ವಾಂಖೆಡೆಯಲ್ಲಿ 12 ವರ್ಷಗಳ ಬಳಿಕ ಭಾರತ- ಶ್ರೀಲಂಕಾ ಫೈಟ್ – ಪಂದ್ಯದ ವಿಶೇಷತೆ ಏನು ಗೊತ್ತಾ..?
ಐಸಿಸಿ ಏಕದಿನ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಸತತ 4ನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಶ್ರೀಲಂಕಾ ತಂಡ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಿಟ್ಟಿಸಿದೆ. ಈ ಬರೋಬ್ಬರಿ 4,597 ದಿನಗಳು ಅಂದರೆ 12 ವರ್ಷಗಳ ನಂತರ ಭಾರತ ಹಾಗೂ ಶ್ರೀಲಂಕಾ ನಡುವೆ ಹೈವೋಲ್ಟೇಜ್ ಕದನ ನಡೆಯಲಿದೆ. ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ (ODI World Cup Qualifiers ) ಭಾನುವಾರ ಜಿಂಬಾಬ್ವೆಯನ್ನು ಸೋಲಿಸಿದ ಶ್ರೀಲಂಕಾ (Sri Lanka) ತಂಡ ಅಂತಿಮವಾಗಿ ವಿಶ್ವಕಪ್‌ಗೆ ತಮ್ಮ ಟಿಕೆಟ್ ಖಚಿತಪಡಿಸಿಕೊಂಡಿದೆ.
ಜಿಂಬಾಬ್ವೆ ವಿರುದ್ಧ 9 ವಿಕೆಟ್‌ಗಳ ಏಕಪಕ್ಷೀಯ ಗೆಲುವು ಸಾಧಿಸಿದ ಲಂಕಾ ಪಡೆ ಇದೀಗ ವಿಶ್ವಕಪ್ ಆಡುವ 10 ತಂಡಗಳಲ್ಲಿ 9ನೇ ತಂಡವಾಗಿ ವಿಶ್ವ ಸಮರಕ್ಕೆ ಎಂಟ್ರಿಕೊಟ್ಟಿದೆ. ಇದರೊಂದಿಗೆ 4597 ದಿನಗಳ ಬಳಿಕ ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯಕ್ಕೆ ಆತಿಥ್ಯವಹಿಸಲು ಮುಂಬೈನ ವಾಂಖೆಡೆ ಸ್ಟೇಡಿಯಂ (Wankhede Stadium) ಸಾಕ್ಷಿಯಾಗಲಿದೆ.
ಇದನ್ನೂ ಓದಿ : ಐಸಿಸಿ ಏಕದಿನ ವಿಶ್ವಕಪ್ 2023 ವೇಳಾಪಟ್ಟಿ ಪ್ರಕಟ – ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಕ್ರಿಕೆಟ್ ಹಬ್ಬ
ಇಲ್ಲೊಂದು ಅಚ್ಚರಿಯ ಸಂಗತಿಯೆಂದರೆ ಬರೋಬ್ಬರಿ 12 ವರ್ಷಗಳ ಹಿಂದೆ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇದೇ ಮೈದಾನದಲ್ಲಿ ಅಂದರೆ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ್ದ ಧೋನಿ ನಾಯಕತ್ವದ ಟೀಂ ಇಂಡಿಯಾ 28 ವರ್ಷಗಳ ನಂತರ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಇದೀಗ ಶ್ರೀಲಂಕಾ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಸೋಲಿಸಿ ವಿಶ್ವಕಪ್‌ಗೆ ತಮ್ಮ ಟಿಕೆಟ್ ಖಚಿತಪಡಿಸಿಕೊಂಡಿರುವುದರೊಂದಿಗೆ ಭಾರತದ ಎದುರು ವಾಂಖೆಡೆ ಮೈದಾನದಲ್ಲಿ ಸೆಣಸಾಡಲು ಮುಂದಾಗಿದೆ.
ವಾಸ್ತವವಾಗಿ ವಿಶ್ವಕಪ್ ವೇಳಾಪಟ್ಟಿಯ ಪ್ರಕಾರ ಭಾರತ ತಂಡ ನವೆಂಬರ್ 2 ರಂದು ಕ್ವಾಲಿಫೈಯರ್-2 ತಂಡವನ್ನು ವಾಂಖೆಡೆ ಮೈದಾನದಲ್ಲಿ ಎದುರಿಸಲಿದೆ. ಇದೀಗ ಶ್ರೀಲಂಕಾ ಕ್ವಾಲಿಫೈಯರ್-2 ತಂಡವಾಗಿ ವಿಶ್ವಕಪ್‌ಗೆ ಎಂಟ್ರಿಯಾಗಿದೆ. ಅದೇನೆಂದರೆ, ಒಟ್ಟು 4597 ದಿನಗಳ ಬಳಿಕ ಭಾರತ ಮತ್ತು ಶ್ರೀಲಂಕಾ ತಂಡಗಳು ವಿಶ್ವಕಪ್ನಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. 12 ವರ್ಷಗಳ ಹಿಂದೆ ಏಪ್ರಿಲ್ 2, 2011 ರಂದು ಇದೇ ಶ್ರೀಲಂಕಾ ತಂಡ ವಿಶ್ವಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಸೆಣೆಸಿತ್ತು.