಲಿ ನಾಯಕಿ ಫಾತಿಮಾ ಸನಾ ನೇತೃತ್ವದ ತಂಡವು ಅಬ್ದುಲ್ ಖಾದಿರ್ ಅಕಾಡೆಮಿಯ ಪುರುಷರ ತಂಡದ ವಿರುದ್ಧ ಟಿ20 ಪಂದ್ಯಗಳನ್ನು ಆಡುತ್ತಿದೆ. ಟಿ20 ವಿಶ್ವಕಪ್ ಹಿನ್ನಡೆಯಿಂದ ಹೊರಬರಲು ಮತ್ತು ಒತ್ತಡ ನಿರ್ವಹಣೆಯ ಕೌಶಲ್ಯ ಹೆಚ್ಚಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ.

ನೋಡಿರಿ

