ಸಿಂಹಳೀಯರ ಮುಂದೆ ಮಂಡಿಯೂರಿದ ಅಫ್ಘಾನಿಸ್ತಾನ – ಸೂಪರ್ 4ಗೆ ಹಂತಕ್ಕೇರಿದ ಶ್ರೀಲಂಕಾ

ಏಷ್ಯಾಕಪ್ನಲ್ಲಿ ಗರಿಷ್ಠ ಮೊತ್ತವನ್ನ ಯಶಸ್ವಿಯಾಗಿ ಚೇಸ್ ಮಾಡಿದ ಶ್ರೀಲಂಕಾ ತಂಡ ಸೂಪರ್ 4ಗೆ ಅಜೇಯವಾಗಿ ಅರ್ಹತೆ ಪಡೆದುಕೊಂಡಿದೆ. ಮತ್ತೊಂದೆಡೆ ಅಫ್ಘಾನಿಸ್ತಾನ 3ರಲ್ಲಿ ಕೇವಲ 1 ಗೆಲುವಿನೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ.
ಇದನ್ನೂ ಓದಿ:ಬಲಿಷ್ಠ ಭಾರತ.. ಬಲವಿಲ್ಲದ ಪಾಕ್ – ಸೂಪರ್ 4ನಲ್ಲೂ ಇಂಡಿಯಾ ವಿನ್
ಅಫ್ಘಾನಿಸ್ತಾನ ನೀಡಿದ್ದ 170 ರನ್ಗಳ ಗುರಿಯನ್ನ ಬೆನ್ನಟ್ಟಿದ ಶ್ರೀಲಂಕಾ ತಂಡ 18.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿದೆ. ಈ ಮೂಲಕ ಶ್ರೀಲಂಕಾ ತಂಡ, ಅಗ್ರ ತಂಡವಾಗಿ ಸೂಪರ್ 4 ಹಂತಕ್ಕೆ ಏರಿದೆ. ಕುಸಾಲ್ ಮೆಂಡಿಸ್ ಸಿಡಿಸಿದ ಅರ್ಧಶತಕದ ನೆರವಿನಿಂದ ಶ್ರೀಲಂಕಾ ತಂಡ ಈ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನ್, ಲಂಕಾ ಬೌಲರ್ಗಳ ದಾಳಿಗೆ ಸಿಲುಕಿ ಪವರ್ ಪ್ಲೇ ಒಳಗೆ 3 ವಿಕೆಟ್ ಕಳೆದುಕೊಂಡಿತು. ರಹ್ಮಾನುಲ್ಲಾ ಗುರ್ಬಜ್ (14) ಕರಿಮ್ ಜನತ್ (1), ಸೆದಿಕುಲ್ಲಾ ಅಟಲ್ (18) ವಿಕೆಟ್ ಕಳೆದುಕೊಂಡಿತು. ಕೊನೆಗೂ 170 ರನ್‌ಗಳನ್ನು ಸೇರಿಸಿತು.
ನಂತರ ಬ್ಯಾಟಿಂಗ್ ಗೆ ಬಂದ ಶ್ರೀಲಂಕಾ ತಂಡ 22 ರನ್ಗಳಾಗುವಷ್ಟರಲ್ಲಿ ಪಾತುಮ್ ನಿಸ್ಸಾಂಕ(6) ವಿಕೆಟ್ ಕಳೆದುಕೊಂಡಿತು. ನಂತರ ಬಂದ ಕಮಿಲ್ ಮಿಶಾರ 10 ಎಸೆತಗಳಲ್ಲಿ ಕೇವಲ 4 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ 3ನೇ ವಿಕೆಟ್ಗೆ ಜೊತೆಯಾದ ಕುಸಾಲ್ ಮೆಂಡಿಸ್ ಹಾಗೂ ಕುಸಾಲ್ ಪೆರೆರಾ 46 ರನ್ಗಳ ಜೊತೆಯಾಟ ನಡೆಸಿ ಶ್ರೀಲಂಕಾ ತಂಡ ಕಮ್ಬ್ಯಾಕ್ ಮಾಡುವಂತೆ ಮಾಡಿದರು. ಕುಸಾಲ್ ಪರೆರಾ 20 ಎಸೆತಗಳಲ್ಲಿ 3 ಬೌಂಡರಿ ಸಹಿತ 28 ರನ್ಗಳಿಸಿ ಮುಜೀಬ್ ಉರ್ ರೆಹಮಾನ್ ಬೌಲಿಂಗ್ನಲ್ಲಿ ಔಟ್ ಆದರು. ನಂತರ ಬಂದ ನಾಯಕ ಅಸಲಂಕಾ ಕುಸಾಲ್ ಮೆಂಡಿಸ್ ಜೊತೆಗೂಡಿ 4ನೇ ವಿಕೆಟ್ ಜೊತೆಯಾಟದಲ್ಲಿ 27 ರನ್ ಸೇರಿಸಿದರು. ಅಸಲಂಕಾ 12 ಎಸೆತಗಳಲ್ಲಿ 17 ರನ್ಗಳಿಸಿ ವಿಕೆಟ್ ಒಪ್ಪಿಸಿದರು. 5ನೇ ವಿಕೆಟ್ಗೆ ಕುಸಾಲ್ ಮೆಂಡಿಸ್ ಜೊತೆಯಾದ ಕಮಿಂದು ಮೆಂಡಿಸ್ ಕೇವಲ 23 ಎಸೆತಗಳಲ್ಲಿ 52 ರನ್ಗಳ ಜೊತೆಯಾಟ ನೀಡಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು. ಕುಸಾಲ್ 52 ಎಸೆತಗಳಲ್ಲಿ 10 ಬೌಂಡರಿಗಳ ಸಹಿತ ಅಜೇಯ 74 ರನ್ಗಳಿಸಿದರೆ, ಕಮಿಂದು ಮೆಂಡಿಸ್ 13 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 26 ರನ್ಗಳಿಸಿ ಗೆಲುವಿನ ರೂವಾರಿಯಾದರು.
ಈ ಗೆಲುವಿನೊಂದಿಗೆ ಶ್ರೀಲಂಕಾ ಗುಂಪು ಹಂತದಲ್ಲಿ ಎಲ್ಲಾ 3 ಪಂದ್ಯಗಳನ್ನ ಗೆದ್ದು ಸೂಪರ್ 4 ಹಂತಕ್ಕೆ ಪ್ರವೇಶಿಸಿದರೆ, ಅಫ್ಘಾನಿಸ್ತಾನ 3ರಲ್ಲಿ ಕೇವಲ 1 ಗೆಲುವಿನೊಂದಿಗೆ ಟೂರ್ನಿಯಿಂದ ಹೊರಬಿದ್ದಿತು. ಅಫ್ಘಾನಿಸ್ತಾನದ ಪರ ನೂರ್ ಅಹ್ಮದ್ 37ಕ್ಕೆ1, ಮುಜೀಬ್ 42ಕ್ಕೆ1, ಮೊಹಮ್ಮದ್ ನಬಿ 20ಕ್ಕೆ1 ವಿಕೆಟ್ ಪಡೆದರು. ನಿರ್ಣಾಯಕ ಪಂದ್ಯದಲ್ಲಿ ಅಫ್ಘಾನ್ ಬೌಲರ್ಗಳು ಉತ್ತಮ ಬೌಲಿಂಗ್ ಪ್ರದರ್ಶನ ತೋರಲಿಲ್ಲ. ರಶೀದ್ 4 ಓವರ್‌ಗಳಲ್ಲಿ ಕೇವಲ 23 ರನ್ ನೀಡಿದರಾದರೂ ವಿಕೆಟ್ ಪಡೆಯುವಲ್ಲಿ ವಿಫಲರಾದರು.

ನೋಡಿರಿ

